For Quick Alerts
  ALLOW NOTIFICATIONS  
  For Daily Alerts

  ಪ್ರಚಾರದಲ್ಲಿ ದರ್ಶನ್ ಗೆ ಹಾಡೇಳುವಂತೆ ವೃದ್ದೆ ಮನವಿ: ಡಿ ಬಾಸ್ ಏನಂದ್ರು?

  |
  Lok Sabha Elections 2019 : ಸುಮಲತಾ ಗೆಲ್ಲೋಕೆ ಮಂಡ್ಯದಲ್ಲಿ ಇವರ ಬೆಂಬಲ ಬೇಕೇ ಬೇಕು |

  ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಪರ ಪ್ರಚಾರ ಮಾಡುತ್ತಿರುವ ನಟ ದರ್ಶನ್ ಮತಭೇಟೆ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ನಾಲ್ಕನೇ ದಿನ ಮಂಡ್ಯದ ನಾಗಮಂಗಲದಲ್ಲಿ ಡಿ ಬಾಸ್ ಮತಯಾಚನೆ ಮಾಡಿದ್ರು.

  ನಾಗಮಂಗಲದ ಹಳ್ಳಿಯೊಂದರಲ್ಲಿ ಪ್ರಚಾರ ಮಾಡುತ್ತಿದ್ದ ದರ್ಶನ್ ಬಳಿ, ವೃದ್ಧೆ ಮನವಿ ಮಾಡಿದ್ದಾರೆ. ಒಂದು ಹಾಡು ಹೇಳುವಂತೆ ಚಾಲೆಂಜಿಂಗ್ ಸ್ಟಾರ್ ಗೆ ಕೋರಿಕೆಯಿಟ್ಟರು. ಅದಕ್ಕೆ ಪ್ರತಿಕ್ರಿಯಿಸಿದ ದರ್ಶನ್, ''ಸುಮಲತಾ ಅವರನ್ನ ಗೆಲ್ಲಿಸಿಕೊಡಿ ನಿಮ್ಮ ಜೊತೆ ಡ್ಯುಯೆಟ್ ಹಾಡ್ತೀನಿ'' ಎಂದರು.

  ಮೊನ್ನೆ ದರ್ಶನ್ ಗೆ ಆಗಿದ್ದೇ ಈಗ ಯಶ್ ಗೂ ಆಯ್ತು.!

  ಸ್ಟಾರ್ ನಟರು ಪ್ರಚಾರಕ್ಕೆ ಹೋದಾಗ ಸಿನಿಮಾ ಡೈಲಾಗ್ ಗಳು ಹೇಳಿ ಎಂದು ಒತ್ತಾಯ ಮಾಡುವುದು ಸಾಮಾನ್ಯ. ಕೆಲವೊಮ್ಮೆ ಸ್ಟಾರ್ ನಟರು ಕೂಡ ಅಭಿಮಾನಿಗಳ ಆಸೆಯಂತೆ ಡೈಲಾಗ್ ಹೇಳಿರುವುದು ಉಂಟು.

  ಇನ್ನು ಪ್ರಚಾರ ವೇಳೆ ಹೆಚ್ಚು ಅಭಿಮಾನಿಗಳು ಜಮಾಯಿಸಿದ್ದರಿಂದ ನೂಕು ನುಗ್ಗಲು ಉಂಟಾಯಿತು. ಅಭಿಮಾನಿಗಳ ತಳ್ಳಾಟಕ್ಕೆ ಹಳ್ಳಿಯೊಂದರಲ್ಲಿ ದರ್ಶನ್ ಚಲಿಸುತ್ತಿದ್ದ ವಾಹನದ ಗಾಜು ಪುಡಿಯಾಗಿರುವ ಘಟನೆಯೂ ನಡೆದಿದೆ.

  ಮಂಡ್ಯ ಪ್ರಚಾರದಲ್ಲಿ ಈ ನಾಲ್ಕು ಹೆಸರನ್ನ ಪದೇ ಪದೇ ನೆನಪಿಸುತ್ತಿರುವ ದರ್ಶನ್

  ಇನ್ನು ದರ್ಶನ್ ಹೋದ ಕಡೆಯಲ್ಲಾ ಭರ್ಜರಿ ಸ್ವಾಗತ ಸಿಗುತ್ತಿದ್ದು, ಇಂದು ಕೂಡ ಸೇಬಿನ ಹಾರವನ್ನ ಹಾಕಲಾಯಿತು. ನಿನ್ನೆ ಕ್ರೇನ್ ಬಳಸಿ ಸೇಬಿನ ಹಾಕಿದ್ದರು. ಆದ್ರೆ ಇಂದು ಅಭಿಮಾನಿಗಳೇ ತಮ್ಮ ಕೈಯಾರೆ ಸೇಬಿನ ಹಾರ ಹಾಕಿ ಜೈಕಾರ ಹಾಕಿದ್ರು.

  English summary
  Challenging star darshan campaign continues 4th days also. here is the Highlights of d boss election campaign in mandya. he campaigning for sumalatha in mandya lok sabha.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X