For Quick Alerts
  ALLOW NOTIFICATIONS  
  For Daily Alerts

  ರಸ್ತೆ ಅಪಘಾತದ ಬಗ್ಗೆ ಅಭಿಮಾನಿಗಳಿಗೆ ದರ್ಶನ್ ಮನವಿ

  |
  Darshan has a special request from his fans | FILMIBEAT KANNADA

  ರಸ್ತೆ ಅಪಘಾತದ ಬಗ್ಗೆ ನಟ ದರ್ಶನ್ ಟ್ವೀಟ್ ಮಾಡಿದ್ದಾರೆ. ಈ ಮೂಲಕ ರಸ್ತೆಯಲ್ಲಿ ಸಂಚಾರ ಮಾಡುವಾಗ ಸುರಕ್ಷಿತವಾಗಿ ಇರಲು ಅಭಿಮಾನಿಗಳಿಗೆ ತಿಳಿಸಿದ್ದಾರೆ.

  ಕಳೆದ ವರ್ಷ ದರ್ಶನ್ ಪುತ್ರ ವಿನೀಶ್ ಹುಟ್ಟುಹಬ್ಬಕ್ಕೆ ದೂರದ ಊರಿನಿಂದ ಅಭಿಮಾನಿಗಳು ಆಗಮಿಸಿದ್ದರು. ಈ ವೇಳೆ ರಸ್ತೆ ಅಪಘಾತ ಸಂಭವಿಸಿತ್ತು. ಇದರಲ್ಲಿ ಅಭಿಮಾನಿಯೊಬ್ಬರು ನಿಧನ ಹೊಂದಿದರು. ಈ ದುರ್ಘಟನೆಯನ್ನು ದರ್ಶನ್ ಇನ್ನು ಮರೆತಿಲ್ಲ. ಈ ವರ್ಷ ವಿನೀಶ್ ಹುಟ್ಟುಹಬ್ಬ ಹತ್ತಿರದಲ್ಲಿ ಇದ್ದು, ಕಾರ್ಯಕ್ರಮಕ್ಕೆ ಆಗಮಿಸುವ ಅಭಿಮಾನಿಗಳಿಗೆ ದರ್ಶನ್ ಮನವಿ ಮಾಡಿದ್ದಾರೆ.

  'ಯಜಮಾನ' ಸಿನಿಮಾ ಸ್ಫೂರ್ತಿ: 'ನಂದಿ ಬ್ರಾಂಡ್' ಶುರು ಮಾಡಿದ ಅಭಿಮಾನಿ'ಯಜಮಾನ' ಸಿನಿಮಾ ಸ್ಫೂರ್ತಿ: 'ನಂದಿ ಬ್ರಾಂಡ್' ಶುರು ಮಾಡಿದ ಅಭಿಮಾನಿ

  ''ಅಭಿಮಾನಿಗಳಲ್ಲಿ ಕಳಕಳಿಯ ಮನವಿ. ಗಾಡಿಯಲ್ಲಿ ಚಲಿಸುವಾಗ ದಯಮಾಡಿ ಅತೀ ಜಾಗೃಕತೆಯಿಂದ ಓಡಿಸಿ. ನಿಮ್ಮ ಕುಟುಂಬ ನಿಮ್ಮ ಮೇಲೆ ಅವಲಂಬಿತವಾಗಿರುತ್ತದೆ ಎಂಬುದನ್ನು ಎಂದೂ ಮರೆಯದಿರಿ. ಕೆಲವೊಮ್ಮೆ ನಮ್ಮ ಪ್ರಜ್ಞೆಯಲ್ಲಿದ್ದರೂ ಸಹ ದುರದೃಷ್ಟವಶಾತ್ ಅಪಘಾತಗಳು ಸಂಭವಿಸುತ್ತವೆ.'' ಎಂದು ಟ್ವೀಟ್ ಮಾಡಿದ್ದಾರೆ.

  ''ಕಳೆದ ವರ್ಷ ವಿನೀಶ್ ಹುಟ್ಟುಹಬ್ಬದ ವೇಳೆ ನಡೆದ ರಸ್ತೆ ಅಪಘಾತದಲ್ಲಿ ಅಭಿಮಾನಿಯೊಬ್ಬ ಸಾವನಪ್ಪಿದ್ದನ್ನು ಇನ್ನು ಅರಗಿಸಿಕೊಳ್ಳಲಾಗುತ್ತಿಲ್ಲ. ದೂರದ ಸ್ಥಳಗಳಿಗೆ ಹೋಗುವಾಗ ದ್ವಿಚಕ್ರ ವಾಹನಗಳನ್ನು ಆದಷ್ಟು ಉಪಯೋಗಿಸಬೇಡಿ. ಈ ವರ್ಷವೂ ಹುಟ್ಟುಹಬ್ಬಕ್ಕೆ ಬರುವವರು ದಯಮಾಡಿ ಎಚ್ಚರಿಕೆ ವಹಿಸಿ'' ಎಂದು ದರ್ಶನ್ ಹೇಳಿದ್ದಾರೆ.

  ಮತ್ತೊಂದು ಸ್ಟೈಲಿಶ್ ವಾಹನದ ಮೇಲೆ ಡಿ-ಬಾಸ್ ಕಣ್ಣು.!ಮತ್ತೊಂದು ಸ್ಟೈಲಿಶ್ ವಾಹನದ ಮೇಲೆ ಡಿ-ಬಾಸ್ ಕಣ್ಣು.!

  ಅಂದಹಾಗೆ, ನಟ ದರ್ಶನ್ ಸದ್ಯ 'ರಾಬರ್ಟ್' ಹಾಗೂ 'ಒಡೆಯ' ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ಕನ್ನಡ ರಾಜ್ಯೋತ್ಸವದ ವಿಶೇಷವಾಗಿ ಒಡೆಯ ಸಿನಿಮಾದ ಟೀಸರ್ ಬಿಡುಗಡೆ ಆಗಲಿದೆ.

  English summary
  Kannada actor Darshan requested his fans to be carefully while travelling on road.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X