twitter
    For Quick Alerts
    ALLOW NOTIFICATIONS  
    For Daily Alerts

    ನಮ್ಮಲ್ಲಿರೋರು ಮೊದಲು ಕನ್ನಡ ಅಭಿಮಾನ ಬೆಳೆಸಿಕೊಳ್ಳಬೇಕು; ಫಿಲ್ಮ್ ಛೇಂಬರ್ ನಲ್ಲಿ ಗುಡುಗಿದ ದರ್ಶನ್

    |

    ತೆಲುಗಿನಲ್ಲಿ ಕನ್ನಡದ ರಾಬರ್ಟ್ ಸಿನಿಮಾ ರಿಲೀಸ್ ಗೆ ಅವಕಾಶ ನೀಡುತ್ತಿಲ್ಲ ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಇಂದು (ಜನವರಿ 29) ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದಾರೆ. ಬಹುಕಾಲದ ಬಳಿಕ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಆಗಮಿಸಿದ ದರ್ಶನ್ ಫಿಲ್ಮ್ ಛೇಂಬರ್ ಅಧ್ಯಕ್ಷರ ಜೊತೆ ಮಾತನಾಡಿ, ಸಮಸ್ಯೆ ಬಗೆಹರಿಸಿಕೊಡುವಂತೆ ಮನವಿ ಮಾಡಿದ್ದಾರೆ. ದರ್ಶನ್ ಜೊತೆ ರಾಬರ್ಟ್ ಸಿನಿಮಾದ ನಿರ್ಮಾಪಕ ಉಮಾಪತಿ ಸಹ ಆಗಮಿಸಿದ್ದರು.

    Recommended Video

    ಇಲ್ಲಿ ಯಾರಿಗೂ ಕನ್ನಡ ಅಭಿಮಾನ ಇಲ್ಲ ಅಂತ ಓಪನ್ ಆಗಿ ಹೇಳ್ತೀನಿ | Oneindia Kannada

    ಬಹುನಿರೀಕ್ಷೆಯ ರಾಬರ್ಟ್ ಸಿನಿಮಾ ಮಾರ್ಚ್ 11ರಂದು ತೆರೆಗೆ ಬರುತ್ತಿದೆ. ಕನ್ನಡದ ಜೊತೆಗೆ ತೆಲುಗಿನಲ್ಲೂ ಮಾರ್ಚ್ 11ಕ್ಕೆ ರಿಲೀಸ್ ಮಾಡಲು ಪ್ಲಾನ್ ಮಾಡಿದ್ದ ರಾಬರ್ಟ್ ತಂಡಕ್ಕೆ ತೆಲುಗು ಸಿನಿಮಾರಂಗ ಬ್ರೇಕ್ ಹಾಕಿದೆ. ತೆಲುಗಿನಲ್ಲಿ ಬೇರೆ ಬೇರೆ ಸಿನಿಮಾಗಳು ರಿಲೀಸ್ ಆಗುತ್ತಿರುವ ಕಾರಣ ಕನ್ನಡದ ರಾಬರ್ಟ್ ಸಿನಿಮಾ ರಿಲೀಸ್ ಗೆ ಅವಕಾಶ ನೀಡುವುದಿಲ್ಲ ಎಂದು ಹೇಳುತ್ತಿದ್ದಾರೆ ಎಂದು ದರ್ಶನ್ ಹೇಳಿದ್ದಾರೆ. ಫಿಲ್ಮ್ ಚೇಂಬರ್ ಅವರ ಜೊತೆ ಮಾತುಕತೆ ನಡೆಸಿ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ದರ್ಶನ್, 'ನಮ್ಮಲ್ಲಿರೋರು ಮೊದಲು ಕನ್ನಡ ಅಭಿಮಾನ ಬೆಳೆಸಿಕೊಳ್ಳಬೇಕು' ಎಂದು ಹೇಳಿದ್ದಾರೆ. ಮುಂದೆ ಓದಿ.

    ಕನ್ನಡ ಹೀರೋಗಳನ್ನು ಕಂಡು ಹೆದರಿತಾ ತೆಲುಗು ಚಿತ್ರರಂಗ? ಡಿ ಬಾಸ್ ಹೇಳಿದ್ದರ ಅರ್ಥವೇನು?ಕನ್ನಡ ಹೀರೋಗಳನ್ನು ಕಂಡು ಹೆದರಿತಾ ತೆಲುಗು ಚಿತ್ರರಂಗ? ಡಿ ಬಾಸ್ ಹೇಳಿದ್ದರ ಅರ್ಥವೇನು?

    ಅವರ ಹೀರೋಗಳು ಬಂದು ಇಲ್ಲಿ ತೊಂದರೆ ಕೊಡುತ್ತಿಲ್ಲವಾ?

    ಅವರ ಹೀರೋಗಳು ಬಂದು ಇಲ್ಲಿ ತೊಂದರೆ ಕೊಡುತ್ತಿಲ್ಲವಾ?

    'ಅವರು (ತೆಲುಗು ಸಿನಿಮಾರಂಗ) ಹೇಳುತ್ತಿರುವುದು, ನಾಲ್ಕು ಯಾವುದೊ ಸಣ್ಣ ಸಿನಿಮಾಗಳಿವೆ. ನಿಮ್ಮ ಹೀರೋಗಳು ಬಂದರೆ ನಮಗೆ ಇಲ್ಲಿ ಕಷ್ಟ ಆಗುತ್ತೆ ಅಂತ. ಆದರೆ ಅವರ ಹೀರೋಗಳು ಬಂದು ಇಲ್ಲಿ ತೊಂದರೆ ಕೊಡುತ್ತಿಲ್ಲವಾ, ನಾವು ಆ ತೊಂದರೆ ತಗೋತಿವಿ. ಅಂದ್ಮೇಲೆ ಕನ್ನಡದ ಸಿನಿಮಾಗಳಿಗೆ ಯಾಕೆ ಅವಕಾಶ ನೀಡುತ್ತಿಲ್ಲ' ಎಂದು ಪ್ರಶ್ನಿಸಿದ್ದಾರೆ.

    ಮೊದಲು ಕನ್ನಡ ಅಭಿಮಾನ ಬೆಳೆಸಿಕೊಳ್ಳಬೇಕು

    ಮೊದಲು ಕನ್ನಡ ಅಭಿಮಾನ ಬೆಳೆಸಿಕೊಳ್ಳಬೇಕು

    'ನಮ್ಮಲ್ಲಿ ಇರೋರು ಮೊದಲು ಕನ್ನಡ ಅಭಿಮಾನ ಬೆಳೆಸಿಕೊಳ್ಳಬೇಕು. ತಮಿಳು ಅಥವಾ ತೆಲುಗಿನವರಿಗೆ ಇರುವ ಭಾಷಾ ಅಭಿಮಾನ ನಮ್ಮರಿಗೆ ಕಿಂಚಿತ್ತು ಇಲ್ಲ. ಇದನ್ನ ನಾನು ಓಪನ್ ಆಗಿ ಹೇಳುತ್ತೇನೆ. ತಮಿಳು, ತೆಲುಗಿನವರು ಬಂದ್ರೆ ಅವರ ಜೊತೆ ತಮಿಳು, ತೆಲುಗಿನಲ್ಲೇ ಮಾತನಾಡುತ್ತಾರೆ. ಅವರು ಕನ್ನಡದಲ್ಲಿ ಮಾತನಾಡುತ್ತಾರಾ?' ಎಂದಿದ್ದಾರೆ.

    'ರಾಬರ್ಟ್' ಬಿಡುಗಡೆಗೆ ಅಡ್ಡಿ; ಫಿಲ್ಮ್ ಛೇಂಬರ್ ಗೆ ಆಗಮಿಸಿದ ದರ್ಶನ್'ರಾಬರ್ಟ್' ಬಿಡುಗಡೆಗೆ ಅಡ್ಡಿ; ಫಿಲ್ಮ್ ಛೇಂಬರ್ ಗೆ ಆಗಮಿಸಿದ ದರ್ಶನ್

    ಮಾರ್ಕೆಟ್ ಕಬಳಿಸುತ್ತೇವೆ ಎನ್ನುವ ಭಯ ಶುರುವಾಗಿದೆ

    ಮಾರ್ಕೆಟ್ ಕಬಳಿಸುತ್ತೇವೆ ಎನ್ನುವ ಭಯ ಶುರುವಾಗಿದೆ

    'ಅವರಿಗೆ ಮಾರ್ಕೆಟ್ ಕಬಳಿಸುತ್ತೇವೆ ಎನ್ನುವ ಭಯ ಶುರುವಾಗಿದೆ. ಅವರು ನಿಧಾನವಾಗಿ ಒಂದೊಂದೆ ಸಿನಿಮಾ ಮೂಲಕ ಕರ್ನಾಟಕಕ್ಕೆ ಎಂಟ್ರಿ ಕೊಟ್ರು. ಇದೀಗ ಗ್ರ್ಯಾಂಡ್ ಆಗಿ ಬರ್ತಿದ್ದಾರೆ. ನಾವು ಈಗ ಹಾಗೆ ಮಾಡೋಣ. ನನ್ನದು 50 ಸಿನಿಮಾಗಳು ಆಯಿತು. ನನ್ನ ಕತೆ ಬಿಡಿ. ಇವತ್ತು ನಮ್ಮ ಯಂಗ್ ಸ್ಟರ್ಸ್ ಗಳ ಕತೆ ಏನು? ಎಂದು ದರ್ಶನ್ ಹೇಳಿದ್ದಾರೆ.

    ಸಾರಾ ಗೋವಿಂದ್ ಮಾತು

    ಸಾರಾ ಗೋವಿಂದ್ ಮಾತು

    ಈ ಬಗ್ಗೆ ಮಾತನಾಡಿದ ಸಾರಾ ಗೋವಿಂದ್, ರಾಬರ್ಟ್ ರಿಲೀಸ್ ಮಾಡಲು ಬಿಟ್ಟಿಲ್ಲ ಎಂದರೆ ಮುಂದಿನ ದಿನಗಳಲ್ಲಿ ಪರಿಣಾಮ ಎದುರಿಸಬೇಕಾಗುತ್ತೆ. ಮುಂದಿನ ಸಮಸ್ಯೆಗೆ ಅವರೇ ದಾರಿ ಮಾಡಿಕೊಡುತ್ತಿದ್ದಾರೆ ಅಷ್ಟೆ. ಸೌತ್ ಫಿಲ್ಮ್ ಛೇಂಬರ್ ಅಧ್ಯಕ್ಷ ಪ್ರಸಾದ್ ಹತ್ರ ಮಾತನಾಡಿದ್ದೇವೆ. ಅವರು ಭರವಸೆ ನೀಡಿದ್ದಾರೆ. ಇಂಥ ಯಾವುದೇ ಬೆಳವಣಿಗೆ ಅವಕಾಶ ಕೊಡಲ್ಲ ಎಂದು ಹೇಳಿದ್ದಾರೆ ಅಂತ ಸಾರಾ ಗೋವಿಂದ್ ಹೇಳಿದ್ದಾರೆ.

    English summary
    Challenging star Darshan reaction after complaint Against Telugu Industry in Karnataka Film Chamber.
    Friday, January 29, 2021, 15:26
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X