Don't Miss!
- News
ಕೇಂದ್ರ ಬಜೆಟ್ 2023: ಬಜೆಟ್ ಬಗ್ಗೆ ಭರವಸೆ ಕಳೆದುಕೊಂಡ ಸಿದ್ದರಾಮಯ್ಯ..!
- Automobiles
ಈ ಕಾರು ಮಾರುಕಟ್ಟೆಗೆ ಬಂದ್ರೆ ಯಾರೂ ದ್ವಿಚಕ್ರ ವಾಹನವನ್ನು ಖರೀದಿಸುವುದಿಲ್ಲ.. ಭಾರತದಲ್ಲಿ ಸಿಗುತ್ತಾ?
- Technology
ಬಿಎಸ್ಎನ್ಎಲ್ನ ಈ ಪೋಸ್ಟ್ಪೇಯ್ಡ್ ಪ್ಲ್ಯಾನ್ ಬೆಲೆ ಅಗ್ಗ; ಆದ್ರೆ, ರೀಚಾರ್ಜ್ ಕಷ್ಟ!
- Sports
ODIನಲ್ಲಿ ಭರ್ಜರಿ ಆಟ, ಆದರೆ ಟಿ20ಯಲ್ಲಿ ವೈಫಲ್ಯ: ಟೀಮ್ ಇಂಡಿಯಾದ 3 ಯುವ ಆಟಗಾರರ ಕಥೆಯಿದು!
- Finance
Economic Survey 2023 : ಭಾರತದ ಬೆಳವಣಿಗೆಗೆ ಐಎಂಎಫ್ ಭರವಸೆ, ಜಾಗತಿಕ ದರ ಇಳಿಸಿದ ಸಂಸ್ಥೆ
- Lifestyle
February 2023 Horoscope : ಫೆಬ್ರವರಿ ತಿಂಗಳ ಭವಿಷ್ಯ: ಮೇಷ-ಮೀನದವರೆಗಿನ ರಾಶಿಗಳ ರಾಶಿಫಲ ಹೇಗಿದೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Darshan Kranti: ದರ್ಶನ್ 'ಕ್ರಾಂತಿ' ಅಡ್ಡಾದಲ್ಲಿ ಏನ್ ನಡೀತಿದೆ? ರಿಲೀಸ್ ಅಪ್ಡೇಟ್ ಇಲ್ಲಿದೆ!
ನಟ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ರಚಿತಾ ರಾಮ್ ಅಭಿನಯದ ಸಿನಿಮಾ 'ಕ್ರಾಂತಿ' ಲಾಂಚ್ ಆಗಿ ಶೂಟಿಂಗ್ ಕೂಡ ಶುರುವಾಗಿದೆ. ಆದರೆ ಹಲವು ದಿನಗಳಿಂದ ಸಿನಿಮಾ ತಂಡ ಚಿತ್ರದ ಬಗ್ಗೆ ಯಾವುದೇ ಅಪ್ಡೇಟ್ ನೀಡಿರಲಿಲ್ಲ. ಯಾಕೆಂದರೆ ಆದಷ್ಟು ಬೇಗ ಶೂಟಿಂಗ್ ಮುಗಿಸೋ ಯೋಜನೆಯಲ್ಲಿದೆ ಚಿತ್ರತಂಡ. ಹಾಗಾಗಿ ಇಡೀ ತಂಡ ನಿರಂತರವಾಗಿ ಚಿತ್ರೀಕರಣದಲ್ಲಿ ಭಾಗಿ ಆಗುತ್ತಿದೆ.
'ರಾಬರ್ಟ್' ಚಿತ್ರದ ಯಶಸ್ಸಿನ ನಂತರ ನಟ ದರ್ಶನ್ ಕೈಗೆತ್ತಿಕೊಂಡಿರುವ ಚಿತ್ರ 'ಕ್ರಾಂತಿ'. 'ಯಜಮಾನ' ಚಿತ್ರ ತಂಡದ ಜೊತೆಗೆ 'ಕ್ರಾಂತಿ' ಮೂಲಕ ದರ್ಶನ್ ಮತ್ತೊಮ್ಮೆ ಕೈ ಜೋಡಿಸಿದ್ದಾರೆ. ಈ ಚಿತ್ರ ಸೆಟ್ಟೇರಿದಾಗಲೇ ಹಲವು ವಿಶೇಷತೆಗಳಿಂದ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಚಿತ್ರದಲ್ಲಿ ದರ್ಶನ್ ಜೊತೆಗೆ ನಟಿ ರಚಿತಾ ರಾಮ್ ಜೋಡಿ ಆಗಿರುವುದು ಕೂಡ ನಿರೀಕ್ಷೆಗೆ ಕಾರಣ ಆಗಿದೆ.
ದರ್ಶನ್
'ಕ್ರಾಂತಿ'
ಸಿನಿಮಾ
ಶೂಟಿಂಗ್
ನಿಂತಿಲ್ಲ:
ಶೀಘ್ರದಲ್ಲೇ
ಮತ್ತೆ
ಚಿತ್ರೀಕರಣ
ಆರಂಭ!
ಕ್ರಾಂತಿ ಚಿತ್ರದ ಅಡ್ಡದಲ್ಲಿ ಏನೆಲ್ಲಾ ನಡೀತಿದೆ. ಸಿನಿಮಾ ಯಾವ ಹಂತದಲ್ಲಿ ಇದೆ. ಇನ್ನು ಸಿನಿಮಾ ರಿಲೀಸ್ ಯಾವಾಗ ಎನ್ನುವ ಬಗ್ಗೆ ಚಿತ್ರದ ನಿರ್ಮಾಪಕಿ ಶೈಲಜಾ ನಾಗ್ ಅವರು ಫಿಲ್ಮೀ ಬೀಟ್ ಜೊತೆಗೆ ಮಾತನಾಡಿದ್ದಾರೆ. ಅವರು ಚಿತ್ರದ ಕುರಿತು ಹೇಳಿದ್ದೇನು ಎನ್ನುವ ಬಗ್ಗೆ ಮುಂದೆ ಓದಿ...

ಬೆಂಗಳೂರಿನಲ್ಲಿ 'ಕಾಂತ್ರಿ' ಭರ್ಜರಿ ಶೂಟಿಂಗ್!
ನಟ ದರ್ಶನ್ ಕ್ರಾಂತಿ ಚಿತ್ರತಂಡ ಚಿತ್ರೀಕರಣದಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದೆ. ಸಿನಿಮಾದ ಶೂಟಿಂಗ್ ಶುರವಾದ ದಿನದಿಂದಲೂ ನಿರಂತರವಾಗಿ ಶೂಟಿಂಗ್ ಮಾಡಲಾಗುತ್ತಿದೆಯಂತೆ. ಆದಷ್ಟು ಬೇಗ ಸಿನಿಮಾ ಮುಗಿಸುವ ಯೋಜನೆಯಲ್ಲಿ ಇದೆಯಂತೆ ಚಿತ್ರತಂಡ. ಹಾಗಾಗಿ ಚಿತ್ರವನ್ನು ಹಂತ, ಹಂತವಾಗಿ ಶೂಟಿಂಗ್ ಮಾಡದೇ, ಶೆಡ್ಯೂಲ್ ಬ್ರೇಕ್ ಮಾಡದೆ ನಿರಂತರವಾಗಿ ಶೂಟಿಂಗ್ ಮಾಡಲಾಗುತ್ತಿದೆ. ಸದ್ಯ ಬೆಂಗಳೂರಿನಲ್ಲೆ ಕ್ರಾಂತಿ ಚಿತ್ರದ ಶೂಟಿಂಗ್ ನಡೆಯುತ್ತಿದೆ. ನಟ ದರ್ಶನ್ ಮತ್ತು ಇತರೆ ಕಲಾವಿದರು ಚಿತ್ರೀಕರಣದಲ್ಲಿ ಭಾಗಿ ಆಗುತ್ತಿದ್ದಾರೆ.
'ಕ್ರಾಂತಿ'
ಚಿತ್ರಕ್ಕೆ
ದರ್ಶನ್
ಪಡೆದ
ಸಂಭಾವನೆ
ಎಷ್ಟು?
ಏನಂತಿದೆ
ಸ್ಯಾಂಡಲ್ವುಡ್?

50% ಚಿತ್ರೀಕರಣ ಕಂಪ್ಲೀಟ್: ಮಾಹಿತಿ ನೀಡಿದ ನಿರ್ಮಾಪಕಿ
ಕ್ರಾಂತಿ ಚಿತ್ರದ ಶೂಟಿಂಗ್ ಬಗ್ಗೆ ನಿರ್ಮಾಪಕಿ ಶೈಲಜಾ ನಾಗ್ ಮಾತನಾಡಿದ್ದಾರೆ. ಸದ್ಯ ಚಿತ್ರದ ಅರ್ಧದಷ್ಟು ಭಾಗದ ಚಿತ್ರೀಕಣ ಮುಗಿದೆಯಂತೆ. ಸದ್ಯದಲ್ಲೇ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಕೂಡ ಆರಂಭವಾಗಲಿವೆ. ಒಮ್ಮೆ ಚಿತ್ರೀಕರಣ ಮುಗಿದರೆ, ಬಳಿಕ ಚಿತ್ರದ ರಿಲೀಸ್ ಮತ್ತು ಇನ್ನಿತರೆ ಅಪ್ಡೇಟ್ ಬಗ್ಗೆ ಮಾಹಿತಿ ನೀಡಲಿದೆ ಚಿತ್ರತಂಡ. ಈ ಹಿಂದೆ ರಿಲೀಸ್ ಆಗಿರುವ ಚಿತ್ರದ ಟೀಸರ್ ದರ್ಶನ್ ಪಾತ್ರದ ಬಗ್ಗೆ ಕುತೂಹಲ ಹುಟ್ಟಿಸಿದೆ.

2022 ರಲ್ಲೇ ಕ್ರಾಂತಿ ರಿಲೀಸ್!
ಇನ್ನು ಚಿತ್ರತಂಡ ಅಂದುಕೊಂಡ ಹಾಗೆ ಸಿನಿಮಾ ಶೂಟಿಂಗ್ ಮತ್ತು ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಮುಗಿದು ಸಿನಿಮಾ ಸಂಪೂರ್ಣ ರೆಡಿಯಾದರೆ ಇದೆ ವರ್ಷ ಡಿಸೆಂಬರ್‌ಗೆ 'ಕ್ರಾಂತಿ' ರಿಲೀಸ್ ಆಗುವ ಸಾಧ್ಯತೆ ಇದೆ. ಆದರೆ ಈ ಬಗ್ಗೆ ಚಿತ್ರತಂಡ ಖಚಿತವಾಗಿ ಹೇಳಲು ತಯಾರಿಲ್ಲ. ಯಾಕೆಂದರೆ ಇನ್ನು ಕೂಡ ಸಿನಿಮಾ ಶೂಟಿಂಗ್ ಹಂತದಲ್ಲೇ ಇದೆ. ಚಿತ್ರೀಕರಣ ಮುಗಿದ ಬಳಿಕ ರಿಲೀಸ್ ಬಗ್ಗೆ ಚಿತ್ರತಂಡ ಅಧಿಕೃತ ಮಾಹಿತಿ ನೀಡಲಿದೆ.

ದರ್ಶನ್, ರಚಿತಾ ಜೋಡಿ ಜಾದು ಮಾಡುತ್ತಾ?
ಕ್ರಾಂತಿ ಚಿತ್ರದಲ್ಲಿ ಕನ್ನಡದ ಲಕ್ಕಿ ಜೋಡಿ ಮತ್ತೆ ಒಂದಾಗಿದೆ. ಈ ಚಿತ್ರದ ಮೂಲಕ 8 ವರ್ಷಗಳ ಬಳಿಕ ನಟಿ ರಚಿತಾ ರಾಮ್ ಮತ್ತೆ ದರ್ಶನ್ ಜೊತೆಗೆ ಅಭಿನಯಿಸುತ್ತಿದ್ದಾರೆ. ಇವರು ಈ ಹಿಂದೆ ಅಭಿನಯಿಸಿದ ಚಿತ್ರಗಳು ಸೂಪರ್ ಹಿಟ್ ಆಗಿವೆ. ಹಾಗಾಗಿ 'ಕ್ರಾಂತಿ' ಕೂಡ ಚಿತ್ರರಂಗದಲ್ಲಿ ದೊಡ್ಡ ಮಟ್ಟದ ಕ್ರಾಂತಿ ಬರೆಯಲಿದೆ ಎನ್ನಲಾಗುತ್ತಿದೆ. ಈ ಚಿತ್ರದಲ್ಲೂ ರಚ್ಚು, ದಚ್ಚು ಜೋಡಿ ಜಾದು ಮಾಡಲಿದೆಯಾ ಎಂದು ನೋಡಬೇಕು.