»   » 'ಭರ್ಜರಿ' ಚಿತ್ರವನ್ನು ದರ್ಶನ್ ಅಭಿಮಾನಿಗಳು ನೋಡಲೇಬೇಕು! ಏಕೆ?

'ಭರ್ಜರಿ' ಚಿತ್ರವನ್ನು ದರ್ಶನ್ ಅಭಿಮಾನಿಗಳು ನೋಡಲೇಬೇಕು! ಏಕೆ?

Posted By:
Subscribe to Filmibeat Kannada

'ಅದ್ಧೂರಿ' ಧ್ರುವ ಸರ್ಜಾ ನಟನೆಯ 'ಭರ್ಜರಿ' ಚಿತ್ರ ಸ್ಯಾಂಡಲ್‌ ವುಡ್‌ ನಲ್ಲಿ ಹಲವು ದಿನಗಳಿಂದ ಹಲವು ವಿಶೇಷತೆಗಳಿಂದ ಸದ್ದು ಮಾಡುತ್ತಿದೆ. ಅಲ್ಲದೆ ಈ ಚಿತ್ರಕ್ಕಾಗಿ ಧ್ರುವ ಸರ್ಜಾ ಅಭಿಮಾನಿಗಳು ತುದಿಗಾಲಲ್ಲಿ ಕಾದು ಕುಳಿತಿದ್ದಾರೆ. ಆದರೆ ಇದೀಗ ತಿಳಿದಿರುವ ಲೇಟೆಸ್ಟ್ ಮಾಹಿತಿಯನ್ನು ಕೇಳಿದರೆ ಬಾಕ್ಸ್ ಆಫೀಸ್ ಸುಲ್ತಾನ್ ದರ್ಶನ್ ರವರ ಅಭಿಮಾನಿಗಳು ಈ ಚಿತ್ರವನ್ನು ಮಿಸ್ ಮಾಡದೇ ನೋಡಲೇಬೇಕಾಗಿದೆ.

'ಭರ್ಜರಿ' ಚಿತ್ರತಂಡದಿಂದ ಬಂದಿರುವ ಬಿಗ್ ನ್ಯೂಸ್‌ ಇದು

ಹೌದು, ಯಾಕಂದ್ರೆ ಬಹು ನಿರೀಕ್ಷಿತ 'ಭರ್ಜರಿ' ಸಿನಿಮಾದಲ್ಲಿ 'ದಾಸ' ದರ್ಶನ್ ರವರ ಧ್ವನಿಯ ಲೇಪನವಿದೆಯಂತೆ. ಡಿ ಬಾಸ್ ಈ ಚಿತ್ರಕ್ಕೆ ತಮ್ಮ ಖಡಕ್ ಧ್ವನಿಯನ್ನು ನೀಡಿದ್ದು, ಬೆಳ್ಳಿತೆರೆಯ ಮೇಲೆ 'ಭರ್ಜರಿ' ಕಥೆ ದರ್ಶನ್ ರವರ ಹಿನ್ನೆಲೆ ಧ್ವನಿಯಿಂದ ಶುರುವಾಗಲಿದೆಯಂತೆ. ಈ ಬಗ್ಗೆ ದರ್ಶನ್ ಅಭಿಮಾನಿಗಳ ಅಧಿಕೃತ ಟ್ವಿಟ್ಟರ್ ಫ್ಯಾನ್‌ ಪೇಜ್ ಡಿಕಂಪನಿ ಟ್ವೀಟ್ ಮಾಡಿದೆ.

Darshan gave voice for Dhruva Sarja starrer 'Bharjari' movie

ಈ ಹಿನ್ನೆಲೆಯಿಂದ ಈಗ 'ಭರ್ಜರಿ' ಚಿತ್ರದ ಬಗ್ಗೆ ಇನ್ನಷ್ಟು ಕುತೂಹಲ ಭರ್ಜರಿಯಾಗಿಯೇ ಹೆಚ್ಚಾಗಿದೆ. ದರ್ಶನ್ ಅಭಿಮಾನಿಗಳು ಅವರ ಖಡಕ್ ಧ್ವನಿಯನ್ನು ಧ್ರುವ ಸರ್ಜಾ ಅಭಿನಯದ 'ಭರ್ಜರಿ' ಚಿತ್ರದಲ್ಲೂ ಕೇಳುವ ಅಭಿಲಾಷೆ ಇದ್ದಲ್ಲಿ ಈ ಸಿನಿಮಾವನ್ನು ಮಿಸ್ ಮಾಡದೇ ವೀಕ್ಷಿಸಲೇಬೇಕಾಗಿದೆ.

Darshan gave voice for Dhruva Sarja starrer 'Bharjari' movie

ಅಂದಹಾಗೆ 'ಭರ್ಜರಿ' ಚಿತ್ರದ ಆಡಿಯೋ ಸದ್ಯದಲ್ಲೇ ಬಿಡುಗಡೆ ಆಗಲಿದೆ. 'ಬಹದ್ಧೂರ್' ಚೇತನ್ ನಿರ್ದೇಶನದ ಈ ಚಿತ್ರದಲ್ಲಿ ಧ್ರುವ ಸರ್ಜಾ ಗೆ ರಚಿತಾ ರಾಮ್ ಜೊತೆಯಾಗಿ ನಟಿಸಿದ್ದಾರೆ. ಆಕ್ಷನ್ ಮತ್ತು ಲವ್ ಸ್ಟೋರಿ ಹೊಂದಿರುವ ಈ ಚಿತ್ರದಲ್ಲಿ 'ನೀರ್‌ದೋಸೆ' ಖ್ಯಾತಿಯ ಹರಿಪ್ರಿಯಾ ರವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

8 ವಿಭಿನ್ನ ಸೆಟ್ ನಲ್ಲಿ ಧ್ರುವ ಸರ್ಜಾ ಇಂಟ್ರೊಡಕ್ಷನ್ ಸಾಂಗ್

English summary
Challenging Star Darshan given Voice for Dhruva Sarja starrer 'Bharjari' movie. The movie is directs by Chetan.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada