Just In
Don't Miss!
- News
ಭಾರತದಲ್ಲಿ 20.29 ಲಕ್ಷ ಜನರಿಗೆ ಕೊರೊನಾವೈರಸ್ ಲಸಿಕೆ
- Sports
ಸಯ್ಯದ್ ಮುಷ್ತಾಕ್ ಅಲಿ: ಹಿಮಾಚಲ ಪ್ರದೇಶ ಮಣಿಸಿದ ತಮಿಳುನಾಡು
- Education
ECIL Recruitment 2021: 3 ಟೆಕ್ನಿಕಲ್ ಅಧಿಕಾರಿ ಹುದ್ದೆಗಳಿಗೆ ನೇರ ಸಂದರ್ಶನ
- Automobiles
ವಿನೂತನ ಫೀಚರ್ಸ್ಗಳೊಂದಿಗೆ ನ್ಯೂ ಜನರೇಷನ್ ಟಾಟಾ ಸಫಾರಿ ಎಸ್ಯುವಿ ಅನಾವರಣ
- Finance
ಗಣರಾಜ್ಯೋತ್ಸವಕ್ಕೆ ಬಿಎಸ್ಎನ್ಎಲ್ನಿಂದ ವಿಶೇಷ ಆಫರ್
- Lifestyle
ನೀವು ಬಳಸಬಹುದಾದ ಡೈರಿ ಉತ್ಪನ್ನವಲ್ಲದ ಹಾಲುಗಳ ಬಗ್ಗೆ ಇಲ್ಲಿದೆ ಮಾಹಿತಿ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
'ಕುರುಕ್ಷೇತ್ರ' ಪಾಸ್ ನಲ್ಲಿ ದರ್ಶನ್ ಫೋಟೋನೇ ಇಲ್ಲ : ಅಭಿಮಾನಿಗಳ ಆಕ್ರೋಶ
'ಕುರುಕ್ಷೇತ್ರ' ಸಿನಿಮಾದ ಹಾಡುಗಳ ಬಿಡುಗಡೆಗೆ ಅಂತೂ ದಿನಾಂಕ ನಿಗದಿ ಆಗಿದೆ. ಜುಲೈ 7 ರಂದು ಅದ್ದೂರಿ ಕಾರ್ಯಕ್ರಮದ ಮೂಲಕ ಹಾಡುಗಳು ಅನಾವರಣ ಆಗಲಿದೆ. ಆದರೆ, ಈಗ ಈ ಕಾರ್ಯಕ್ರಮದ ಪಾಸ್ ವಿವಾದ ಸೃಷ್ಟಿ ಮಾಡಿದೆ.
'ಕುರುಕ್ಷೇತ್ರ' ಹಾಡುಗಳು ಬಿಡುಗಡೆ ದೊಡ್ಡ ಕಾರ್ಯಕ್ರಮದ ಮೂಲಕ ಆಗುತ್ತಿದೆ. ಈ ಕಾರಣ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕಾದ ಅಭಿಮಾನಿಗಳು ಪಾಸ್ ಹೊಂದಿರಬೇಕಾಗುತ್ತದೆ. ಆದರೆ, ಪಾಸ್ ಪಡೆದುಕೊಂಡರೂ, ಅಭಿಮಾನಿಗಳ ಬೇಸರ ಪಡುತ್ತಿದ್ದಾರೆ.
ರಿಲೀಸ್ ಆಗ್ತಿವೆ 'ಕುರುಕ್ಷೇತ್ರ' ಸಿನಿಮಾದ ಹಾಡುಗಳು
ದರ್ಶನ್ 'ಕುರುಕ್ಷೇತ್ರ' ಸಿನಿಮಾದ ನಾಯಕ. ಅದು ಅಲ್ಲದೆ, ಇದು ಅವರ 50ನೇ ಸಿನಿಮಾ. ಹೀಗಿದ್ದರೂ, ಚಿತ್ರದ ಆಡಿಯೋ ರಿಲೀಸ್ ಪಾಸ್ ನಲ್ಲಿ ದರ್ಶನ್ ಫೋಟೋ ಹಾಕಿಲ್ಲ. ಇದನ್ನು ಕಂಡ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಮುಂದೆ ಓದಿ...

ಪಾಸ್ ನಲ್ಲಿ ದರ್ಶನ್ ಫೋಟೋ ಇಲ್ಲ
'ಕುರುಕ್ಷೇತ್ರ' ಆಡಿಯೋ ಬಿಡುಗಡೆ ಕಾರ್ಯಕ್ರಮ ಪಾಸ್ ನಲ್ಲಿ ದರ್ಶನ್ ಫೋಟೋ ಹಾಕಲಾಗಿಲ್ಲ. ಇದು ದರ್ಶನ್ ಅವರ ಅಭಿಮಾನಿಗಳಿಗೆ ಬೇಸರ ಉಂಟು ಮಾಡಿದೆ. ಡಿ ಬಾಸ್ ಐವತ್ತನೇ ಸಿನಿಮಾ ಇದಾಗಿದ್ದು, ಪಾಸ್ ನಲ್ಲಿ ಅವರ ಫೋಟೋನೇ ಇಲ್ಲ ಅಂದರೆ ಹೇಗೆ ಎನ್ನುವುದು ಅಭಿಮಾನಿಗಳು ಪ್ರಶ್ನೆಯಾಗಿದೆ.

ದರ್ಶನ್ ಅಭಿಮಾನಿಗಳ ಬೇಸರ
ಈ ವಿಷಯ ಈಗ ದರ್ಶನ್ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. ಪಾಸ್ ಸಿಕ್ಕಿದೆ, ಕಾರ್ಯಕ್ರಮ ನೋಡಬಹುದು ಎಂದು ಖುಷಿಯಲ್ಲಿ ಇರುವಾಗಲೇ ಅದರಲ್ಲಿ ದರ್ಶನ್ ಫೋಟೋ ಇಲ್ಲ ಎನ್ನುವ ಬೇಸರ ಮೂಡಿದೆ. ಅನೇಕ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಅಸಮಾಧಾನ ಹೊರ ಹಾಕುತ್ತಿದ್ದಾರೆ.
ನಿರ್ಮಾಪಕ ಮುನಿರತ್ನ ಮೇಲೆ ಮುನಿಸಿಕೊಂಡ ಚಿತ್ರರಂಗ?

ಯಾವ ಕಲಾವಿದರ ಫೋಟೋವನ್ನು ಹಾಕಿಲ್ಲ
ದರ್ಶನ್ ಮಾತ್ರವಲ್ಲದೆ ಚಿತ್ರದ ಪಾಸ್ ನಲ್ಲಿ ಯಾವ ಕಲಾವಿದರ ಫೋಟೋವನ್ನು ಸಹ ಹಾಕಿಲ್ಲ. 'ಮುನಿರತ್ನ ಕುರುಕ್ಷೇತ್ರ' ಎಂಬ ದೊಡ್ಡ ಹೆಸರಿನ ಜೊತೆಗೆ ಮುನಿರತ್ನ ಅವರ ಸಣ್ಣ ಫೋಟೋ ಇದೆ. ಅದು ಬಿಟ್ಟರೆ ಕಾರ್ಯಕ್ರಮದ ವಿವರಗಳ ಮಾತ್ರ ಪಾಸ್ ನಲ್ಲಿದೆ. ಬಹುತಾರಾಗಣದ ಈ ಚಿತ್ರದ ಪಾಸ್ ನಲ್ಲಿ ಯಾರ ಫೋಟೋವನ್ನು ಹಾಕಿಲ್ಲ.

ಅಭಿಮಾನಿಗಳಿಗೆ ದರ್ಶನ್ ಮನವಿ
ಈ ವಿವಾದದ ಬಗ್ಗೆ ಟ್ವೀಟ್ ಮಾಡಿರುವ ದರ್ಶನ್ ''ಕುರುಕ್ಷೇತ್ರ' ಎನ್ನುವುದು ಬಹುತಾರಾಗಣದ ಚಿತ್ರ. ಎಲ್ಲರನ್ನು ಸಮಾನಕಾರವಾಗಿ ಕಾಣಬೇಕೆಂಬ ಸದುದ್ದೇಶದಿಂದ ಯಾವ ತಾರೆಯ ಫೋಟೋಗಳನ್ನು ಪಾಸ್ ಗಳ ಮೇಲೆ ಪ್ರಿಂಟ್ ಮಾಡಿಲ್ಲ. ಇಂತಹ ಚಿಕ್ಕ ವಿಷಯಗಳಿಗೆಲ್ಲ ಬೇಸರವನ್ನು ವ್ಯಕ್ತಪಡಿಸುವ ಅವಶ್ಯಕತೆ ಇಲ್ಲ. ಚಿತ್ರದಲ್ಲಿ ಎಲ್ಲರಿಗೂ ತಕ್ಕ ನ್ಯಾಯವನ್ನು ಒದಗಿಸಲಾಗಿದೆ. ಆರಾಮಾಗಿ ಆಡಿಯೋ ಬಿಡುಗಡೆಯಲ್ಲಿ ಪಾಲ್ಗೊಳ್ಳಿ.'' ಎಂದು ಮನವಿ ಮಾಡಿದ್ದಾರೆ.

ಆಗಸ್ಟ್ ನಲ್ಲಿ ಸಿನಿಮಾ ಬಿಡುಗಡೆ
'ಕುರುಕ್ಷೇತ್ರ' ಸಿನಿಮಾ ಆಗಸ್ಟ್ ನಲ್ಲಿ ಬಿಡುಗಡೆಯಾಗಲಿದೆ. ಮುನಿರತ್ನ ಈ ಸಿನಿಮಾದ ನಿರ್ಮಾಣ ಮಾಡಿದ್ದಾರೆ. ನಾಗಣ್ಣ ಸಿನಿಮಾದ ನಿರ್ದೇಶಕರಾಗಿದ್ದಾರೆ. ದರ್ಶನ್, ಅಂಬರೀಶ್, ಅರ್ಜುನ್ ಸರ್ಜಾ, ನಿಖಿಲ್ ಕುಮಾರ್, ರವಿಚಂದ್ರನ್, ಭಾರತಿ ವಿಷ್ಣುವರ್ಧನ್ ಸೇರಿದಂತೆ ಅನೇಕರು ಸಿನಿಮಾದಲ್ಲಿ ನಟಿಸಿದ್ದಾರೆ.