For Quick Alerts
  ALLOW NOTIFICATIONS  
  For Daily Alerts

  "ತಲೆಗೆ ಹಾಕೊಳಲ್ಲ.. ನೊಂದುಕೊಳ್ಳಲ್ಲ.. ಬೇಜಾರು ಮಾಡಿಕೊಳ್ಳಲ್ಲ.. ಕಾಲರ್ ಎತ್ಕೊಂಡೇ ಓಡಾಡೋಣ"- ದರ್ಶನ್!

  |

  ಇದೂವರೆಗೂ ಬಿಡುಗಡೆಯಾದ 'ಕ್ರಾಂತಿ' ಸಿನಿಮಾದ ಎಲ್ಲಾ ಹಾಡುಗಳು ಸಂಗೀತ ಪ್ರಿಯರಿಗೆ ಕಿಕ್ ಕೊಡುತ್ತಿದೆ. ಮೈಸೂರು, ಹೊಸಪೇಟೆ, ಹುಬ್ಬಳ್ಳಿಯಲ್ಲಿ ಒಂದೊಂದು ಹಾಡನ್ನು ರಿಲೀಸ್ ಮಾಡಲಾಗಿದೆ.

  ಆದರೆ, ಹೊಸಪೇಟೆಯಲ್ಲಿ ಹಾಡನ್ನು ರಿಲೀಸ್ ಮಾಡುವ ವೇಳೆ ಕಿಡಿಗೇಡಿಗಳು ದರ್ಶನ್ ಮೇಲೆ ಚಪ್ಪಲಿ ಎಸೆದಿದ್ದರು. ಈ ಘಟನೆ ನಡೆದ ಬಳಿಕವೂ ದರ್ಶನ್ ಒಂದೇ ಒಂದು ಮಾತಾಡಿರಲಿಲ್ಲ. ಈಗ ಹುಬ್ಬಳ್ಳಿಯಲ್ಲಿ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ.

  ಹುಬ್ಬಳ್ಳಿಯಲ್ಲಿ ದರ್ಶನ್ ನೋಡಲು ಜನರು ಕಿಕ್ಕಿರಿದು ಸೇರಿದ್ದರು. ಇವರ ಮಧ್ಯದಲ್ಲೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೊಸಪೇಟೆಯಲ್ಲಿ ನಡೆದ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

  'ನಾವು ತಲೆಗೂ ಹಾಕಿಕೊಳ್ಳುವುದಿಲ್ಲ'

  'ನಾವು ತಲೆಗೂ ಹಾಕಿಕೊಳ್ಳುವುದಿಲ್ಲ'

  ಹೊಸಪೇಟೆಯ ಘಟನೆಗೆ ಸಂಬಂಧಿಸಿದಂತೆ ಬೆಂಬಲ ನೀಡಿದವರಿಗೆ ದರ್ಶನ್ ಧನ್ಯವಾದಗಳನ್ನು ಅರ್ಪಿಸಿದ್ದರು. ಅದು ಬಿಟ್ಟರೆ, ದರ್ಶನ್ ಚಪ್ಪಲಿ ಎಸೆತದ ಬಗ್ಗೆ ಪ್ರತಿಕ್ರಿಯೆ ನೀಡಲು ಹೋಗಿರಲಿಲ್ಲ. ಆದ್ರೀಗ ಹುಬ್ಬಳ್ಳಿಯಲ್ಲಿ ಶಾರ್ಟ್ ಅಂಡ್ ಸ್ವೀಟ್ ಆಗಿ ರಿಯಾಕ್ಷನ್ ನೀಡಿದ್ದಾರೆ. "ಯಾರು ಏನೇ ಮಾಡಲಿ. ಹಾಳು ಮಾಡೋಕೆ ಒಂದು ಜನ ಇದ್ರೂ, ಕಾಪಾಡುವುದಕ್ಕೆ ನಿಮ್ಮಂತಹ ಸಾವಿರಾರು ಜನ ಇದ್ದಾರೆ. ಇದರ ಮೇಲೆ ನೋಡಿಕೊಳ್ಳೋಣ. ನಿನ್ನೆ ಬಿದ್ದಿರೋದಕ್ಕೆ ಇವತ್ತು ಹೂವಿನಲ್ಲಿ ಮುಳುಗಿಸಿದ್ರಾ? ಇದಕ್ಕಿಂತ ಬೇಕಾ? ಇದಕ್ಕಿಂತ ಬೇಕೆನಪ್ಪಾ? ಅದ್ಯಾವುದು ನಾವು ತಲೆಗೂ ಹಾಕಿಕೊಳ್ಳೋದಿಲ್ಲ. " ಎಂದು ಹೇಳಿದ್ದಾರೆ.

  'ಕಾಲರ್ ಎತ್ಕೊಂಡು ಓಡಾಡೋಣ'

  'ಕಾಲರ್ ಎತ್ಕೊಂಡು ಓಡಾಡೋಣ'

  " ನೀವು ಏನೇ ಮಾಡಿದ್ರೂ ನಾವು ತಲೆಗೂ ಹಾಕಿಕೊಳ್ಳಲ್ಲ. ನೊಂದುಕೊಳ್ಳಲ್ಲ. ಬೇಜಾರು ಮಾಡಿಕೊಳ್ಳಲ್ಲ. ಹಿಂಗೆ (ಕಾಲರ್) ಅಂದ್ಕೊಂಡೇ ಓಡಾಡೋಣ. ಇನ್ನೂ ಒಂದು ಸ್ಟೆಪ್ ಮುಂದಕ್ಕೆ ಹೋಗಿ ಉರಿಸಬೇಕು ಅಂದ್ರೆ, ಇನ್ನೂ ಜಾಸ್ತಿ ಉರಿಸೋಣ. ನಾವು ಮಾತಾಡೋದು ಬೇಡ. ನಮ್ಮ ಕೆಲಸ ಮಾತಾಡಲಿ ಅಂತಾನೇ ನಾನು ಬಯಸೋದು." ಎಂದು ದರ್ಶನ್ ಪರೋಕ್ಷವಾಗಿ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.

  ಚಾಲೆಂಜಿಂಗ್ ಸ್ಟಾರ್ ಧನ್ಯವಾದ

  ಚಾಲೆಂಜಿಂಗ್ ಸ್ಟಾರ್ ಧನ್ಯವಾದ

  ದರ್ಶನ್ ಮೇಲೆ ಚಪ್ಪಲಿ ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡೀ ಸ್ಯಾಂಡಲ್‌ವುಡ್ ಅವರ ಪರವಾಗಿ ನಿಂತಿತ್ತು. ಕಿಚ್ಚ ಸುದೀಪ್, ಶಿವರಾಜ್‌ಕುಮಾರ್ ಸೇರಿದಂತೆ ದಿಗ್ಗಜರೆಲ್ಲಾ ದರ್ಶನ್ ಬೆಂಬಲಕ್ಕೆ ನಿಂತಿದ್ದರು. ಅವರೆಲ್ಲರಿಗೂ ದರ್ಶನ್ ಧನ್ಯವಾದಗಳನ್ನು ಅರ್ಪಿಸಿದ್ದರು. ಎಲ್ಲಕ್ಕಿಂತ ಹೆಚ್ಚಾಗಿ ದರ್ಶನ್ ನಟಿ ಕಿಚ್ಚ ಸುದೀಪ್‌ಗೆ ಧನ್ಯವಾದಗಳನ್ನು ಹೇಳಿದ್ದು ಸೋಶಿಯಲ್ ಮೀಡಿಯಾದಲ್ಲಿ ಜೋರಾಗಿ ಚರ್ಚೆಯಾಗಿತ್ತು.

  ಬೆಂಗಳೂರಿನಲ್ಲಿ 'ಕ್ರಾಂತಿ' ಟ್ರೈಲರ್

  ಬೆಂಗಳೂರಿನಲ್ಲಿ 'ಕ್ರಾಂತಿ' ಟ್ರೈಲರ್

  ಹೊಸಪೇಟೆ ಪ್ರಕರಣದ 'ಕ್ರಾಂತಿ' ಸಿನಿಮಾದ ಟ್ರೈಲರ್ ಅನ್ನು ಅಲ್ಲೇ ರಿಲೀಸ್ ಮಾಡುವಂತೆ ಒತ್ತಡ ಹಾಕಿದ್ದರು. ಆದರೆ, ದರ್ಶನ್‌ ಟ್ರೈಲರ್ ರಿಲೀಸ್ ಬಗ್ಗೆ ಹುಬ್ಬಳ್ಳಿಯಲ್ಲೇ ಮಾಹಿತಿಯನ್ನು ನೀಡಿದ್ದಾರೆ. ಬೆಂಗಳೂರಿನಲ್ಲಿಯೇ ಸಿನಿಮಾದ ಟ್ರೈಲರ್ ರಿಲೀಸ್ ಆಗುತ್ತೆ ಅಂತ ಹೇಳಿದ್ದಾರೆ. ಅಂದು ಇಡೀ ಚಿತ್ರತಂಡ ಇರಲಿದ್ದು, ಅವರಿಗಾಗಿಯೇ ಬೆಂಗಳೂರಿನಲ್ಲಿ ಟ್ರೈಲರ್ ರಿಲೀಸ್ ಆಗುತ್ತೆ ಎಂದು ಮಾಹಿತಿ ನೀಡಿದ್ದಾರೆ.

  English summary
  Darshan Gave Reaction On Slipper Incident In Hubli While Song Release, Know More.
  Sunday, December 25, 2022, 23:31
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X