For Quick Alerts
  ALLOW NOTIFICATIONS  
  For Daily Alerts

  ಅಮೂಲ್ಯ ಪತಿ ಜಗದೀಶ್ ಗೆ ಸರ್ಪ್ರೈಸ್ ಕೊಟ್ಟ ದಾಸ ದರ್ಶನ್

  |

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಂದ್ರೆ ನಟಿ ಅಮೂಲ್ಯಗೆ ಎಲ್ಲಿಲ್ಲದ ಅಕ್ಕರೆ. ದರ್ಶನ್ ಗೂ ಕೂಡ ಅಮೂಲ್ಯ ಅಂದ್ರೆ ಅಷ್ಟೇ ಪ್ರೀತಿ. ಅಮೂಲ್ಯ ಬಾಲನಟಿಯಾಗಿದ್ದಾಗನಿಂದಲೂ ಡಿ ಬಾಸ್ ಜೊತೆಗಿನ ನಂಟು ಹಾಗೇ ಇದೆ. ಅಮೂಲ್ಯ ಕುಟುಂಬದ ಜೊತೆ ಇಂತಹ ಒಳ್ಳೆಯ ಬಾಂಧವ್ಯ ಹೊಂದಿರುವ ದರ್ಶನ್, ಅಮೂಲ್ಯ ಪತಿಗೆ ಸರ್ಪ್ರೈಸ್ ನೀಡಿದ್ದಾರೆ.

  ಇತ್ತೀಚಿಗಷ್ಟೆ ಅಮೂಲ್ಯ ಅವರ ಪತಿ ಜಗದೀಶ್ ಗೌಡ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಈ ಸೆಲೆಬ್ರೇಷನ್ ನಲ್ಲಿ ಕನ್ನಡದ ಕೆಲವು ತಾರೆಯರು ಸೇರಿದಂತೆ ಅಮೂಲ್ಯ ಫ್ರೆಂಡ್ಸ್ ಭಾಗಿಯಾಗಿದ್ದರು.

  'ಕೆಜಿಎಫ್'ಗಾಗಿ 25 ಟಿಕೆಟ್ ಬುಕ್ ಮಾಡಿದ ಅಮೂಲ್ಯ

  ಈ ಪಾರ್ಟಿಗೆ ಸರ್ಪ್ರೈಸ್ ಆಗಿ ಎಂಟ್ರಿಕೊಟ್ಟ ದರ್ಶನ್, ಅಮೂಲ್ಯ ಪತಿಗೆ ಶಾಕ್ ನೀಡಿದ್ದಾರೆ. ಈ ಬಗ್ಗೆ ಸ್ವತಃ ಜಗದೀಶ್ ಮತ್ತು ಅಮೂಲ್ಯ ತಮ್ಮ ಟ್ವಿಟ್ಟರ್ ನಲ್ಲಿ ಫೋಟೋ ಸಮೇತ ಖುಷಿ ಹಂಚಿಕೊಂಡಿದ್ದಾರೆ. ಫೋಟೋಗಳನ್ನ ಮುಂದೆ ಓದಿ.....

  ಚಿತ್ರಕೃಪೆ: SKYLAMP PRODUCTIONS

  ಅಮೂಲ್ಯ ಪತಿ ಬರ್ತಡೇಯಲ್ಲಿ ಡಿ ಬಾಸ್

  ಅಮೂಲ್ಯ ಪತಿ ಬರ್ತಡೇಯಲ್ಲಿ ಡಿ ಬಾಸ್

  ನಟಿ ಅಮೂಲ್ಯ ಅವರ ಪತಿ ಜಗದೀಶ್ ಬರ್ತಡೇಗೆ ಡಿ ಬಾಸ್ ಸ್ಪೆಷಲ್ ಅತಿಥಿಯಾಗಿ ಆಗಮಿಸಿದ್ದರು. ಜಗದೀಶ್ ಅವರ ಜೊತೆ ಕೇಕ್ ಕತ್ತರಿಸಿ ಸಂಭ್ರಮಿಸಿದರು. ಅಮೂಲ್ಯ ಮತ್ತು ಜಗದೀಶ್ ಇಬ್ಬರೂ ದರ್ಶನ್ ಗೆ ಕೇಕ್ ತಿನ್ನಿಸಿ ಖುಷಿ ಪಟ್ಟರು.

  ಅಮೂಲ್ಯ ಹುಟ್ಟುಹಬ್ಬವನ್ನು ಆಚರಿಸಿದ ದರ್ಶನ್ ದಂಪತಿ

  ಶಿಲ್ಪಾ ಗಣೇಶ್, ಹರ್ಷಿಕಾ ಭಾಗಿ

  ಶಿಲ್ಪಾ ಗಣೇಶ್, ಹರ್ಷಿಕಾ ಭಾಗಿ

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಎಂಟ್ರಿಯನ್ನ ಸ್ಪೆಷಲ್ ಆಗಿರಿಸಿದ್ದ ಅಮೂಲ್ಯ ತಮ್ಮ ಪತಿಗೆ ಸರ್ಪ್ರೈಸ್ ನೀಡಿದ್ದರು. ಉಳಿದಂತೆ ಶಿಲ್ಪಾ ಗಣೇಶ್, ಬಿಗ್ ಬಾಸ್ ಭುವನ್ ಗೌಡ, ಹರ್ಷಿಕಾ ಪೂಣಚ್ಛಾ, ಪ್ರಿಯಾಂಕಾ ಉಪೇಂದ್ರ ಸೇರಿದಂತೆ ಹಲವು ಪಾಲ್ಗೊಂಡಿದ್ದರು.

  ಪ್ಯಾರಿಸ್ ನಲ್ಲಿ ನಟಿ ಅಮೂಲ್ಯ ಏನ್ ಮಾಡ್ತಿದ್ದಾರೆ?

  ದರ್ಶನ್ ಜೊತೆ ಸಿನಿಮಾ?

  ದರ್ಶನ್ ಜೊತೆ ಸಿನಿಮಾ?

  ಮದ್ವೆ ಆದ್ಮೇಲೆ ಬ್ರೇಕ್ ತೆಗೆದುಕೊಂಡಿರುವ ನಟಿ ಅಮೂಲ್ಯ ಕಂಬ್ಯಾಕ್ ಗಾಗಿ ಕಾಯ್ತಿದ್ದಾರೆ. ಸದ್ಯದ ಮೂಲಗಳ ಪ್ರಕಾರ, ದರ್ಶನ್ ಸಿನಿಮಾದಲ್ಲಿ ನಟಿಸುವ ಸಾಧ್ಯತೆ ಇದೆ ಎಂದು ಹೇಳಲಾಗ್ತಿದೆ. ತಮಿಳಿನ ವೇದಾಲಂ ಚಿತ್ರದ ರೀಮೇಕ್ ನಲ್ಲಿ ದರ್ಶನ್ ಗೆ ತಂಗಿ ಪಾತ್ರದಲ್ಲಿ ನಟಿಸಲು ಅಮೂಲ್ಯಗೆ ಆಫರ್ ನೀಡಲಾಗಿದೆಯಂತೆ. ಆದ್ರೆ, ಈ ಸಿನಿಮಾ ಅಂತಿಮವಾಗಿಲ್ಲ.

  ಚುನಾವಣೆಗೆ ರೆಡಿ ಆದ್ರು ಅಮೂಲ್ಯ

  ಚುನಾವಣೆಗೆ ರೆಡಿ ಆದ್ರು ಅಮೂಲ್ಯ

  ಈ ಮಧ್ಯೆ ಲೋಕಸಭೆ ಚುನಾವಣೆಯಲ್ಲಿ ನಟಿ ಅಮೂಲ್ಯ ಸ್ಪರ್ಧೆ ಮಾಡಲಿದ್ದಾರೆ ಎಂಬ ಮಾತುಗಳು ಕೇಳಿಬರ್ತಿದೆ. ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಅಮೂಲ್ಯ ಕಣಕ್ಕಿಳಿಯಲಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಆದ್ರೆ, ಇದು ಎಷ್ಟು ನಿಜವೋ ಗೊತ್ತಿಲ್ಲ.

  30ನೇ ವರ್ಷದ ಬರ್ತಡೇ ಸಂಭ್ರಮ

  30ನೇ ವರ್ಷದ ಬರ್ತಡೇ ಸಂಭ್ರಮ

  30ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡ ಜಗದೀಶ್ ಅವರಿಗಾಗಿ ಅಮೂಲ್ಯ ವಿಶೇಷವಾದ ಕೇಕ್ ಆರ್ಡರ್ ಮಾಡಿದ್ದರು. ದರ್ಶನ್ ಅವರನ್ನ ಅತಿಥಿಯಾಗಿ ಆಹ್ವಾನಿಸಿದ್ದರು. ಈ ವರ್ಷದ ಹುಟ್ಟುಹಬ್ಬವನ್ನ ಇಷ್ಟು ಸ್ಪೆಷಲ್ ಆಗಿಸಿದ್ದಕ್ಕೆ ಅಮೂಲ್ಯ ಹಾಗೂ ದರ್ಶನ್ ಅವರಿಗೆ ಜಗದೀಶ್ ಥ್ಯಾಂಕ್ಸ್ ಹೇಳಿದ್ದಾರೆ. ಅಮೂಲ್ಯ ಕೂಡ ಡಿ ಬಾಸ್ ಥ್ಯಾಂಕ್ಸ್ ಹೇಳಿದ್ದಾರೆ.

  15 ವರ್ಷದ ನಂತ್ರ ಮತ್ತೆ ಡಿ ಬಾಸ್ ಜೊತೆ ಅಮೂಲ್ಯ

  ಅಮೂಲ್ಯ ಬರ್ತಡೇಯಲ್ಲಿ ದರ್ಶನ್ ದಂಪತಿ

  ಅಮೂಲ್ಯ ಬರ್ತಡೇಯಲ್ಲಿ ದರ್ಶನ್ ದಂಪತಿ

  ಈ ಹಿಂದೆ ಅಮೂಲ್ಯ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಆಗ ದರ್ಶನ್ ಮತ್ತು ಪತ್ನಿ ವಿಜಯಲಕ್ಷ್ಮಿ ಇಬ್ಬರು ಈ ಸಂಭ್ರಮದಲ್ಲಿ ಭಾಗಿಯಾಗಿದ್ದರು.

  English summary
  Challenging star darshan participated in actress amulya husband jagadish birthday party. check in pics.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X