For Quick Alerts
  ALLOW NOTIFICATIONS  
  For Daily Alerts

  ರಿಲ್ಯಾಕ್ಸ್ ಮೂಡ್ ನಲ್ಲಿ ದರ್ಶನ್: ತೋಟದ ಮನೆ ಪ್ರಾಣಿ-ಪಕ್ಷಿಗಳ ಜೊತೆ ಸಮಯ ಕಳೆಯುತ್ತಿರುವ ಡಿ ಬಾಸ್

  |

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಕರಣ ಕ್ಷಣಕ್ಕೊಂದು ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ಒಂದೆಡೆ 25 ಕೋಟಿ ರೂ. ವಂಚನೆ ಯತ್ನ ಪ್ರಕರಣವಾದರೆ ಮತ್ತೊಂದೆಡೆ ಹೋಟೆಲ್ ಸಿಬ್ಬಂದಿ ಮೇಲೆ ಹಲ್ಲೆ ಆರೋಪ. ಈ ಪ್ರಕರಣಗಳು ಈಗ ದರ್ಶನ್ ಅವರನ್ನು ಸಂಕಷ್ಟಕ್ಕೆ ಸಿಲುಕಿಸಿದೆ.

  ಈ ಬಗ್ಗೆ ಕ್ಷಣಕ್ಕೊಂದು ಹೇಳಿಕೆಗಳು ಹೊರಬರುತ್ತಿವೆ, ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ದರ್ಶನ್ ಮತ್ತು ಉಮಾಪತಿ ನಡುವಿನ ಆಸ್ತಿ ಖರೀದಿ ಗಲಾಟೆ, ಆಡಿಯೋ ವೈರಲ್, ಪೊಲೀಸ್ ತನಿಖೆ ಎಲ್ಲಾ ಬೆಳವಣಿಗೆಗಳು ನಡೆಯುತ್ತಿದೆ. ಆದರೆ ದರ್ಶನ್ ಮಾತ್ರ ಯಾವುದೇ ಪ್ರತಿಕ್ರಿಯೆ ನೀಡಿದೆ ಮೌನಕ್ಕೆ ಶರಣಾಗಿದ್ದಾರೆ.

  ದರ್ಶನ್ ಈಗ ಎಲ್ಲಿದ್ದಾರೆ?

  ದರ್ಶನ್ ಈಗ ಎಲ್ಲಿದ್ದಾರೆ?

  ವಂಚನೆ ಯತ್ನ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಮಾಧ್ಯಮದ ಮುಂದೆ ದಿಢೀರ್ ಪ್ರತ್ಯಕ್ಷರಾಗಿದ್ದ ದರ್ಶನ್ ಈಗ್ಯಾಕೆ ಸೈಲೆಂಟ್ ಆಗಿದ್ದಾರೆ ಎನ್ನುವ ಪ್ರಶ್ನೆ ಕೇಳಿಬರುತ್ತಿದೆ. ಅಲ್ಲದೆ ಇಷ್ಟೆಲ್ಲ ಬೆಳವಣಿಗೆ ನಡೆಯುತ್ತಿದ್ದರೂ ಸದ್ಯ ದರ್ಶನ್ ಎಲ್ಲಿದ್ದಾರೆ? ಏನ್ಮಾಡ್ತಿದ್ದಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿದೆ.

  ರಿಲ್ಯಾಕ್ಸ್ ಮೂಡ್ ನಲ್ಲಿ ದರ್ಶನ್

  ರಿಲ್ಯಾಕ್ಸ್ ಮೂಡ್ ನಲ್ಲಿ ದರ್ಶನ್

  ದರ್ಶನ್ ಫಾರ್ಮ್ ಹೌಸ್ ನಲ್ಲಿರುವ ಫೋಟೋಗಳು ವೈರಲ್ ಆಗುವ ಮೂಲಕ ಕುತೂಹಲಕ್ಕೆ ತೆರೆಬಿದ್ದಿದೆ. ಚಾಲೆಂಜಿಂಗ್ ಸ್ಟಾರ್ ಸದ್ಯ ರಿಲ್ಯಾಕ್ಸ್ ಮೂಡ್ ನಲ್ಲಿದ್ದಾರೆ. ಹೊರಗಡೆ ನಡೆಯುತ್ತಿರುವ ಯಾವುದೇ ಬೆಳವಣಿಗೆಗಳ ಬಗ್ಗೆಯೂ ತಲೆಕೆಡಿಸಿಕೊಳ್ಳದೆ ಫಾರ್ಮ್ ಹೌಸ್ ನಲ್ಲಿ ಕೆಲಸದಲ್ಲಿ ಮಗ್ನರಾಗಿದ್ದಾರೆ.

  ತೋಟದ ಮನೆ ಕೆಲಸದಲ್ಲಿ ದರ್ಶನ್ ಮಗ್ನ

  ತೋಟದ ಮನೆ ಕೆಲಸದಲ್ಲಿ ದರ್ಶನ್ ಮಗ್ನ

  ತೋಟದ ಮನೆಯ ಕೆಲಸಗಾರರ ಜೊತೆ ದರ್ಶನ್ ಸಮಯ ಕಳೆಯುತ್ತಿದ್ದಾರೆ. ಪ್ರಾಣಿ-ಪಕ್ಷಿಗಳ ಆರೈಕೆಯಲ್ಲಿ ನಿರತರಾಗಿದ್ದಾರೆ. ದರ್ಶನ್ ತೋಟದ ಮನೆಯಲ್ಲಿರುವ ಫೋಟೋಗಳು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

  'ದೊಡ್ಮನೆ' ಆಸ್ತಿ ಖರೀದಿ ವಿವಾದ

  'ದೊಡ್ಮನೆ' ಆಸ್ತಿ ಖರೀದಿ ವಿವಾದ

  ಇತ್ತ ದರ್ಶನ್ ಬಗ್ಗೆ ಪುನೀತ್ ಮತ್ತು ರಾಘವೇಂದ್ರ ರಾಜ್ ಕುಮಾರ್ ಅವರ ಆಸ್ತಿ ಖರೀದಿ ವಿಚಾರದ ಬಗ್ಗೆ ದೊಡ್ಡ ಚರ್ಚೆ ನಡೆಯುತ್ತಿದೆ. ಉಮಾಪತಿ ಖರೀದಿಸಿದ್ದ ಆಸ್ತಿಯ ಮೇಲೆ ಡಿ ಬಾಸ್ ಕಣ್ಣಿಟ್ಟಿದ್ದರು, ಉಮಾಪತಿಯಿಂದ ದೊಡ್ಮನೆ ಆಸ್ತಿ ಖರೀದಿಗೆ ದರ್ಶನ್ ಮುಂದಾಗಿದ್ದರು. ಆದರೆ ಉಮಾಪತಿ ಕೊಡಲು ಹಿಂದೇಟು ಹಾಕಿದ ಕಾರಣ ಇಬ್ಬರ ನಡುವೆ ಕಿತ್ತಾಟ, ವೈಮನಸ್ಸಿಗೆ ಕಾರಣವಾಗಿತ್ತು ಎನ್ನುವ ಮಾತುಗಳು ಕೇಳಿಬರುತ್ತಿದೆ.

  'ದೊಡ್ಮನೆ' ಆಸ್ತಿ ಖರೀದಿ ಬಗ್ಗೆ ಉಮಾಪತಿ ಪ್ರತಿಕ್ರಿಯೆ

  'ದೊಡ್ಮನೆ' ಆಸ್ತಿ ಖರೀದಿ ಬಗ್ಗೆ ಉಮಾಪತಿ ಪ್ರತಿಕ್ರಿಯೆ

  ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಿರ್ಮಾಪಕ ಉಮಾಪತಿ, "ಆಸ್ತಿ ಖರೀದಿ ಮಾಡಿದ್ದು ಹೌದು, ಅದನ್ನು ದರ್ಶನ್ ಕೇಳಿದ್ದು ಹೌದು. ಆದರೆ ನಾನು ಆಸ್ತಿಯನ್ನು ಕೊಡಲ್ಲ ಎಂದಿದ್ದು ಹೌದು" ಎಂದಿದ್ದಾರೆ. "ಇದು ಹಳೆಯ ವಿಚಾರ. ವ್ಯವಹಾರ ಬೇರೆ ಸ್ನೇಹ ಬೇರೆ. ಈ ವಿಚಾರವನ್ನು ಇಟ್ಟುಕೊಂಡು ದರ್ಶನ್ ಹೀಗೆಲ್ಲ ಮಾಡುವವರಲ್ಲ" ಎಂದು ಉಮಾಪತಿ ಹೇಳಿದ್ದಾರೆ.

  ದೊಡ್ಡವರ ಮಾತು ಕಥೆ, ಸತ್ಯ ಯಾವ್ದು..? ಸುಳ್ಳು ಯಾವ್ದು..? | Indrajit Lankesh vs Darshan | Filmibeat Kannada
  ಹೋಟೆಲ್ ನಲ್ಲಿ ವಿಚಾರಣೆ ಮುಕ್ತಾಯ

  ಹೋಟೆಲ್ ನಲ್ಲಿ ವಿಚಾರಣೆ ಮುಕ್ತಾಯ

  ಮತ್ತೊಂದೆಡೆ ಹಲ್ಲೆ ಪ್ರಕರಣ ಸಂಬಂಧ ಸಂದೇಶ್ ಹೋಟೆಲ್ ನಲ್ಲಿ ಪೊಲೀಸ್ ವಿಚಾರಣೆ ಮುಕ್ತಾಯವಾಗಿದೆ. ಇಷ್ಟೆಲ್ಲ ಬೆಳವಣಿಗೆಗಳು ನಡೆಯುತ್ತಿದ್ದರೂ ಇದ್ಯಾವುದಕ್ಕೂ ದರ್ಶನ್ ಪ್ರತಿಕ್ರಿಯೆ ನೀಡದೆ ತೋಟದ ಮನೆಯಲ್ಲಿ ಪ್ರಾಣಿ- ಪಕ್ಷಿಗಳ ಜೊತೆ ಸಮಯ ಕಳೆಯುತ್ತಿದ್ದಾರೆ.

  English summary
  Actor Darshan Relaxing at his farm house amid controversy.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X