For Quick Alerts
  ALLOW NOTIFICATIONS  
  For Daily Alerts

  ಸ್ನೇಹಿತರ ಜೊತೆ ಬೈಕ್ ರೈಡ್ ಹೊರಟ ಚಾಲೆಂಜಿಂಗ್ ಸ್ಟಾರ್

  |

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಶೂಟಿಂಗ್‌ನಿಂದ ಬ್ರೇಕ್ ಪಡೆದುಕೊಂಡಾಗ ತಮ್ಮ ವೈಯಕ್ತಿಕ ಜೀವನವನ್ನು ಬಹಳ ಚೆನ್ನಾಗಿ ಎಂಜಾಯ್ ಮಾಡ್ತಾರೆ. ಮೈಸೂರಿನ ಫಾರ್ಮ್ ಹೌಸ್‌ನಲ್ಲಿ ಹೆಚ್ಚು ಸಮಯ ಕಳೆಯುವ ಡಿ ಬಾಸ್‌ಗೆ ಕಾರ್‌ ಕ್ರೇಜ್ ಹಾಗೂ ಬೈಕ್ ಕ್ರೇಜ್ ಹೆಚ್ಚು.

  ಸಮಯ ಸಿಕ್ಕಾಗ ಕಾರು ಅಥವಾ ಬೈಕ್‌ನಲ್ಲಿ ಜಾಲಿ ಡ್ರೈವ್ ಹೋಗುವುದು ಸಾಮಾನ್ಯ. ದರ್ಶನ್ ಅವರು ಬೈಕ್ ಡ್ರೈವ್ ಮಾಡುವುದು ಅಥವಾ ಕಾರು ಡ್ರೈವ್ ಮಾಡುವ ವಿಡಿಯೋಗಳು ಈ ಹಿಂದೆ ಹಲವು ಸಲ ವೈರಲ್ ಆಗಿದೆ.

  ಅವಳಿ ಮಕ್ಕಳ ಜೊತೆ ಡಿ ಬಾಸ್ ದರ್ಶನ್ ಫೋಟೋ ವೈರಲ್ಅವಳಿ ಮಕ್ಕಳ ಜೊತೆ ಡಿ ಬಾಸ್ ದರ್ಶನ್ ಫೋಟೋ ವೈರಲ್

  ರಸ್ತೆಯಲ್ಲಿ ದರ್ಶನ್ ಎಂದು ಗೊತ್ತಾದ ತಕ್ಷಣ ಅಭಿಮಾನಿಗಳು ಅವರನ್ನು ಹಿಂಬಾಲಿಸಿ ವಿಡಿಯೋ ಮಾಡಿರುವುದು ಉಂಟು.

  ಈಗ ಡಿ ಬಾಸ್ ತಮ್ಮ ಗೆಳೆಯರ ಜೊತೆ ಬೈಕ್ ರೈಡ್ ಹೊರಟಿದ್ದಾರೆ. ಹತ್ತಕ್ಕೂ ಹೆಚ್ಚು ಮಂದಿ ಗೆಳೆಯರು ಬೈಕ್‌ನಲ್ಲಿ ಸವಾರಿ ಹೊರಟಿದ್ದು, ನಟ ದರ್ಶನ್ ಸಹ ಅವರ ಜೊತೆ ಸಾಥ್ ನೀಡಿದ್ದಾರೆ.

  ರಾಜರಾಜೇಶ್ವರಿ ನಗರದಲ್ಲಿರುವ ದರ್ಶನ್ ನಿವಾಸದಿಂದ ಈ ರೈಡ್ ಆರಂಭವಾಗಿದ್ದು, ಯಾವ ಕಡೆ ಹೊರಟಿದೆ ಎಂಬುದರ ಬಗ್ಗೆ ಸದ್ಯಕ್ಕೆ ಮಾಹಿತಿ ಇಲ್ಲ. ಆದ್ರೆ, ದರ್ಶನ್ ಅವರ ಬೈಕ್ ರೈಡ್ ವಿಡಿಯೋ ತುಣುಕುಗಳು ಮಾತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.

  ರೆಬಲ್ ಸ್ಟಾರ್ ಮೇಲಿನ ಪ್ರೀತಿಯನ್ನು ಮತ್ತೆ ಸಾಬೀತು ಪಡಿಸಿದ ಮಂಡ್ಯ ಜನ | Filmibeat Kannada

  ಇತ್ತೀಚಿಗಷ್ಟೆ ಆರ್ ಆರ್ ಉಪನಗರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರ ಪರವಾಗಿ ಪ್ರಚಾರ ಮಾಡಿದ್ದ ದರ್ಶನ್, ರಾಕ್‌ಲೈನ್ ವೆಂಕಟೇಶ್ ನಿರ್ಮಾಣದಲ್ಲಿ ತಯಾರಾಗುತ್ತಿರುವ 'ಗಂಡುಗಲಿ ಮದಕರಿ ನಾಯಕ' ಸಿನಿಮಾದ ಚಿತ್ರೀಕರಣ ಮಾಡುತ್ತಿದ್ದಾರೆ.

  English summary
  Challenging star Darshan on a trip along with his gang of bikers friends. video viral in social media.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X