For Quick Alerts
  ALLOW NOTIFICATIONS  
  For Daily Alerts

  'ಯಾರದ್ದೂ ಕರೆಕ್ಟ್ ಪಿಕ್ಚರ್ ಸಿಗಲ್ಲ': ಕಲೆಕ್ಷನ್ ಬಗ್ಗೆ 'ಯಜಮಾನ' ನೇರ ಮಾತು

  |
  Yajamana Movie: ಯಾರದ್ದೂ ಕರೆಕ್ಟ್ ಪಿಕ್ಚರ್ ಸಿಗಲ್ಲ': ಕಲೆಕ್ಷನ್ ಬಗ್ಗೆ 'ಯಜಮಾನ' ನೇರ ಮಾತು |FILMIBEAT KANNADA

  ಹೇ....ಆ ಸಿನಿಮಾ ಮೊದಲ ದಿನ ಇಷ್ಟು ಕಲೆಕ್ಷನ್ ಮಾಡಿದೆಯಂತೆ. ಈ ಸಿನಿಮಾ ಮೊದಲ ಮೂರು ದಿನಕ್ಕೆ ರೆಕಾರ್ಡ್ ಬ್ರೇಕ್ ಮಾಡಿದೆಯಂತೆ. ಅದು ಅಷ್ಟು ಕೋಟಿ ಗಳಿಸಿದೆ, ಇದು ಇಷ್ಟು ಕೋಟಿ ಗಳಿಸಿದೆಯಂತೆ....ಹೀಗೆ ಕನ್ನಡ ಸಿನಿಮಾವೊಂದು ರಿಲೀಸ್ ಆದ ಬಳಿಕ ಗಾಂಧಿನಗರದಲ್ಲಿ ಬಗೆಬಗೆಯ ಮಾತುಗಳು ಕೇಳಿಬರುತ್ತೆ.

  ಆದ್ರೆ, ಯಾರೊಬ್ಬರು ನಿಖರವಾದ ಮಾಹಿತಿಯನ್ನ ಬಿಟ್ಟುಕೊಡುವುದಿಲ್ಲ. ನಿಮ್ಮ ಚಿತ್ರದ ಕಲೆಕ್ಷನ್ ಎಷ್ಟು ಎಂದು ಕೇಳಿದ್ರೆ, ಹಾಕಿದ ಬಂಡವಾಳಕ್ಕಿಂತ ಲಾಭ ಬಂದಿದೆ. ರೆಕಾರ್ಡ್ ಬ್ರೇಕ್ ಮಾಡಿದೆ ಎಂದು ಹೇಳ್ತಾರೆ ಹೊರತು ಪಕ್ಕಾ ಅಂಕಿ ಅಂಶಗಳನ್ನ ಅಧಿಕೃತವಾಗಿ ಬಹಿರಂಗಪಡಿಸಿಲ್ಲ.

  ದರ್ಶನ್ ಭಾಗಿಯಾಗಿದ್ದ 'ಉದ್ಘರ್ಷ' ಕಾರ್ಯಕ್ರಮಕ್ಕೆ ಸುದೀಪ್ ಬಂದಿಲ್ಲ ಯಾಕೆ?

  ಈ ಬಗ್ಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ನೇರವಾಗಿ ಉತ್ತರಿಸಿದ್ದಾರೆ. ಕಲೆಕ್ಷನ್ ಬಗ್ಗೆ ಜನರು ಮಾತಾನಾಡೋದೆ ಸರಿ, ಯಾವುದು ಸತ್ಯವಲ್ಲ ಎಂದು ಡಿ ಬಾಸ್ ಪರೋಕ್ಷವಾಗಿ ಬಿಚ್ಚಿಟ್ಟಿದ್ದಾರೆ. ಹಾಗಾದ್ರೆ, ಕನ್ನಡ ಸಿನಿಮಾಗಳ ಕಲೆಕ್ಷನ್ ಸುಳ್ಳಾ? ಯಾಕೆ ಯಾರೂ ಅಧಿಕೃತವಾಗಿ ಹೇಳಲ್ಲ? ಈ ಬಗ್ಗೆ ದರ್ಶನ್ ಏನಂದ್ರು? ಮುಂದೆ ಓದಿ.....

  ಯಜಮಾನ ಕಲೆಕ್ಷನ್ ಎಷ್ಟು?

  ಯಜಮಾನ ಕಲೆಕ್ಷನ್ ಎಷ್ಟು?

  ಯಜಮಾನ ಸಿನಿಮಾ ಅತಿ ದೊಡ್ಡ ಮಟ್ಟದಲ್ಲಿ ಬಿಡುಗಡೆಯಾಗಿತ್ತು. ಹಾಗಾಗಿ, ಚಿತ್ರದ ಕಲೆಕ್ಷನ್ ಮೇಲೆ ಸಹಜವಾಗಿ ಕುತೂಹಲವಿರುತ್ತೆ. ನಿನ್ನೆಯಷ್ಟೇ ಸಕ್ಸಸ್ ಮೀಟ್ ಹಮ್ಮಿಕೊಂಡಿದ್ದ ಚಿತ್ರತಂಡಕ್ಕೆ ಕೆಲಕ್ಷನ್ ಎಷ್ಟು ಎಂಬ ಪ್ರಶ್ನೆ ಎದುರಾಯಿತು. ಈ ಬಗ್ಗೆ ಉತ್ತರಿಸಿದ ದರ್ಶನ್ ''ಕಲೆಕ್ಷನ್ ಅಂಕಿ ಅಂಶ ತಗೊಂಡು ನೀವೇನ್ ಮಾಡ್ತೀರಾ, ಎಲ್ಲರದ್ದು ಉಹಾಪೋಹಾ ಬಿಡಿ'' ಎಂದಿದ್ದಾರೆ.

  ದರ್ಶನ್ ಪುತ್ರ ವಿನೀಶ್ ಚಿತ್ರರಂಗಕ್ಕೆ ಬರೋದು ನೂರಕ್ಕೆ ನೂರರಷ್ಟು ನಿಜ

  ಯಾರದ್ದೂ ಸರಿಯಾದ ವಿವರ ಸಿಗಲ್ಲ

  ಯಾರದ್ದೂ ಸರಿಯಾದ ವಿವರ ಸಿಗಲ್ಲ

  ''ಎಲ್ಲರದ್ದೂ ಊಹಾಪೋಹಗಳನ್ನ ಹಾಕಿಕೊಂಡಿರುವುದನ್ನ ಅಷ್ಟೇ ನಾವು ನೋಡಿರುವುದು. ನಾವು ಇಂಡಸ್ಟ್ರಿಯಲ್ಲಿ ಇಷ್ಟು ದಿನ ಮಣ್ಣು ಎತ್ತಿದ್ದೀವಿ. ಯಾವ ಸಿನಿಮಾ, ಯಾವ ಥಿಯೇಟರ್ ನಲ್ಲಿ ಓಡಿದ್ರೆ ಎಷ್ಟು ದುಡ್ಡು ಬರುತ್ತೆ ಎನ್ನುವುದು ಎಲ್ಲರಿಗೂ ಗೊತ್ತಿರೋದೇ. ಇದು ಕ್ಲೀನ್ ಪಿಕ್ಚರ್'' ಎಂದು ದರ್ಶನ್ ಓಪನ್ ಆಗಿ ಮಾತನಾಡಿದ್ರು.

  ದರ್ಶನ್ ಗೆ 1 ಕೆಜಿ ತೂಕದ ವಾಚ್ ಉಡುಗೊರೆ ನೀಡಿದ ಠಾಕೂರ್ ಅನೂಪ್

  ಕನ್ನಡ ಇಂಡಸ್ಟ್ರಿಯಲ್ಲಿ ಗಳಿಕೆ ಸುಳ್ಳಾ?

  ಕನ್ನಡ ಇಂಡಸ್ಟ್ರಿಯಲ್ಲಿ ಗಳಿಕೆ ಸುಳ್ಳಾ?

  ದರ್ಶನ್ ಅವರ ಮಾತು ಕೇಳಿದ್ಮೇಲೆ ಕನ್ನಡ ಇಂಡಸ್ಟ್ರಿಯಲ್ಲಿ ಬಹುತೇಕ ಚಿತ್ರಗಳ ಕಲೆಕ್ಷನ್ ಸುಳ್ಳಾ ಎಂಬ ಅನುಮಾನ ಬರದೇ ಇರಲ್ಲ. ಮೂರೇ ದಿನಕ್ಕೆ ಅಷ್ಟು ಕೋಟಿ ಗಳಿಕೆ ಮಾಡಿದೆ, ಒಂದೇ ವಾರಕ್ಕೆ ರೆಕಾರ್ಡ್ ಬ್ರೇಕ್ ಮಾಡಿದೆ ಅಂತ ಸುದ್ದಿ ಮಾಡ್ತಾರೆ. ಆದ್ರೆ, ಅಧಿಕೃತವಾಗಿ ಅಂಕಿ ಅಂಶಗಳು ಯಾವುದು ಸತ್ಯವಿರಲ್ಲ ಎನ್ನುವುದು ವಾಸ್ತವನಾ? ಗಳಿಕೆ ಬಗ್ಗೆ ಹೇಳಿಕೊಳ್ಳುವುದು ಬರಿ ಪ್ರಚಾರಕ್ಕಾ?

  ಮಂಡ್ಯದಲ್ಲಿ ಸುಮಲತಾ-ನಿಖಿಲ್ ಸ್ಪರ್ಧೆ: ದರ್ಶನ್, ಸುದೀಪ್, ಯಶ್ ನಿಲುವೇನು?

  ಸಿನಿಮಾ ಸಕ್ಸಸ್ ಹೇಳೋರು ಗಳಿಕೆ ಯಾಕೆ ಹೇಳಲ್ಲ

  ಸಿನಿಮಾ ಸಕ್ಸಸ್ ಹೇಳೋರು ಗಳಿಕೆ ಯಾಕೆ ಹೇಳಲ್ಲ

  ಬಾಲಿವುಡ್, ಟಾಲಿವುಡ್, ಕಾಲಿವುಡ್ ಅವರೆಲ್ಲಾ ಕಲೆಕ್ಷನ್ ಬಗ್ಗೆ ಅಧಿಕೃತವಾಗಿ ಹೇಳ್ತಾರೆ. ಅದು ನಿಜಕ್ಕೂ ಅಷ್ಟು ದುಡ್ಡ ಗಳಿಸಿರುತ್ತೋ ಇಲ್ವೋ ಗೊತ್ತಿಲ್ಲ. ಬಟ್, ಒಂದು ಅಂಕಿ ಅಂಶವಾದ್ರೂ ಹೇಳಿಕೊಳ್ತಾರೆ. ಬಟ್, ಕನ್ನಡದಲ್ಲಿ ಸಿನಿಮಾ ಸಕ್ಸಸ್, ದುಡ್ಡು ಮಾಡಿದೆ ಎನ್ನುವುದು ಬಿಟ್ಟರೇ ಅಂದಾಜಿಗಾದರೂ ಫಿಗರ್ಸ್ ಹೇಳಲ್ಲ. ಇದು ಸಹಜವಾಗಿ ಅನುಮಾನ ಮೂಡಿಸುತ್ತೆ.

  English summary
  Challenging star darshan has react about yajamana movie collection in success press meet at sheraton hotel. Yajamana movie has released march 1st. directed by harikrishna.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X