»   » 'ತಾರಕ್' ಸಿನಿಮಾ ಗೆದ್ದ ಖುಷಿಯನ್ನು ಹಂಚಿಕೊಂಡ ದಾಸ ದರ್ಶನ್

'ತಾರಕ್' ಸಿನಿಮಾ ಗೆದ್ದ ಖುಷಿಯನ್ನು ಹಂಚಿಕೊಂಡ ದಾಸ ದರ್ಶನ್

Posted By:
Subscribe to Filmibeat Kannada
Darshan Tweet Thanks To His Fans After Success Tarak Movie | Filmibeat Kannada

ನಟ ದರ್ಶನ್ ಮತ್ತೆ ಬಾಕ್ಸ್ ಆಫೀಸ್ ಸುಲ್ತಾನ್ ಎನ್ನುವುದನ್ನು ಸಾಬೀತು ಮಾಡಿದ್ದಾರೆ. ಅವರ 'ತಾರಕ್' ಸಿನಿಮಾ ಒಂದು ಕಡೆ ಕೋಟಿ ಕೋಟಿ ಗಳಿಕೆ ಮಾಡುತ್ತಿದ್ದರೆ ಇನ್ನೊಂದು ಕಡೆ ಫ್ಯಾಮಿಲಿ ಆಡಿಯನ್ಸ್ ಕಡೆಯಿಂದ ಕೂಡ ಒಳ್ಳೆಯ ರೆಸ್ಪಾನ್ಸ್ ಪಡುದುಕೊಂಡಿದೆ.

'ತಾರಕ್' ಚಿತ್ರ ನೋಡಿ 'ಒಳ್ಳೆ ಹುಡುಗ' ಪ್ರಥಮ್ ನೀಡಿರುವ ವಿಮರ್ಶೆ ಇದು..

'ತಾರಕ್' ಚಿತ್ರಕ್ಕೆ ಸಿಕ್ಕಿರುವ ಈ ಪ್ರತಿಕ್ರಿಯೆ ಕಂಡು ದರ್ಶನ್ ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ. ಜೊತೆಗೆ ಇದೇ ವೇಳೆ ದರ್ಶನ್ ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ಸಂತಸವನ್ನು ಹಂಚಿಕೊಂಡಿದ್ದಾರೆ. ''ನಿಮ್ಮ ಪ್ರೀತಿ - ಅಭಿಮಾನ - ಪ್ರೋತ್ಸಾಹಕ್ಕೆ ಈ ನಿಮ್ಮ ದಾಸ ಯಾವಾಗ್ಲೂ ಚಿರಋಣಿ. ತಾರಕ್ ರಾಮ್, ಎಲ್ಲರೂ ಪ್ರೀತಿಯಿಂದ 'ತಾರಕ್' ಅಂತ ಕರೀತಾರೆ'' ಎಂದು ದರ್ಶನ್ ಟ್ವೀಟ್ ಮಾಡಿ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ.

ಕಳೆದ ಶುಕ್ರವಾರ ತೆರೆಗೆ ಬಂದಿರುವ 'ತಾರಕ್' ಚಿತ್ರ ರಾಜ್ಯಾದಂತ್ಯ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ತಾತ ಮತ್ತು ಮೊಮ್ಮಗನ ನಡುವಿನ ಕಥೆ ಚಿತ್ರದಲ್ಲಿದ್ದು, ಒಂದೊಳ್ಳೆ ಕೌಟುಂಬಿಕ ಸಿನಿಮಾ ಎಂದು ಕರೆಸಿಕೊಂಡಿದೆ. ನಿರ್ದೇಶಕ ಪ್ರಕಾಶ ಮತ್ತೆ ಈ ಚಿತ್ರದ ಮೂಲಕ ಗೆದ್ದಿದ್ದಾರೆ. ಶಾನ್ವಿ ಶ್ರೀವಾಸ್ತವ್ ಮತ್ತು ಶ್ರುತಿ ಹರಿಹರನ್ ಅಭಿನಯಕ್ಕೂ ಮೆಚ್ಚುಗೆ ವ್ಯಕ್ತವಾಗಿದೆ.

English summary
Challenging Star Darshan has taken his twitter account to thank his fans.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X