For Quick Alerts
  ALLOW NOTIFICATIONS  
  For Daily Alerts

  ತ್ರೀಡಿಯಲ್ಲಿ ಬರಲಿದೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ

  By Rajendra
  |

  ಈಗ 3D ಚಿತ್ರಗಳ ಜಮಾನಾ. ಎರಡೂವರೆ ಗಂಟೆಗಳ ಕಾಲ ಪ್ರೇಕ್ಷಕ ಮೂರು ಆಯಾಮದ ಚಿತ್ರ ನೋಡುತ್ತಾ ಮೈಮರೆಯುತ್ತಾನೆ. ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ 'ಕಠಾರಿವೀರ ಸುರಸುಂದರಾಂಗಿ' ಚಿತ್ರ ಕನ್ನಡದಲ್ಲಿ ಹೊಸ ದಿಕ್ಕನ್ನು ತೋರಿಸಿತ್ತು.

  ಈಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಭಾರಿ ಬಜೆಟ್ ಚಿತ್ರ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ'ನನ್ನು 3Dಯಲ್ಲಿ ತರಲು ಸಿದ್ಧತೆಗಳು ನಡೆಯುತ್ತಿವೆ. ಈ ಮೂಲಕ ಆನಂದ್ ಬಿ ಅಪ್ಪುಗೋಳ್ ಅವರು ಮತ್ತೊಂದು ಸಾಹಸಕ್ಕೆ ಮುಂದಾಗಿದ್ದಾರೆ.

  ರಾಯಣ್ಣ ಚಿತ್ರವನ್ನು 3Dಗೆ ಬದಲಾಯಿಸಲಾಗುತ್ತಿದೆ. ಬಹುಶಃ 3D ಆವೃತ್ತಿಯನ್ನು ಮುಂದಿನ ವರ್ಷ ತೆರೆಗೆ ತರುವ ಸಾಧ್ಯತೆಗಳಿವೆ ಎನ್ನುತ್ತಾರೆ ಅಪ್ಪುಗೋಳ್. ಇದಕ್ಕಾಗಿ ಕೆಲವು ಸನ್ನಿವೇಶಗಳ ಮರು ಚಿತ್ರೀಕರಣ, ಹೊಸ ದೃಶ್ಯಗಳ ಸೇರ್ಪಡೆಯೊಂದಿಗೆ ಚಿತ್ರಕ್ಕೆ ಇನ್ನಷ್ಟು ಮೆರುಗು ನೀಡಲಾಗುತ್ತದೆ ಎನ್ನುತ್ತಾರೆ ನಿರ್ಮಾಪಕರು.

  ಒಂದು ವೇಳೆ ಅಗತ್ಯ ಬಿದ್ದರೆ ಕೆಲವು ಸನ್ನಿವೇಶಗಳನ್ನು ಮರು ಚಿತ್ರೀಕರಣ ಮಾಡುತ್ತೇವೆ ಎನ್ನುತ್ತಾರೆ ಅಪ್ಪುಗೋಳ್. 'ಸಂಗೊಳ್ಳಿ ರಾಯಣ್ಣ' ಚಿತ್ರ ಬೆಂಗಳೂರಿನ ತ್ರಿಭುವನ್ ಚಿತ್ರಮಂದಿರದಲ್ಲಿ 25 ವಾರಗಳನ್ನು ಪೂರೈಸವ ಮೂಲಕ ದಾಖಲೆ ಸೃಷ್ಟಿಸಿದೆ.

  'ರಾಯಣ್ಣ' ಚಿತ್ರ ಕೇವಲ ಕನ್ನಡಿಗರನ್ನಷ್ಟೇ ಅಲ್ಲದೆ ಪರಭಾಷಾ ಚಿತ್ರರಸಿಕರನ್ನೂ ಆಕರ್ಷಿಸುತ್ತಿದೆ. ನಾಗಣ್ಣ ನಿರ್ದೇಶನ, ಕೇಶವಾದಿತ್ಯ ಸಂಭಾಷಣೆ, ರಮೇಶ್ ಬಾಬು ಅವರ ಛಾಯಾಗ್ರಹಣವಿರುವ ಚಿತ್ರ ಪ್ರೇಕ್ಷಕರನ್ನು ಸ್ವಾತಂತ್ರ್ಯಪೂರ್ವಕ್ಕೆ ಕರೆದೊಯ್ಯತ್ತದೆ. ದರ್ಶನ್ ಅವರ ವೃತ್ತಿ ಬದುಕಿನಲ್ಲೂ ಹೊಸ ಮೈಲಿಗಲ್ಲು ಸೃಷ್ಟಿಸಿದ ಚಿತ್ರ.

  ಚಿತ್ರದ ತಾರಾಗಣದಲ್ಲಿ ನಿಖಿತಾ ತುಕ್ರಲ್, ಶ್ರೀನಿವಾಸಮೂರ್ತಿ, ಶೋಭರಾಜ್, ಉಮಾಶ್ರೀ, ದೊಡ್ಡಣ್ಣ, ಸಿ.ಆರ್.ಸಿಂಹ, ರಮೇಶ್ ಭಟ್, ಶಿವಕುಮಾರ್, ಧರ್ಮ, ಸೌರವ್, ಸತ್ಯಜಿತ್, ಬ್ರಹ್ಮಾವರ್, ಕರಿಬಸವಯ್ಯ, ಕಿಲ್ಲರ್ ವೆಂಕಟೇಶ್, ಅರವಿಂದ್ ಬಿರೇದಾರ್, ರಾಜೇಶ್ ಹಾಗೂ ವಿಜಯ ಸಾರಥಿ ಅಭಿನಯಿಸುತ್ತಿದ್ದಾರೆ. (ಒನ್ಇಂಡಿಯಾ ಕನ್ನಡ)

  English summary
  Challenging Star Darshan's big budget historical film 'Krantiveera Sangolli Rayanna' to be released in 3D. The film by converting into 3D and re-releasing it next year says filmmaker Anand B Appugol.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X