ದರ್ಶನ್ ಸೆರೆಹಿಡಿದ ವನ್ಯಜೀವಿ ಛಾಯಾಚಿತ್ರ ಪ್ರದರ್ಶನಕ್ಕೆ ಚಾಲನೆ
Recommended Video

ವಿಶ್ವ ವನ್ಯಜೀವಿ ದಿನ ಹಿನ್ನೆಲೆ ಮೈಸೂರಿನ ಸಂದೇಶ್ ಪ್ರಿನ್ಸ್ ಹೊಟೆಲ್ನಲ್ಲಿ ಮೂರು ದಿನಗಳ ಕಾಲ ನಟ ದರ್ಶನ್ ಸೆರೆ ಹಿಡಿದ ವನ್ಯಜೀವಿ ಛಾಯಾಚಿತ್ರಗಳ ಪ್ರದರ್ಶನ ಮಾಡಲಾಗುತ್ತಿದೆ.
ದರ್ಶನ್ ಕಾಡಿನಲ್ಲಿ ಸೆರೆ ಹಿಡಿದ 75 ಆಯ್ದ ಛಾಯಾಚಿತ್ರಗಳನ್ನ ಪ್ರದರ್ಶನ ಇಡಲಾಗಿದ್ದು ಇದರಿಂದ ಬಂದ ಹಣವನ್ನ ವನ್ಯಜೀವಿ ಸಂರಕ್ಷಣಾ ನಿಧಿಗೆ ನೀಡಲು ನಿರ್ಧರಿಸಲಾಗಿದೆ.

ದರ್ಶನ್ ತೆಗೆದಿರುವ ವನ್ಯಜೀವಿ ಛಾಯಚಿತ್ರ ಪ್ರದರ್ಶನ ಮಾರಾಟಕ್ಕೆ ಮೃಗಾಲಯ ಪ್ರಾಧಿಕಾರ ಕಾರ್ಯದರ್ಶಿ ಬಿ.ಪಿ.ರವಿ ಚಾಲನೆ ನೀಡಿದ್ದು, ಈ ವೇಳೆ ಚಾಲೆಂಜಿಂಗ್ ಸ್ಟಾರ್ ದರ್ಶನ್, ಅರಣ್ಯ ಅಧಿಕಾರಿಗಳಾದ ಎಡುಕುಂಡಲು, ಮೃಗಾಲಯ ಸಿಇಓ ಅಜಿತ್ ಕುಲಕರ್ಣಿ, ಡಿಎಫ್ ಓಗಳಾದ ಸಿದ್ದರಾಮಪ್ಪ, ಪ್ರಶಾಂತ್ ಸೇರಿ ಹಲವರು ಭಾಗಿಯಾಗಿದ್ದರು.
ದರ್ಶನ್ ತೆಗೆದಿರುವ ಪ್ರತಿ ಚಿತ್ರಕ್ಕೆ 2000 ಬೆಲೆ ನಿಗದಿ ಪಡಿಸಲಾಗಿದ್ದು, ಈ ಪೋಟೋ ಜೊತೆಗೆ ದರ್ಶನ್ ಆಟೋಗ್ರಾಫ್ ಬೇಕು ಅಂದ್ರೆ 500 ಹೆಚ್ಚುವರಿ ಹಣ ನಿಗದಿಗೊಳಿಸಲಾಗಿದೆ. ಮೂರು ದಿನಗಳ ಕಾಲ ಪ್ರದರ್ಶನದ ಜಾಗದಲ್ಲಿ ಇದ್ದು ಸ್ವತಃ ದರ್ಶನ್ ಅವರೇ ಆಟೋಗ್ರಾಫ್ ನೀಡಲಿದ್ದಾರೆ.

ಈ ವೇಳೆ ವಿಂಗ್ ಕಮಾಂಡರ್ ಅಭಿನಂದನ್ ಬಗ್ಗೆ ಮಾತನಾಡಿದ ದರ್ಶನ್ ''ವಿಂಗ್ ಕಮಾಂಡರ್ ಅಭಿನಂದನ್ ನಿಜವಾದ ಹೀರೋ, ನಾವು ಅವರ ಮುಂದೆ ಡಮ್ಮಿ. ಅವರಿಗೆ ನನ್ನ ಸಲ್ಯೂಟ್'' ಎಂದು ಹೆಮ್ಮೆ ವ್ಯಕ್ತಪಡಿಸಿದರು.


Click it and Unblock the Notifications











