For Quick Alerts
  ALLOW NOTIFICATIONS  
  For Daily Alerts

  ವಿದೇಶದಿಂದ ವಾಪಸ್; 'ರಾಯಣ್ಣ' ರಿಲೀಸ್ ಗೆ ಹಾಜರ್!

  |
  ದರ್ಶನ್ ನಾಯಕತ್ವದ 'ಬುಲ್ ಬುಲ್' ಚಿತ್ರದ ಹಾಡಿನ ಚಿತ್ರೀಕರಣಕ್ಕಾಗಿ ಸ್ವಿಜರ್ ರ್ಲ್ಯಾಂಡ್ ಗೆ ತೆರಳಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಚಿತ್ರತಂಡ ಸತತ 15 ದಿನಗಳ ಚಿತ್ರೀಕರಣ ಮುಗಿಸಿ ವಾಪಸ್ಸಾಗಿದೆ. ದರ್ಶನ್ ಹೋಮ್ ಬ್ಯಾನರ್ 'ತೂಗುದೀಪ್ ಪ್ರೊಡಕ್ಷನ್'ನಲ್ಲಿ ಮೂಡಿಬರುತ್ತಿರುವ 'ಬುಲ್ ಬುಲ್' ಚಿತ್ರವು ತೆಲುಗಿನ ರೀಮೇಕ್. ಈ ಮೊದಲು 'ಜೊತೆ ಜೊತೆಯಲಿ' ಹಾಗೂ 'ನವಗ್ರಹ' ಚಿತ್ರವನ್ನು ನಿರ್ಮಿಸಿದ್ದ ತೂಗುದೀಪ ಪ್ರೊಡಕ್ಷನ್ 3 ನೇ ಚಿತ್ರವಾಗಿ 'ಬುಲ್ ಬುಲ್' ಮೂಡಿಬರುತ್ತಿದೆ.

  ಈ ಚಿತ್ರಕ್ಕೆ ಎಂಡಿ ಶ್ರೀಧರ್ ನಿರ್ದೇಶನ ಮಾಡುತ್ತಿದ್ದು ದಿನಕರ್ ತೂಗುದೀಪ, ವಿ ಹರಿಕೃಷ್ಣ, ಕವಿರಾಜ್ ಸೇರಿದಂತೆ ಐವರು ನಿರ್ಮಾಪಕರು. ಚಿತ್ರಕ್ಕೆ ಹಾಡು ಬರೆದಿರುವುದು ಮಾತ್ರವಲ್ಲದೇ ಸಂಭಾಷಣೆಯನ್ನೂ ಬರೆದು ನಿರ್ಮಾಪಕನ ಸ್ಥಾನದಲ್ಲೂ ಕುಳಿತಿದ್ದಾರೆ ಕವಿರಾಜ್. ವಿ ಹರಿಕೃಷ್ಣ, ಸಂಗೀತದ ಜೊತೆಗೆ ನಿರ್ಮಾಣದಲ್ಲೂ ಭಾಗಿಯಾಗಿದ್ದಾರೆ. ಇನ್ನು ಈ ಚಿತ್ರಕ್ಕೆ ಕ್ಯಾಮರಾ ಕೆಲಸ ಕೃಷ್ಣಕುಮಾರ್ ಅವರದು. ಸೌಂದರ್ ರಾಜ್ ಸಂಕಲನ ಹಾಗೂ ರವಿವರ್ಮ ಸಾಹಸ ಚಿತ್ರಕ್ಕಿದೆ.

  ಮೊದಲ ಬಾರಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ ನಾಯಕಿಯಾಗಿ ನಟಿಸುತ್ತಿರುವ ರಚಿತಾ ಪ್ರಸಾದ್, ಕಿರುತೆರೆಯಲ್ಲಿ ಈಗಾಗಲೇ ಬಹಳಷ್ಟು ಜನಪ್ರಿಯತೆ ಪಡೆದಿರುವ ನಟಿ. ರೆಬೆಲ್ ಸ್ಟಾರ್ ಅಂಬರೀಶ್ ಹಾಗೂ ಕಾಮಿಡಿ ನಟ ಶರಣ್ ಈ ಪಾತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಸತತ 15 ದಿನಗಳ ಚಿತ್ರೀಕರಣವನ್ನು ಸ್ವಿಜರ್ ಲಾಂಡ್ ನಲ್ಲಿ ಮುಗಿಸಿರುವ ಚಿತ್ರತಂಡ, ಚಿತ್ರದ ಮೇಜರ್ ಪೋರ್ಶನ್ ಮುಗಿಸಿರುವ ಖುಷಿಯಲ್ಲಿದೆ.

  ಇತ್ತ, ದರ್ಶನ್ ನಾಯಕತ್ವದಲ್ಲಿ, ಕನ್ನಡ ಚಿತ್ರರಂಗದ ಬಿಗ್ ಬಜೆಟ್ ಚಿತ್ರವೆಂಬ ದಾಖಲೆಯೊಂದಿಗೆ ತೆರೆಗೆ ಬರಲು ಸಿದ್ಧವಾಗಿರುವ ಬಹುನಿರೀಕ್ಷೆಯ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಚಿತ್ರದ ಫಲಿತಾಂಶಕ್ಕಾಗಿ ಸ್ವತಃ (ಚಿತ್ರದ ನಾಯಕ) ದರ್ಶನ್ ಸೇರಿದಂತೆ ಇಡೀ ಸ್ಯಾಂಡಲ್ ವುಡ್ ಕಾಯುತ್ತಿದೆ. ಈ ಚಿತ್ರವು ಕನ್ನಡದ ಬಹುನಿರೀಕ್ಷೆಯ ಐತಿಹಾಸಿಕ ಚಿತ್ರವಷ್ಟೇ ಅಲ್ಲ, ದರ್ಶನ್ ಅಭಿನಯದ ಮೊಟ್ಟ ಮೊದಲು ಐತಿಹಾಸಿಕ ಚಿತ್ರವೂ ಹೌದು.

  ಸದ್ಯ, ಕನ್ನಡದ ಅತ್ಯಂತ ಬೇಡಿಕೆಯಲ್ಲಿರುವ ನಟರಾಗಿರುವ ದರ್ಶನ್, ಈ ಚಿತ್ರದಲ್ಲಿ ಅಭಿನಯಿಸುವ ಮೂಲಕ ಈಗಾಗಲೇ ಇತಿಹಾಸವೊಂದನ್ನು ಸೃಷ್ಟಿಸಿದಂತಾಗಿದೆ. ಈ ಚಿತ್ರವೂ 'ಸಾರಥಿ'ಯಂತೆ ಸೂಪರ್ ಹಿಟ್ ಆಗಿ, ಬಾಕ್ಸ್ ಆಫೀಸ್ ಪ್ರಕಾರ ಕನ್ನಡದ 'ನಂ ಒನ್ ಸ್ಟಾರ್' ದರ್ಶನ್ ಎಂಬುದರಲ್ಲಿ ಯಾವುದೇ ಸಂದೇಹವೂ ಇರದಂತಾಗಲಿ ಎಂಬುದು ದರ್ಶನ್ ಅಭಿಮಾನಿಗಳ ಹಾರೈಕೆ. ಅಂದುಕೊಂಡಂತೆ ನಡೆದರೆ 'ಸಂಗೊಳ್ಳಿ ರಾಯಣ್ಣ' ಚಿತ್ರವು ಇದೇ 26 ರಂದು (26 ಅಕ್ಟೋಬರ್ 2012) ಬಿಡುಗಡೆಯಾಗಲಿದೆ. (ಒನ್ ಇಂಡಿಯಾ ಕನ್ನಡ)

  English summary
  Challenging Star Drashan and the Bul Bul movie team returned from Switzerland, completed a major schedule of the movie. This is the 3rd production of Darshan's 'Home Banner' after Jote Joteyali and Navagraha. Rachita Prasad is the Heroine for this MD Shridar direction movie. 
 
  Sunday, October 21, 2012, 13:52
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X