ಹಸುವಿನ ಹಾಲು ಕರೆದು 'ರೈತ' ಎಂದು ಸಾಬೀತು ಮಾಡಿದ ದರ್ಶನ್
Recommended Video

ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಪರ ಪ್ರಚಾರ ಮಾಡುತ್ತಿರುವ ನಟ ದರ್ಶನ್ ಗೆ ಹೋದ ಕಡೆಯಲೆಲ್ಲಾ ಭರ್ಜರಿ ಪ್ರತಿಕ್ರಿಯೆ ಸಿಗುತ್ತಿದೆ. ಗುರುವಾರ ಕೆಆರ್ ಪೇಟೆಯಲ್ಲಿ ಪ್ರಚಾರ ಮಾಡಿದ ದರ್ಶನ್, ಅಭಿಮಾನಿಗಳ ಸಮ್ಮುಖದಲ್ಲಿ ಹಸವಿನ ಹಾಲು ಕರೆದು ಗಮನ ಸೆಳೆದರು.
ಕೆಆರ್ ಪೇಟೆಯ ಸೋಮನಹಳ್ಳಿಯಲ್ಲಿ ಪ್ರಚಾರ ಮಾಡುತ್ತಿದ್ದ ವೇಳೆ, ಹಸುವಿನ ಹಾಲು ಕರೆದು ನಾನೊಬ್ಬ ರೈತ ಎಂದು ಸಾಬೀತುಪಡಿಸಿದ್ದಾರೆ. ದರ್ಶನ್ ಅವರ ಹಾಲು ಕರೆಯುವುದನ್ನ ನೋಡಲು ನೂರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ್ದರು.
ಬುಧವಾರ ಪ್ರಚಾರ ಮಾಡುತ್ತಿದ್ದಾಗ ಹಳ್ಳಿಯೊಂದರಲ್ಲಿ ದರ್ಶನ್ ಪ್ರಯಾಣಿಸುತ್ತಿದ್ದ ವಾಹನಕ್ಕೆ ಗೂಳಿ ಎದುರಾಯಿತು. ನಂತರ ವಾಹನದಿಂದ ಕೆಳಗೆ ಇಳಿದ ದರ್ಶನ್, ಗೂಳಿಯ ಮೈ ಸವರಿ ಅದಕ್ಕೆ ಪಕ್ಕಕ್ಕೆ ಕಳುಹಿಸುವಲ್ಲಿ ಯಶಸ್ವಿಯಾಗಿದ್ದರು.

ಇದೀಗ, ಸಾರ್ವಜನಿಕವಾಗಿ ಹಸುವಿನ ಹಾಲು ಕರೆದು ಪರೋಕ್ಷವಾಗಿ ಸಿಎಂಗೆ ತಿರುಗೇಟು ನೀಡಿದರು. ಇತ್ತೀಚಿಗಷ್ಟೆ ದರ್ಶನ್ ಮತ್ತು ಯಶ್ ವಿರುದ್ಧ ಸಿಎಂ ಕುಮಾರಸ್ವಾಮಿ ಟೀಕೆ ಮಾಡಿದ್ದರು. 'ಛತ್ರಿ ಹಿಡ್ಕೊಂಡು ನೆರಳಲ್ಲಿ ಶೂಟಿಂಗ್ ಮಾಡ್ತಿದ್ರು. ಬಿಸಿಲಿಗೆ ಬಂದಿದ್ದಾರೆ, ರೈತರ ಕಷ್ಟ ಏನು ಅಂತ ಗೊತ್ತಾಗಲಿ' ಎಂದಿದ್ದರು.
ಅಂದ್ಹಾಗೆ, ನಟ ದರ್ಶನ್ ಪ್ರಾಣಿಪ್ರಿಯರು ಮತ್ತು ಮೂಲತಃ ರೈತರು ಕೂಡ ಹೌದು. ಮೈಸೂರಿನಲ್ಲಿ ಫಾರ್ಮ್ ಹೌಸ್ ಹೊಂದಿದ್ದು ಅನೇಕ ಪ್ರಾಣಿಗಳನ್ನ ಸಾಕುತ್ತಿದ್ದಾರೆ. ಕುದುರೆ, ಹಸು, ಕುರಿ, ಮೇಕೆ, ಕೋಳಿ ಹೀಗೆ ಬಹುತೇಕ ಪ್ರಾಣಿಗಳಿಗೆ ಆಶ್ರಯ ನೀಡಿದ್ದಾರೆ ದರ್ಶನ್.


Click it and Unblock the Notifications











