»   » 'ಭೀಮ'ನನ್ನ ಆಯ್ಕೆ ಮಾಡಿದ್ದು ದರ್ಶನ್! ದಚ್ಚು ಬಗ್ಗೆ 'ಡ್ಯಾನಿಶ್' ಹೇಳಿದ್ದೇನು?

'ಭೀಮ'ನನ್ನ ಆಯ್ಕೆ ಮಾಡಿದ್ದು ದರ್ಶನ್! ದಚ್ಚು ಬಗ್ಗೆ 'ಡ್ಯಾನಿಶ್' ಹೇಳಿದ್ದೇನು?

Posted By:
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯಿಸಲಿರುವ 50ನೇ ಚಿತ್ರ 'ಕುರುಕ್ಷೇತ್ರ'ಕ್ಕೆ ದಿನಗಣನೆ ಶುರುವಾಗಿದೆ. ಮುಂದಿನ ವಾರ ಈ ಸಿನಿಮಾ ಅದ್ಧೂರಿಯಾಗಿ ಸೆಟ್ಟೇರಲಿದೆ. 'ಕುರುಕ್ಷೇತ್ರ'ಕ್ಕೆ ಬಹುತೇಕ ಪಾತ್ರಗಳು ಅಂತಿಮವಾಗಿದ್ದು, ಇನ್ನು ಕೆಲವು ಪಾತ್ರಗಳ ಆಯ್ಕೆ ನಡೆಯುತ್ತಿದೆ.

ಅಂದ್ಹಾಗೆ, 'ಕುರುಕ್ಷೇತ್ರ'ದಲ್ಲಿ ದರ್ಶನ್ ರಂತೆ 'ಭೀಮ' ಪಾತ್ರಧಾರಿ ಕೂಡ ಹೆಚ್ಚು ಗಮನ ಸೆಳೆಯುತ್ತಿದ್ದಾರೆ. ಹೌದು, ದರ್ಶನ್ 'ಕುರುಕ್ಷೇತ್ರ'ದಲ್ಲಿ ಭೀಮನ ಪಾತ್ರಕ್ಕೆ ಬಾಲಿವುಡ್ ಕಿರುತೆರೆ ಕಲಾವಿದನನ್ನ ಆಯ್ಕೆ ಮಾಡಿಕೊಳ್ಳಲಾಗಿದೆ.

ವಿಶೇಷ ಅಂದ್ರೆ, ಭೀಮನನ್ನ 'ಕುರುಕ್ಷೇತ್ರ'ಕ್ಕೆ ಆಯ್ಕೆ ಮಾಡಿದ್ದು ಸ್ವತಃ ದರ್ಶನ್ ಅವರಂತೆ. ಹಾಗಿದ್ರೆ, ಭೀಮನ ಪಾತ್ರಧಾರಿಯನ್ನ ದರ್ಶನ್ ಎಲ್ಲಿ ನೋಡಿದ್ರು? ಇವರಿಬ್ಬರ ಮೊದಲ ಭೇಟಿ ಯಾವಾಗ ಎಂದು ಮುಂದೆ ಓದಿ......

ಭೀಮನನ್ನ ಆಯ್ಕೆ ಮಾಡಿದ್ದು ದರ್ಶನ್

ನಿರ್ಮಾಪಕ ಮುನಿರತ್ನ ಹಾಗೂ ನಿರ್ದೇಶಕ ನಾಗಣ್ಣ ಅವರು ಭೀಮನ ಪಾತ್ರಕ್ಕಾಗಿ ಕಟ್ಟುಮಸ್ತಾದ ಸ್ಟಾರ್ ನಟನನ್ನ ಹುಡುಕುತ್ತಿದ್ದರು. ಬ್ಯುಸಿ ಶೆಡ್ಯೂಲ್ ನಿಂದ ಯಾರೂ ಕಾಲ್ ಶೀಟ್ ಸಿಗುತ್ತಿರಲಿಲ್ಲ. ಹೀಗಿರುವಾಗ, ದರ್ಶನ್ ಅವರು ಡ್ಯಾನಿಶ್ ಅಖ್ತರ್ ಸೈಫಿ ಅವರನ್ನ ಸೂಚಿಸಿದರಂತೆ.

ಯಾರೂ ನಿರೀಕ್ಷೆ ಮಾಡದ ನಟ ಈಗ ದರ್ಶನ್ 'ಕುರುಕ್ಷೇತ್ರ'ದಲ್ಲಿ ಭೀಮ.!

ಹೈದರಾಬಾದ್ ನಲ್ಲಿ ದಚ್ಚು-ಡ್ಯಾನಿಶ್ ಮೊದಲ ಭೇಟಿ

ಕೆಲ ವರ್ಷಗಳ ಹಿಂದೆ ನಟ ದರ್ಶನ್ ಹೈದರಾಬಾದ್ ನಲ್ಲಿ ಚಿತ್ರವೊಂದರ ಶೂಟಿಂಗ್ ನಲ್ಲಿದ್ದರಂತೆ. ಆ ವೇಳೆ ಜಿಮ್ ನಲ್ಲಿ ವರ್ಕೌಟ್ ಮಾಡುವಾಗ ನನಗೆ ದರ್ಶನ್ ಅವರು ಪರಿಚಯವಾದರು. ಇಬ್ಬರು ಒಟ್ಟಿಗೆ ವರ್ಕೌಟ್ ಮಾಡುತ್ತಿದ್ದೇವು ಎಂದು ಡ್ಯಾನಿಶ್ ಪತ್ರಿಕೆ ನೀಡಿದ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.

ನಾನು ಹನುಮಾನ್ ಪಾತ್ರ ಮಾಡಿದ್ದು ಗೊತ್ತಿತ್ತು

'ಸಿಯಾ ಕೇ' ಧಾರಾವಾಹಿಯಲ್ಲಿ ನಾನು ಹನುಮಾನ್ ಪಾತ್ರ ಮಾಡುತ್ತಿರುವುದು ದರ್ಶನ್ ಅವರಿಗೆ ಗೊತ್ತಿತ್ತು. ಯಾಕಂದ್ರೆ, ದರ್ಶನ್ ಅವರ ಸಿನಿಮಾ ಶೂಟಿಂಗ್ ಆಗುತ್ತಿದ್ದ ಜಾಗದಲ್ಲೇ ನಮ್ಮ ಧಾರಾವಾಹಿ ಚಿತ್ರೀಕರಣ ನಡೆಯುತ್ತಿತ್ತು.

ಭೀಮನ ಪಾತ್ರಕ್ಕೆ ನನ್ನನ್ನ ಗುರುತಿಸಿದ್ದು ದರ್ಶನ್

ಹೀಗಾಗಿ, 'ಕುರುಕ್ಷೇತ್ರ' ಪ್ರೊಡಕ್ಷನ್ ತಂಡಕ್ಕೆ ನನ್ನ ಬಗ್ಗೆ ದರ್ಶನ್ ಅವರೇ ಹೇಳಿದ್ದಾರೆ. ತದ ನಂತರ ಚಿತ್ರತಂಡ ನನ್ನನ್ನು ಸಂಪರ್ಕಿಸಿತ್ತು. ಹಾಗಾಗಿ, ನಾನು ಎರಡನೇ ಮಾತಾಡದೇ ಈ ಪೌರಣಿಕ ಚಿತ್ರವನ್ನ ಒಪ್ಪಿಕೊಂಡೆ.

ಈ ಚಿತ್ರಕ್ಕಾಗಿ ನಾನು ಕಾಯುತ್ತಿದ್ದೇನೆ

ಈ ಬಿಗ್ ಪ್ರಾಜೆಕ್ಟ್ ನನಗೆ ಸಿಗಲು ದರ್ಶನ್ ಅವರು ಕಾರಣ. ನಾನು ಈ ಚಿತ್ರದಲ್ಲಿ ಅಭಿನಯಿಸಲು ಕಾತುರದಿಂದ ಕಾಯುತ್ತಿದ್ದೇನೆ. ಆಗಸ್ಟ್ 7 ರಂದು ಡ್ಯಾನಿಶ್ ಅಖ್ತರ್ ಸೈಪಿ ಕುರುಕ್ಷೇತ್ರ ಚಿತ್ರತಂಡವನ್ನ ಸೇರಿಕೊಳ್ಳಲಿದ್ದಾರೆ.

English summary
''Darshan, the super star of Sandalwood, is the actor who got me this big project,” says Danish Akthar Saifi, Who is Playing Bheema in Darshan's 50th Movie Kurukshetra.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada