»   » ನಟಿ ರಕ್ಷಿತಾ ಕೋರಿಕೆಯನ್ನ ಕೆಲವೇ ದಿನದಲ್ಲಿ ಈಡೇರಿಸಿದ ದರ್ಶನ್

ನಟಿ ರಕ್ಷಿತಾ ಕೋರಿಕೆಯನ್ನ ಕೆಲವೇ ದಿನದಲ್ಲಿ ಈಡೇರಿಸಿದ ದರ್ಶನ್

Posted By:
Subscribe to Filmibeat Kannada

ನಟಿ ರಕ್ಷಿತಾ ಪ್ರೇಮ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮುಂದೆ ಒಂದು ಕೋರಿಕೆಯನ್ನು ಇಟ್ಟಿದ್ದರು. ರಕ್ಷಿತಾ ಅವರ ಈ ಕೋರಿಕೆಯನ್ನು ದಾಸ ನೆರವೇರಿಸುತ್ತಾರ ಎಂಬುದು ದೊಡ್ಡಮಟ್ಟದಲ್ಲೇ ಚರ್ಚೆಯಾಗಿತ್ತು.

ರಕ್ಷಿತಾ ಕೋರಿಕೆ ಇಟ್ಟು ಕೆಲವೇ ದಿನಗಳಲ್ಲಿ ದರ್ಶನ್ ಅದನ್ನ ಈಡೇರಿಸಿದ್ದಾರೆ. ಈ ಮೂಲಕ 'ಕಲಾಸಿಪಾಳ್ಯ'ದ ಕೆಂಚ ಮತ್ತು ಪ್ರಿಯ ಅವರ ಸ್ನೇಹ ಎಷ್ಟು ಗಟ್ಟಿಯಾಗಿದೆ ಎಂಬುದು ಅಭಿಮಾನಿಗಳ ಎದುರು ಬಹಿರಂಗವಾಗಿದೆ.

ಅಷ್ಟಕ್ಕೂ, ದರ್ಶನ್ ಅವರ ಬಳಿ ರಕ್ಷಿತಾ ಅವರು ಕೇಳಿಕೊಂಡಿದ್ದೇನು? ಅದನ್ನ 'ಡಿ-ಬಾಸ್' ಹೇಗೆ ಈಡೇರಿಸಿದ್ರು? ಚನ್ನಪ್ಪ ಯಾರು? ಎಂಬುದನ್ನ ತಿಳಿಯಲು ಮುಂದೆ ಓದಿ....

ರಕ್ಷಿತಾ ಅವರ ಕೋರಿಕೆ...

'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ಕಾರ್ಯಕ್ರಮದ ಸ್ಪರ್ಧಿಯಲ್ಲಿ ಒಬ್ಬರಾದ ಚನ್ನಪ್ಪ ನಟ ದರ್ಶನ್ ಅವರ ದೊಡ್ಡ ಅಭಿಮಾನಿಯಾಗಿದ್ದು, ದರ್ಶನ್ ಅವರನ್ನು ಒಮ್ಮೆ ಭೇಟಿಯಾಗಬೇಕು ಎಂದು ಹಂಬಲಿಸುತ್ತಿದ್ದರು. ಅವರ ಪರವಾಗಿ ರಕ್ಷಿತಾ ಪ್ರೇಮ್ ತಮ್ಮ ಗೆಳೆಯನಿಗೆ ಮನವಿ ಮಾಡಿದ್ದರು.

ನಟಿ ರಕ್ಷಿತಾ ಅವರ ಈ ಕೋರಿಕೆಯನ್ನು ಈಡೇರಿಸುತ್ತಾರಾ ದಾಸ ದರ್ಶನ್.?

ಫೇಸ್ ಬುಕ್ ನಲ್ಲಿ ಗೆಳೆಯನಿಗೆ ಮನವಿ

''ಇವರು ಚನ್ನಪ್ಪ 'ಸರಿಗಮಪ ಸೀಸನ್ 11' ಕಾರ್ಯಕ್ರಮದ ವಿನ್ನರ್. ಇವರು ನಿಮ್ಮ (ದರ್ಶನ್) ದೊಡ್ಡ ಅಭಿಮಾನಿಗಳಲ್ಲಿ ಒಬ್ಬರು. ನಿಮ್ಮನ್ನು ಒಮ್ಮೆ ನೋಡುವುದು ಈತನ ದೊಡ್ಡ ಆಸೆಯಾಗಿದೆ. ಪ್ಲೀಸ್ ಇವರನ್ನು ಒಮ್ಮೆ ಭೇಟಿ ಮಾಡಿ'' ಎಂದು ಚನ್ನಪ್ಪ ಜೊತೆಗಿನ ಫೋಟೋ ಹಾಕಿ ದರ್ಶನ್ ಬಳಿ ರಕ್ಷಿತಾ ಕೇಳಿ ಕೊಂಡಿದ್ದಾರೆ.

ಅಭಿಮಾನಿ ಕನಸು ನನಸಾಯಿತು

ರಕ್ಷಿತಾ ಅವರ ಕೋರಿಕೆ ಬೆನ್ನಲ್ಲೆ ನಟ ದರ್ಶನ್ ಅವರು, ಸರಿಗಮಪ ಚನ್ನಪ್ಪ ಅವರನ್ನ ಭೇಟಿಯಾಗಿದ್ದಾರೆ. ಈ ಮೂಲಕ ವರ್ಷಗಳಿಂದ ಕನಸು ಕಾಣುತ್ತಿದ್ದ ಅಭಿಮಾನಿಯ ಆಸೆಯೂ ನೆರವೇರಿದೆ.

ರಕ್ಷಿತಾ ಸಹಾಯದಿಂದ ಅಭಿಮಾನಿ ಖುಷ್

ಇಷ್ಟು ದಿನ ಚೆನ್ನಪ್ಪ, ದರ್ಶನ್ ಅವರನ್ನ ಭೇಟಿ ಮಾಡುಬೇಕು ಎಂದುಕೊಂಡಿದ್ದರು. ಅದು ಸಾಧ್ಯವಾಗಿರಲಿಲ್ಲ. ಈಗ ರಕ್ಷಿತಾ ಅವರ ಸಹಾಯದಿಂದ ತಮ್ಮ ಕನಸು ನನಸು ಮಾಡಿಕೊಂಡಿದ್ದಾರೆ. ಈ ಮೂಲಕ ಅಭಿಮಾನಿಯ ಆಸೆಯೂ ದರ್ಶನ್ ಈಡೇರಿಸಿದ್ದಾರೆ. ಗೆಳೆತಿಯ ಕೋರಿಕೆಯನ್ನ ಗೌರವಿಸಿದ್ದಾರೆ.

'ತಾರಕ್' ನೋಡೋಕೂ ಮುಂಚೆ, ನೀವು ತಿಳಿಯಬೇಕಾದ 8 ಸಂಗತಿಗಳು.!

English summary
Challeinging Star Darshan fulfilled the request of actress Rakshita Prem.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada