For Quick Alerts
  ALLOW NOTIFICATIONS  
  For Daily Alerts

  'ಕ್ರಾಂತಿ'ಗಾಗಿ ಪೋಲ್ಯಾಂಡ್‌ಗೆ ಹಾರಿದ ದರ್ಶನ್, ರಚಿತಾ ರಾಮ್

  |

  ಸ್ಯಾಂಡಲ್‌ವುಡ್‌ನಲ್ಲಿ ದರ್ಶನ್‌ಗೆ ಇರುವ ಕ್ರೇಜ್ ಅನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ದರ್ಶನ್ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಕೋಟಿ ಕೋಟಿ ಲೂಟಿ ಮಾಡುತ್ತೆ. ಈಗಾಗೇ ಇವರ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಚಾಲೆಂಜ್ ಮಾಡಿ ಗೆದ್ದಿವೆ.

  ದರ್ಶನ್ ಸಿನಿಮಾಗಳು ಹೆಚ್ಚು ಬಾಕ್ಸಾಫೀಸ್‌ನಲ್ಲೂ ದಾಖಲೆ ಮಾಡುತ್ತವೆ. ಸಿನಿಮಾ ಬಿಡುಗಡೆಯಾದ ಒಂದು ವಾರದೊಳಗೆ ಚಿತ್ರವನ್ನು ಗೆಲುವಿನ ದಡಕ್ಕೆ ಸೇರಿಸಬಲ್ಲ ನಟ. 'ರಾಬರ್ಟ್', 'ಕುರುಕ್ಷೇತ್ರ', 'ಯಜಮಾನ'ದಂತಹ ಸಿನಿಮಾಗಳು ಗಲ್ಲಾಪೆಟ್ಟಿಗೆಯನ್ನೇ ಲೂಟಿ ಮಾಡಿವೆ.

  ಯಶ್ ಬಾಕ್ಸಾಫೀಸ್ ಸುಲ್ತಾನ್ ಎಂದ ಹೊಂಬಾಳೆ: ತಿರುಗಿಬಿದ್ದ ದರ್ಶನ್ ಫ್ಯಾನ್ಸ್ಯಶ್ ಬಾಕ್ಸಾಫೀಸ್ ಸುಲ್ತಾನ್ ಎಂದ ಹೊಂಬಾಳೆ: ತಿರುಗಿಬಿದ್ದ ದರ್ಶನ್ ಫ್ಯಾನ್ಸ್

  ಈಗ 'ಕ್ರಾಂತಿ' ಸಿನಿಮಾದ ಸರದಿ. ಕಳೆದ ಹಲವು ದಿನಗಳಿಂದ ಸದ್ದಿಲ್ಲದೆ ಶೂಟಿಂಗ್ ಮಾಡುತ್ತಿರುವ ತಂಡ ಅಭಿಮಾನಿಗಳಿಗೆ ಸಪ್ರೈಸ್‌ ಕೊಟ್ಟಿದೆ. ಕೊನೆಯ ಹಂತದ ಶೂಟಿಂಗ್‌ಗಾಗಿ ವಿದೇಶಕ್ಕೆ ಹಾರಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಕ್ರಾಂತಿ' ಸಿನಿಮಾದ ಅಪ್‌ಡೇಟ್‌ಗಾಗಿ ಮುಂದೆ ಓದಿ.

  ಪೋಲ್ಯಾಂಡ್‌ಗೆ 'ಕ್ರಾಂತಿ' ಟೀಮ್

  ಪೋಲ್ಯಾಂಡ್‌ಗೆ 'ಕ್ರಾಂತಿ' ಟೀಮ್

  ದರ್ಶನ್ ಮುಂದಿನ ಸಿನಿಮಾ 'ಕ್ರಾಂತಿ'. ವಿ.ಹರಿಕೃಷ್ಣ ನಿರ್ದೇಶಿಸುತ್ತಿರುವ ಈ ಸಿನಿಮಾ ಟಾಕಿ ಪೋಷನ್ ಸದ್ದಿಲ್ಲದೆ ನಡೆದಿತ್ತು. ಈಗ ಇಡೀ ತಂಡ ಪೋಲ್ಯಾಂಡ್‌ಗೆ ಪಯಣ ಬೆಳೆಸಿದೆ. ದರ್ಶನ್ ಜೊತೆಗೆ ಡಿಂಪಲ್ ಕ್ವೀನ್ ರಚಿತಾ ರಾಮ್ ನಿರ್ಮಾಪಕಿ ಶೈಲಜಾ ನಾಗ್ ಹಾಗೂ ಅವರ ಪುತ್ರಿ ಪ್ರೈವೆಟ್ ಜೆಟ್‌ನಲ್ಲಿ ಪಯಣ ಬೆಳೆಸಿದ್ದಾರೆ. ಕೊನೆಯ ಹಂತದ ಚಿತ್ರೀಕರಣಕ್ಕೆ 'ಕ್ರಾಂತಿ' ಸಿನಿಮಾ ವಿದೇಶದಲ್ಲಿ ಬೀಡು ಬಿಟ್ಟಿದೆ. ಇವರೊಂದಿಗೆ ನಿರ್ದೇಶಕ ವಿ.ಹರಿಕೃಷ್ಣ ಹಾಗೂ ತಂಡ ಪ್ರತ್ಯೇಕವಾಗಿ ಪಯಣ ಬೆಳೆಸಿದೆ ಎನ್ನಲಾಗಿದೆ.

  'ಕ್ರಾಂತಿ' ಚಿತ್ರಕ್ಕೆ ದರ್ಶನ್ ಪಡೆದ ಸಂಭಾವನೆ ಎಷ್ಟು? ಏನಂತಿದೆ ಸ್ಯಾಂಡಲ್‌ವುಡ್?'ಕ್ರಾಂತಿ' ಚಿತ್ರಕ್ಕೆ ದರ್ಶನ್ ಪಡೆದ ಸಂಭಾವನೆ ಎಷ್ಟು? ಏನಂತಿದೆ ಸ್ಯಾಂಡಲ್‌ವುಡ್?

  'ಕ್ರಾಂತಿ' ಸಾಂಗ್ ಶೂಟಿಂಗ್

  ಪೋಲ್ಯಾಂಡ್‌ನಲ್ಲಿ ದರ್ಶನ್ ಹಾಗೂ ರಚಿತಾ ರಾಮ್ ಅವರ ಸಾಂಗ್ ಶೂಟಿಂಗ್ ಮಾಡಲಿದೆ. ಜೊತೆಗೆ ಕೆಲವು ಪೋಷನ್‌ಗಳನ್ನೂ ಚಿತ್ರೀಕರಣ ಮಾಡಲಿದೆ ಎಂದು ಆಪ್ತವಲಯಗಳು ತಿಳಿಸಿವೆ. ದರ್ಶನ್ ಪ್ರತಿ ಸಿನಿಮಾದಲ್ಲಿಯೂ ಒಂದಲ್ಲ ಒಂದು ಹಾಡನ್ನು ವಿದೇಶದಲ್ಲಿ ಚಿತ್ರೀಕರಣ ಮಾಡುತ್ತಾರೆ. 'ಕ್ರಾಂತಿ' ಸಿನಿಮಾದ ಹಾಡುಗಳನ್ನೂ ವಿದೇಶದಲ್ಲಿ ಚಿತ್ರೀಕರಣ ಮಾಡುತ್ತಿರುವುದರಿಂದ ಡಿ ಬಾಸ್ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.

  ರಚಿತಾ-ದರ್ಶನ್ ಕಾಂಬೋ

  ರಚಿತಾ-ದರ್ಶನ್ ಕಾಂಬೋ

  ಡಿಂಪಲ್ ಕ್ವೀನ್ ಹಾಗೂ ಚಾಲೆಂಜಿಂಗ್ ಸ್ಟಾರ್ ಜೋಡಿಯನ್ನು ತೆರೆಮೇಲೆ ನೋಡುವುದೇ ಒಂದು ಖುಷಿ. ಆದರೆ, ಕೆಲವು ವರ್ಷಗಳಿಂದ ರಚಿತಾ ರಾಮ್ ಹಾಗೂ ದರ್ಶನ್ ಒಟ್ಟಿಗೆ ನಟಿಸಿರಲಿಲ್ಲ. 'ಕ್ರಾಂತಿ' ಸಿನಿಮಾಗಾಗಿ ಮತ್ತೆ ಈ ಜೋಡಿ ತೆರೆಮೇಲೆ ಒಟ್ಟಿಗೆ ಕಾಣಿಸಿಕೊಳ್ಳುತ್ತಿದೆ. ಹೀಗಾಗಿ ಮತ್ತೆ ಈ ಜೋಡಿ ಬಾಕ್ಸಾಫೀಸ್‌ನಲ್ಲಿ ಮೋಡಿ ಮಾಡುವುದು ಗ್ಯಾರಂಟಿ ಎಂದು ಭವಿಷ್ಯ ನುಡಿಯಲಾಗಿದೆ. ಸಿನಿಮಾ ಸೆಟ್ಟೇರಿದಾಗ ರಚಿತಾ ರಾಮ್ " ನಾಲ್ಕೈದು ವರ್ಷದ ಬಳಿಕ ನಾನು ದರ್ಶನ್ ಸರ್ ಅವರೊಂದಿಗೆ ನಟಿಸುತ್ತಿದ್ದೇನೆ. ಆ ಖುಷಿಯನ್ನು ಹೇಳಲು ಅಸಾಧ್ಯ. ತುಂಬಾ ಉತ್ಸಾಹದಿಂದ ಸಿನಿಮಾ ಮಾಡುತ್ತಿದ್ದೇನೆ." ಎಂದು ರಚಿತಾ ರಾಮ್ ಹೇಳಿದ್ದರು.

  4 ವರ್ಷದ ಬಳಿಕ ಮತ್ತೆ ದರ್ಶನ್ ಜೊತೆ ರಚಿತಾ ನಟನೆ: ಕ್ರಾಂತಿ ಬಗ್ಗೆ ಮೊದಲ ಪ್ರತ್ರಿಕ್ರಿಯೆ4 ವರ್ಷದ ಬಳಿಕ ಮತ್ತೆ ದರ್ಶನ್ ಜೊತೆ ರಚಿತಾ ನಟನೆ: ಕ್ರಾಂತಿ ಬಗ್ಗೆ ಮೊದಲ ಪ್ರತ್ರಿಕ್ರಿಯೆ

  'ಕ್ರಾಂತಿ' ರಿಲೀಸ್ ಯಾವಾಗ?

  'ಕ್ರಾಂತಿ' ರಿಲೀಸ್ ಯಾವಾಗ?

  ವಿ.ಹರಿಕೃಷ್ಣ ನಿರ್ದೇಶಿಸುತ್ತಿರುವ ಈ ಸಿನಿಮಾ ಬಹುತೇಕ ಚಿತ್ರೀಕರಣವನ್ನು ಮುಗಿಸಿದೆ. ಪೋಲ್ಯಾಂಡ್‌ನಲ್ಲಿ ನಡೆಯುತ್ತಿರುವ ಕೊನೆಯ ಹಂತ ಶೂಟಿಂಗ್ ಮುಗಿದರೆ ಬಹುತೇಕ ಬಿಡುಗಡೆಗೆ ರೆಡಿಯಾದಂತೆ. ಹೀಗಾಗಿ ಮೂಲಗಳ ಪ್ರಕಾರ, ನವೆಂಬರ್ ತಿಂಗಳಲ್ಲಿ 'ಕ್ರಾಂತಿ' ರಿಲೀಸ್ ಆಗಲಿದೆ ಎಂದು ಆಪ್ತ ಮೂಲಗಳು ಹೇಳುತ್ತಿವೆ.

  English summary
  Darshan, Rachita Ram And Kranti Team In Poland to Shoot Final Schedule, Know More.
  Friday, July 1, 2022, 20:38
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X