»   » ಟ್ವಿಟ್ಟರ್ ನಲ್ಲಿ ನಟ ದರ್ಶನ್ ಹೊಸ ಮೈಲಿಗಲ್ಲು

ಟ್ವಿಟ್ಟರ್ ನಲ್ಲಿ ನಟ ದರ್ಶನ್ ಹೊಸ ಮೈಲಿಗಲ್ಲು

Posted By:
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ತನ್ನದೇ ಆದ ಅಭಿಮಾನಿ ಬಳಗವಿದೆ. ಅವರಲ್ಲಿ ಬಹುತೇಕರಿಗೆ ಟ್ವಿಟ್ಟರ್ ಅಂದ್ರೆ ಏನೂ ಎಂಬುದೇ ಗೊತ್ತಿರಲ್ಲ. ಇನ್ನೂ ಕೆಲವರಿಗೆ ಗೊತ್ತಿದ್ದರೂ ಫಾಲೋ ಮಾಡುತ್ತಿರಲ್ಲ. ಮತ್ತೂ ಕೆಲವರಿಗೆ ಗೊತ್ತಿರುತ್ತದೆ ಆದರೆ ಅಕೌಂಟೇ ಕ್ರಿಯೇಟ್ ಮಾಡಿರಲ್ಲ.

ಇದೆಲ್ಲಾ ಯಾಕೆ ಹೇಳಬೇಕಾಯಿತು ಎಂದರೆ, ನಟ ದರ್ಶನ್ ಅವರಿಗೆ ಅತಿದೊಡ್ಡ ಅಭಿಮಾನಿ ಬಳಗವಿದೆ. ಅವರೆಲ್ಲಾ ಟ್ವಿಟ್ಟರ್ ನಲ್ಲಿದ್ದು ದರ್ಶನ್ ಅವರನ್ನು ಫಾಲೋ ಮಾಡುವಂತಿದ್ದಿದ್ದರೆ ಇಷ್ಟೊತ್ತಿಗೆ ಟ್ವಿಟ್ಟರ್ ನಲ್ಲಿ ಪೂನಂ ಪಾಂಡೆಯನ್ನೂ ಮೀರಿಸುತ್ತಿದ್ದರು.

ಇರಲಿ ಈಗ ವಿಚಾರ ಅದಲ್ಲ. ಇಂದಿಗೆ (ಜು.29, 2013) ದರ್ಶನ್ ಟ್ವಿಟ್ಟರ್ ಫಾಲೋವರ್ಸ್ ಸಂಖ್ಯೆ 10 ಸಾವಿರ ಗಡಿದಾಟಿದೆ. ಇದನ್ನು ದರ್ಶನ್ ಅವರು ತುಂಬು ಹೃದಯದಿಂದ ಸ್ವಾಗತಿಸಿದ್ದು, ತನ್ನ ಟ್ವಿಟ್ಟರ್ ಅಭಿಮಾನಿಗಳಿಗೆ ಥ್ಯಾಂಕ್ಸ್ ಹೇಳಿದ್ದಾರೆ.


"ನನ್ನ ಹಾಗೂ ನಮ್ಮ ಕುಟುಂಬಿಕರ ಮೇಲೆ ನೀವಿಟ್ಟಿರುವ ಪ್ರೀತಿ ವಿಶ್ವಾಸಕ್ಕೆ ಆಭಾರಿಯಾಗಿದ್ದೇನೆ. ಲವ್ ಯು ಆಲ್ ನಿಮ್ಮ ದಾಸ ದರ್ಶನ್" ಎಂದು ಟ್ವೀಟಿಸಿ ತಮ್ಮ ಕೃತಜ್ಞತೆಗಳನ್ನು ತಿಳಿಸಿದ್ದಾರೆ. ದರ್ಶನ್ ಪಾಲೋವರ್ಸ್ ಸಂಖ್ಯೆ ಹೀಗೇ ವೃದ್ಧಿಸುತ್ತಿರಲಿ ಎಂದು ಹಾರೈಸೋಣ.

ಅಂದಹಾಗೆ ಟ್ವಿಟ್ಟರ್ ನಲ್ಲಿ ಸಖತ್ ಆಕ್ಟೀವ್ ಆಗಿರುವ ಕಿಚ್ಚ ಸುದೀಪ್ ಅವರಿಗೆ 1 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಇದ್ದಾರೆ. ಟ್ವಿಟ್ಟರ್ ಬಳಕೆಯಲ್ಲಿ ಪಳಗಿರುವ ಗೋಲ್ಡನ್ ಗರ್ಲ್ ರಮ್ಯಾ ಅವರಿಗೆ 1.50 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಇದ್ದಾರೆ.

ಇನ್ನು ಪ್ರಕಾಶ್ ರೈ ಅವರಿಗೆ 3.50 ಲಕ್ಷಕ್ಕೂ ಅಧಿಕ, ನಟಿ ನಿಧಿ ಸುಬ್ಬಯ್ಯ ಅವರಿಗೆ 15 ಸಾವಿರ ಚಿಲ್ಲರೆ, ಪ್ರಜ್ವಲ್ ದೇವರಾಜ್ ಅವರಿಗೆ 3.5 ಸಾವಿರ, ಚಿರಂಜೀವಿ ಸರ್ಜಾ ಅವರಿಗೆ 7.50 ಸಾವಿರ, ರಮೇಶ್ ಅರವಿಂದ್ ಅವರಿಗೆ 4 ಸಾವಿರ ಚಿಲ್ಲರೆ ಫಾಲೋವರ್ಸ್ ಇದ್ದಾರೆ. (ಒನ್ಇಂಡಿಯಾ ಕನ್ನಡ)

<blockquote class="twitter-tweet blockquote"><p>Hi to all my dears today reached 10k followers really I am very thankful for all u r support & love… <a href="http://t.co/dNfUuxcrob">http://t.co/dNfUuxcrob</a></p>— Darshan Thoogudeepa (@dasadarshan) <a href="https://twitter.com/dasadarshan/statuses/361509707019587586">July 28, 2013</a></blockquote> <script async src="//platform.twitter.com/widgets.js" charset="utf-8"></script>

English summary
Kannada actor, Challenging Star Darshan reached 10k followers on Social Media - Twitter. The actor in a thank you tweet said - "Hi to all my dears today reached 10k followers really I am very thankful for all u r support & love towards me & my family. Good night to all my fans love u all with lots of love, Nimma Dassa Darshan."
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada