»   » ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಟ್ರಿಪಲ್ ಸೆಂಚುರಿ

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಟ್ರಿಪಲ್ ಸೆಂಚುರಿ

Posted By:
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಐತಿಹಾಸಿಕ ಚಿತ್ರ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ'. ಭಾರಿ ಬಜೆಟ್ ನಲ್ಲಿ ಆನಂದ್ ಬಿ ಅಪ್ಪುಗೋಳ್ ಅವರು ನಿರ್ಮಿಸಿದ ಈ ಚಿತ್ರ ಟ್ರಿಪಲ್ ಸೆಂಚುರಿ ಭಾರಿಸಿದೆ. ಕನ್ನಡ ಚಿತ್ರರಂಗದ ಮಟ್ಟಿಗೆ ಇದೊಂದು ಹೊಸ ದಾಖಲೆ ಎಂದೇ ಹೇಳಬೇಕು.

ಬ್ರಿಟೀಷರ ವಿರುದ್ಧ ಸ್ವಾತಂತ್ರ್ಯಕ್ಕಾಗಿ ಹೋರಾಡಿದ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಚಿತ್ರವು 300 ದಿನಗಳ ಗಡಿದಾಟಿ ಮುನ್ನುಗ್ಗಿದೆ. ಇನ್ನೊಂದು ಮುಖ್ಯ ವಿಚಾರ ಅಂದರೆ ಈ ಚಿತ್ರವನ್ನು ಭಾರತದ 18 ಭಾಷೆಗಳಿಗೆ ಡಬ್ ಮಾಡಲಾಗುತ್ತಿದೆ. ಪ್ರಮುಖವಾಗಿ ತಮಿಳು,ತೆಲುಗು, ಮಲಯಾಳಂ, ಬೆಂಗಾಲಿ, ಭೋಜಪುರ, ಒರಿಸ್ಸಾ, ರಾಜಾಸ್ತಾನ, ಹಿಂದಿ- ಈಗ ರೆಡಿಯಾಗಿದೆ. [ರಾಯಣ್ಣ ಚಿತ್ರ ವಿಮರ್ಶೆ]


ಕರ್ನಾಟಕದಾದ್ಯಂತ ಯಶಸ್ವಿಯಾಗಿ ಪ್ರದರ್ಶನಗೊಂಡ ಈ ಚಿತ್ರ ಮುಂದಿನ ದಿನಗಳಲ್ಲಿ ಭಾರತದಾದ್ಯಂತ ಆಯಾ ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಇದಾದ ನಂತರ ಹೊರ ದೇಶದ ಭಾಷೆಗಳಿಗೂ ಚಿತ್ರ ಡಬ್ ಆಗಲಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ.

ಮೂರು ಕೋಟಿಗೂ ಅಧಿಕ ಜನ ವೀಕ್ಷಿಸಿರುವ ಈ ಚಿತ್ರಕ್ಕೆ, ಉದಯ, ಸುವರ್ಣ, ಫಿಲಂಪೇರ್, ಸಿಮ್ಮಾ (SIIMA) ಪ್ರಶಸ್ತಿಗಳು ದೊರೆತಿದೆ. ಈ ಪ್ರದರ್ಶನಗಳ ನಂತರ ಮುಂದಿನ ವರ್ಷ ಆಗಸ್ಟ್ 15, ರಾಯಣ್ಣನ ಜನ್ಮ ದಿನದಂದು ತ್ರಿಡಿಯಲ್ಲಿ ಕನ್ನಡ, ತೆಲುಗು, ಹಿಂದಿ, ಇಂಗ್ಲೀಷ್ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

ವಿಶೇಷವಾಗಿ ಈ ಚಿತ್ರವನ್ನು ಶಾಲಾ ಮಕ್ಕಳಿಗಾಗಿ ಆರ್ಧ ಬೆಲೆಯ ಟಿಕೆಟ್ ಬಿತ್ತರಿಸಿ ಡಿಸೆಂಬರ್ 6 ರಿಂದ ಆಗಸ್ಟ್ 31 ರ ವರೆಗೆ 26,47,302 ವಿದ್ಯಾರ್ಥಿಗಳು ಚಿತ್ರವನ್ನು ವೀಕ್ಷಿಸಿದ್ದಾರೆ. ಇದರ ಉಸ್ತುವಾರಿಕೆಯನ್ನು ಕಟ್ಟಿಮನಿ ನಿರ್ವಹಿಸಿದ್ದಾರೆ.

ಚಿತ್ರದ ತಾರಾಗಣದಲ್ಲಿ ನಿಖಿತಾ ತುಕ್ರಲ್, ಶ್ರೀನಿವಾಸಮೂರ್ತಿ, ಶೋಭರಾಜ್, ಉಮಾಶ್ರೀ, ದೊಡ್ಡಣ್ಣ, ಸಿ.ಆರ್.ಸಿಂಹ, ರಮೇಶ್ ಭಟ್, ಶಿವಕುಮಾರ್, ಧರ್ಮ, ಸೌರವ್, ಸತ್ಯಜಿತ್, ಬ್ರಹ್ಮಾವರ್, ಕರಿಬಸವಯ್ಯ, ಕಿಲ್ಲರ್ ವೆಂಕಟೇಶ್, ಅರವಿಂದ್ ಬಿರೇದಾರ್, ರಾಜೇಶ್ ಹಾಗೂ ವಿಜಯ ಸಾರಥಿ ಅಭಿನಯಿಸುತ್ತಿದ್ದಾರೆ. (ಒನ್ಇಂಡಿಯಾ ಕನ್ನಡ)

English summary
Challenging Star Darshan's big budget historical film 'Krantiveera Sangolli Rayanna' completes 300 days and the movie still running successfully. The film by converting into 3D and re-releasing it next year says filmmaker Anand B Appugol.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada