»   » ಅರಣ್ಯ ರಕ್ಷಣೆಗೆ ಮುಂದಾದ ಚಾಲೆಂಜಿಂಗ್ ಸ್ಟಾರ್ ದರ್ಶನ್

ಅರಣ್ಯ ರಕ್ಷಣೆಗೆ ಮುಂದಾದ ಚಾಲೆಂಜಿಂಗ್ ಸ್ಟಾರ್ ದರ್ಶನ್

Posted By:
Subscribe to Filmibeat Kannada
ಅರಣ್ಯ ರಕ್ಷಣೆಗೆ ಮುಂದಾದ ಚಾಲೆಂಜಿಂಗ್ ಸ್ಟಾರ್ ದರ್ಶನ್ | Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾರಂಗದಲ್ಲಿ ನಂ ಒನ್ ಸ್ಟಾರ್ ಗಳ ಸಾಲಿನಲ್ಲಿ ಗುರುತಿಸಿಕೊಂಡಿರುವ ನಟ. ಕಲಾವಿದ ಅಂದ ಮಾತ್ರಕ್ಕೆ ಕೇವಲ ಸಿನಿಮಾಗಳಲ್ಲಿ ಅಭಿನಯಿಸುವುದಷ್ಟೇ ಅಲ್ಲ, ಮನಸ್ಸಿಗೆ ಇಷ್ಟವಾಗುವ ಕೆಲಸಗಳನ್ನೂ ಮಾಡಬೇಕು ಎನ್ನುವ ಮನಸ್ಸಿರುವ ನಟ. ಎಲ್ಲರಿಗೂ ತಿಳಿದಿರುವಂತೆ ದರ್ಶನ್ ಪ್ರಾಣಿ ಪ್ರಿಯ ತಮ್ಮ ಮನೆ ಹಾಗೂ ಫಾರ್ಮ್ ಹೌಸ್ ನಲ್ಲಿ ಸಾಕಷ್ಟು ಪ್ರಾಣಿ ಪಕ್ಷಿಗಳನ್ನ ಸಾಕಿಕೊಂಡಿದ್ದಾರೆ.

ದರ್ಶನ್ ಅರಣ್ಯ ರಕ್ಷಣೆಗೆ ಮುಂದಾಗಿದ್ದಾರೆ. ಈಗಾಗಲೇ ಒತ್ತುವರಿ ವಿಚಾರದಲ್ಲಿ ಅರಣ್ಯವೆಲ್ಲಾ ನಾಶವಾಗಿ ಹೋಗಿದೆ. ಬೇಸಿಗೆ ಬಂತು ಅಂದರೆ ಕಡ್ಗಿಚ್ಚಿನ ರೂಪದಲ್ಲಿ ಇರುವ ಅರಣ್ಯವೂ ನಾಶವಾಗುತ್ತದೆ. ಆದ್ದರಿಂದ ಅರಣ್ಯ ಇಲಾಖೆ ದರ್ಶನ್ ಅವರಿಂದ ರಾಜ್ಯದ ಜನತೆಗೆ ಈ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಿದೆ.

ದರ್ಶನ್ ಮನೆಯಂಗಳದಲ್ಲಿ ಮತ್ತೊಂದು ಹೊಸ ಕಾರು

ದರ್ಶನ್ ಅವರಿಂದ ವಿಡಿಯೋ ಬೈಟ್ ತೆಗೆದುಕೊಂಡು ಕಾಡಿನ ರಕ್ಷಣೆ ಹೇಗೆ ಮಾಡುವುದು ಎನ್ನುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅರಿವು ಮೂಡಿಸುವ ಕೆಲಸಕ್ಕೆ ಚಾಲನೆ ನೀಡಿದೆ. ದರ್ಶನ್ ಅವರ ವಿಡಿಯೋ ಸಾಕಷ್ಟು ವೈರಲ್ ಆಗಿತ್ತು ಜನರು ಕೂಡ ತಮ್ಮ ಸುತ್ತ ಮುತ್ತಲಿನ ಪರಿಸರದ ಬಗ್ಗೆ ಕಾಳಜಿ ವಹಿಸುತ್ತಿದ್ದಾರೆ.

Darshan has been part of the c to save the forest

ವಿಡಿಯೋದಲ್ಲಿ ದರ್ಶನ್ "ಕಾಡಿನಲ್ಲಿ ಒಂದು ಮರ ಬೆಳೆದರೆ ನಾಡಿನಲ್ಲಿ ಒಂದು ಮಗು ಬದುಕುತ್ತದೆ. ಕಾಡನ್ನ ಬೆಂಕಿಯಿಂದ ರಕ್ಷಿಸಿದರೆ ನಾಡು ಚೆನ್ನಾಗಿರುತ್ತದೆ. ಬನ್ನಿ ಕಾಡನ್ನ ಬೆಂಕಿಯಿಂದ ರಕ್ಷಿಸೋಣ ದೇಶ ಕಾಯೋಣ" ಎಂದಿದ್ದಾರೆ.

ಕಲಾವಿದರು ಎಂದರೆ ಕೇವಲ ತೆರೆ ಮೇಲೆ ರಂಜಿಸುವುದಷ್ಟೇ ಕೆಲಸವಲ್ಲ ಎನ್ನುವುದನ್ನ ತಿಳಿದುಕೊಂಡಿರುವ ಅಧಿಕಾರಿಗಳು ಪರಿಸರ ಉಳಿವಿಗೂ ಅವರನ್ನ ಬಳಸಿಕೊಳ್ಳುತ್ತಿರುವುದು ಖುಷಿಯ ವಿಚಾರ.

ಪುನೀತ್, ದರ್ಶನ್, ಉಪ್ಪಿ, ಶಿವಣ್ಣ, ಸುದೀಪ್ ಮದುವೆ ದಿನ ಹೇಗೆ ಕಾಣ್ತಿದ್ರು.?

English summary
Kannada actor Darshan has been part of the campaign to save the forest, thus making people aware of how to keep the forest in the summer.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada