For Quick Alerts
  ALLOW NOTIFICATIONS  
  For Daily Alerts

  ಡಿ ಬಾಸ್ ಜೊತೆ ಸುಕುಮಾರ್ ಸಿನಿಮಾ: ವೈರಲ್ ಪೋಸ್ಟ್‌ ಅಸಲಿ ಕಥೆ ಏನು?

  |

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ ತೆಲುಗು ಸ್ಟಾರ್ ನಿರ್ದೇಶಕ ಸುಕುಮಾರ್ ಸಿನಿಮಾ ಮಾಡ್ತಾರೆ ಎನ್ನುವ ಕುತೂಹಲ ಡಿ ಬಾಸ್ ಅಭಿಮಾನಿಗಳಲ್ಲಿದೆ. ಅದಕ್ಕೆ ಕಾರಣ ಈ ಹಿಂದೆ ನಟ ದರ್ಶನ್ ಅವರನ್ನು ಸುಕುಮಾರ್ ಖುದ್ದು ಭೇಟಿ ಮಾಡಿದ್ದರು. ಈ ಭೇಟಿಯಾದ ದಿನದಿಂದಲೂ ಇವರಿಬ್ಬರ ಕಾಂಬಿನೇಷನ್‌ನಲ್ಲಿ ಸಿನಿಮಾ ಯಾವಾಗ ಘೋಷಣೆ ಆಗುತ್ತದೆ ಎಂದು ಎದುರು ನೋಡುವಂತಾಗಿದೆ.

  ಡಿ ಬಾಸ್ ಜೊತೆ ಸುಕುಮಾರ್ ಸಿನಿಮಾ ಮಾಡ್ತಾರೋ ಇಲ್ವೋ ಎನ್ನುವುದರ ಬಗ್ಗೆ ಇದುವರೆಗೂ ಅಧಿಕೃತವಾಗಿ ಯಾರೂ ಹೇಳಿಲ್ಲ. ಆದರೆ, ಕಳೆದ ಎರಡು ದಿನದಿಂದ ಸೋಶಿಯಲ್ ಮೀಡಿಯಾದಲ್ಲಿ ಈ ಕುರಿತು ಪೋಸ್ಟ್‌ವೊಂದು ಭಾರಿ ವೈರಲ್ ಆಗುತ್ತಿದೆ. ದರ್ಶನ್ ಜೊತೆ ಸಿನಿಮಾ ಮಾಡುವುದಾಗಿ ಸ್ವತಃ ಸುಕುಮಾರ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪ್ರಕಟಿಸಿದ್ದಾರೆ ಎನ್ನುವ ಸ್ಕ್ರೀನ್ ಶಾರ್ಟ್‌ ಸದ್ದು ಮಾಡ್ತಿದೆ. ವೈರಲ್ ಪೋಸ್ಟ್ ಹಿಂದಿನ ಅಸಲಿ ಕಥೆ ಏನು? ಮುಂದೆ ಓದಿ...

  ನಕಲಿ ಖಾತೆಯಿಂದ ಪ್ರಕಟಣೆ

  ನಕಲಿ ಖಾತೆಯಿಂದ ಪ್ರಕಟಣೆ

  ''ನನ್ನ ಮುಂದಿನ ಸಿನಿಮಾ ನಟ ದರ್ಶನ್ ಜೊತೆ ಮಾಡುತ್ತಿದ್ದೇನೆ. ಕೋವಿಡ್ ಕಾರಣದಿಂದ ಈ ಸಿನಿಮಾ ಪ್ರಕಟಿಸಲು ವಿಳಂಬವಾಯಿತು. ನಿಮ್ಮ ಪ್ರೋತ್ಸಾಹ, ಪ್ರೀತಿ ನಮ್ಮ ಮೇಲೆ ಇರಲಿ'' ಸುಕುಮಾರ್ ಹೆಸರು ಹಾಗೂ ಭಾವಚಿತ್ರ ಹೊಂದಿರುವ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಹಾಕಲಾಗಿದೆ. ಇದನ್ನು ಸತ್ಯ ನಂಬಿದ ಕೆಲವರು ಸ್ಕ್ರೀನ್ ಶಾರ್ಟ್‌ ತೆಗೆದು ವೈರಲ್ ಮಾಡುತ್ತಿದ್ದಾರೆ. ಇದು ನಕಲಿ ಖಾತೆ. ಸುಕುಮಾರ್ ಅವರ ಖಾಸಗಿ ಖಾತೆಯಲ್ಲ.

  'ಡಿ-ಬಾಸ್' ಭಕ್ತರಿಗೆ ಭರ್ಜರಿ ಸುದ್ದಿ: ದರ್ಶನ್ ಭೇಟಿ ಮಾಡಿದ 'ರಂಗಸ್ಥಳಂ' ನಿರ್ದೇಶಕ ಸುಕುಮಾರ್'ಡಿ-ಬಾಸ್' ಭಕ್ತರಿಗೆ ಭರ್ಜರಿ ಸುದ್ದಿ: ದರ್ಶನ್ ಭೇಟಿ ಮಾಡಿದ 'ರಂಗಸ್ಥಳಂ' ನಿರ್ದೇಶಕ ಸುಕುಮಾರ್

  2018ರಲ್ಲಿ ಭೇಟಿ ಮಾಡಿದ್ದರು

  2018ರಲ್ಲಿ ಭೇಟಿ ಮಾಡಿದ್ದರು

  'ಯಜಮಾನ' ಸಿನಿಮಾದ ಚಿತ್ರೀಕರಣದ ವೇಳೆ ತೆಲುಗು ನಿರ್ದೇಶಕ ಸುಕುಮಾರ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಭೇಟಿ ಮಾಡಿದ್ದರು. ದರ್ಶನ್ ಕ್ಯಾರವಾನ್ನಲ್ಲಿ ಕುಳಿತು ಇಬ್ಬರು ಪರಸ್ಪರ ಚರ್ಚಿಸಿದ್ದರು. ಈ ಫೋಟೋಗಳು ಸಹ ವೈರಲ್ ಆಗಿತ್ತು. ಆಗಲೇ ಈ ಕಾಂಬಿನೇಷನ್‌ನಲ್ಲಿ ಸಿನಿಮಾ ಬರಲಿದೆ ಎಂದು ಸುದ್ದಿ ಹುಟ್ಟಿಕೊಂಡಿತ್ತು.

  ಹುಟ್ಟುಹಬ್ಬಕ್ಕೆ ಶುಭಕೋರಿದ್ದ ದಾಸ

  ಹುಟ್ಟುಹಬ್ಬಕ್ಕೆ ಶುಭಕೋರಿದ್ದ ದಾಸ

  ಇದೇ ವರ್ಷ ಜನವರಿ ತಿಂಗಳಲ್ಲಿ ಸುಕುಮಾರ್ ಅವರ ಹುಟ್ಟುಹಬ್ಬ ಇತ್ತು. ಆ ದಿನ ನಟ ದರ್ಶನ್ ಟ್ವಿಟ್ಟರ್ ಮೂಲಕ ವಿಶ್ ಮಾಡಿದ್ದರು. ಆಗಲೂ ಈ ಕಾಂಬಿನೇಷನ್‌ನಲ್ಲಿ ಸಿನಿಮಾ ಬರಲಿದೆ ಎಂದು ಅಭಿಮಾನಿಗಳು ಚರ್ಚಿಸಿದ್ದರು.

  ಅಲ್ಲು ಅರ್ಜುನ್ 'ಪುಷ್ಪ' ಸಿನಿಮಾ ನಿರ್ದೇಶಕನ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ ಡಿ ಬಾಸ್ ದರ್ಶನ್ಅಲ್ಲು ಅರ್ಜುನ್ 'ಪುಷ್ಪ' ಸಿನಿಮಾ ನಿರ್ದೇಶಕನ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ ಡಿ ಬಾಸ್ ದರ್ಶನ್

  ಸದ್ಯಕ್ಕೆ ಸುಳ್ಳು, ಮುಂದೆ ಗೊತ್ತಿಲ್ಲ

  ಸದ್ಯಕ್ಕೆ ಸುಳ್ಳು, ಮುಂದೆ ಗೊತ್ತಿಲ್ಲ

  ಈವರೆಗಿನ ಬೆಳವಣಿಗೆಯ ಪ್ರಕಾರ ದರ್ಶನ್ ಮತ್ತು ಸುಕುಮಾರ್ ಕಾಂಬಿನೇಷನ್‌ನಲ್ಲಿ ಸಿನಿಮಾ ಬರುವ ಬಗ್ಗೆ ಯಾವ ಸುಳಿವು ಸಿಕ್ಕಿಲ್ಲ. ಸದ್ಯಕ್ಕೆ ಇದು ಸುಳ್ಳು ಎನ್ನಬಹುದು. ಆದರೆ, ಮುಂದಿನ ದಿನದಲ್ಲಿ ಸಿನಿಮಾ ಪ್ರಕಟಿಸಿದರೂ ಅಚ್ಚರಿಯಿಲ್ಲ. ಸಾಧ್ಯತೆಯನ್ನು ಅಲ್ಲಗೆಳೆಯುವಂತಿಲ್ಲ.

  ಪುಷ್ಪ ಚಿತ್ರದಲ್ಲಿ ಸುಕುಮಾರ್

  ಪುಷ್ಪ ಚಿತ್ರದಲ್ಲಿ ಸುಕುಮಾರ್

  'ಆರ್ಯ' ಚಿತ್ರದ ಮೂಲಕ ಡೈರೆಕ್ಷನ್ ಆರಂಭಿಸಿದ್ದ ಸುಕುಮಾರ್, 'ಆರ್ಯ 2', '100% ಲವ್', 'ನೇನೊಕ್ಕಡೆ', 'ಕುಮಾರಿ 21 ಎಫ್', 'ನಾನ್ನಕೂ ಪ್ರೇಮತೋ' ಹಾಗೂ 'ರಂಗಸ್ಥಳಂ' ಅಂತಹ ಸೂಪರ್ ಹಿಟ್ ಸಿನಿಮಾಗಳನ್ನ ನಿರ್ದೇಶನ ಮಾಡಿದ್ದಾರೆ. ಈಗ ಅಲ್ಲು ಅರ್ಜುನ್ ಜೊತೆ ಪುಷ್ಪ ಸಿನಿಮಾ ಮಾಡ್ತಿದ್ದಾರೆ.

  Comedy Khiladigalu Championship 2 ಗ್ರಾಂಡ್ ಫಿನಾಲೆಯಲ್ಲಿ ಗೆಲ್ಲೋದು ಯಾರು? | Filmibeat Kannada
  ತೆಲುಗು ನಿರ್ಮಾಪಕನಿಗೆ ದರ್ಶನ್ ಕಾಲ್‌ಶೀಟ್

  ತೆಲುಗು ನಿರ್ಮಾಪಕನಿಗೆ ದರ್ಶನ್ ಕಾಲ್‌ಶೀಟ್

  ಸ್ವತಃ ದರ್ಶನ್ ಹೇಳಿರುವಂತೆ ತೆಲುಗು ನಿರ್ಮಾಪಕ ಪ್ರಸಾದ್ ಜೊತೆ ಸಿನಿಮಾ ಮಾತುಕತೆಯಾಗಿದೆ. ದರ್ಶನ್ ಬಳಿ ಸಾರುವ ಸಾಲು ಸಾಲು ಸಿನಿಮಾಗಳ ಲಿಸ್ಟ್ ನಲ್ಲಿ ಪ್ರಸಾದ್ ಸಿನಿಮಾ ಕೂಡ ಒಂದು. ಹಾಗಾಗಿ ಪ್ರಸಾದ್ ನಿರ್ಮಾಣದ ಚಿತ್ರ ಯಾವುದಾಗಬಹುದು ಎಂಬ ಕುತೂಹಲ ಇದೆ.

  English summary
  Kannada actor Darshan Next Movie With Tollywood Director Sukumar; fake tweet goes viral.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X