For Quick Alerts
  ALLOW NOTIFICATIONS  
  For Daily Alerts

  ದರ್ಶನ್-ಮುನಿರತ್ನ ನಡುವೆ 2007ರಲ್ಲೇ ಕುರುಕ್ಷೇತ್ರದ ಬಗ್ಗೆ ಡೀಲ್ ಆಗಿತ್ತಂತೆ.!

  |
  ಮುನಿರತ್ನ ಕುರುಕ್ಷೇತ್ರದ ಬಗ್ಗೆ ದರ್ಶನ್ ಬಿಚ್ಚಿಟ್ಟ ಕುತೂಹಲಕಾರಿ ವಿಷಯ

  ಸ್ಯಾಂಡಲ್ ವುಡ್ ಇಂಡಸ್ಟ್ರಿಯಲ್ಲಿ ಸದ್ಯ ಹೆಚ್ಚು ಸದ್ದು ಮಾಡುತ್ತಿರುವ ಚಿತ್ರ ಕುರುಕ್ಷೇತ್ರ. ಈಗಾಗಲೇ ಬಿಡುಗಡೆ ದಿನಾಂಕ ಘೋಷಣೆಯಾಗಿದ್ದು, ಜುಲೈ 6 ರಂದು ಆಡಿಯೋ ರಿಲೀಸ್ ಮಾಡಲಾಗಿದೆ. ದರ್ಶನ್ ದುರ್ಯೋಧನನಾಗಿ ನಟಿಸಿರುವ ಈ ಚಿತ್ರ ಡಿ ಬಾಸ್ ಗೆ 50ನೇ ಎಂಬುದು ಮೈಲಿಗಲ್ಲಾಗಿದೆ.

  ಈಗ ವಿಷ್ಯ ಏನಪ್ಪಾ ಅಂದ್ರೆ ಕುರುಕ್ಷೇತ್ರ ಸಿನಿಮಾ ಮಾಡಬೇಕು ಎನ್ನುವುದು ನಿನ್ನೆ ಮೊನ್ನೆಯ ನಿರ್ಧಾರವಲ್ಲ. ಇದು ನಿರ್ಮಾಪಕ ಮುನಿರತ್ನ ಅವರ ಬಹುವರ್ಷಗಳ ಕನಸು. ಇಂತಹದೊಂದು ಚಿತ್ರವನ್ನ ಮಾಡಬೇಕು ಎಂದು ಮುನಿರತ್ನ ಅವರು ಬಹಳ ವರ್ಷಗಳಿಂದ ಅಂದುಕೊಂಡಿದ್ದರು.

  'ಕುರುಕ್ಷೇತ್ರ' ಡಬ್ಬಾ ಟ್ರೇಲರ್ ಎಂದು 'ಮುನಿ'ಸಿಕೊಂಡ ದರ್ಶನ್ ಫ್ಯಾನ್ಸ್!

  ಇನ್ನು ದರ್ಶನ್ ಜೊತೆಯಲ್ಲೇ ಮಾಡಬೇಕು ಎನ್ನುವುದು ಕೂಡ ಹಳೆಯ ಡೀಲ್. ಈ ವಿಚಾರವನ್ನ ಸ್ವತಃ ದರ್ಶನ್ ಅವರೇ ಬಹಿರಂಗಪಡಿಸಿದ್ದಾರೆ. ಇತ್ತೀಚಿಗಷ್ಟೆ ಕುರುಕ್ಷೇತ್ರ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ದರ್ಶನ್, ''ಕುರುಕ್ಷೇತ್ರ ಚಿತ್ರ ಎನ್ನುವುದು ಮುನಿರತ್ನ ಅವರ ಕನಸು. ಈ ಬಗ್ಗೆ ನನ್ನ ಬಳಿ ಅನಾಥರು ಸಿನಿಮಾ ಮಾಡುವಾಗಲೇ ಹೇಳಿದ್ದರು. ಹುಂ ಮಾಡಿ ನಿಮ್ಮಂತ ನಿರ್ಮಾಪಕರಿಂದ ಮಾತ್ರ ಅದು ಸಾಧ್ಯ ಎಂದಿದ್ದೆ. ಆಗಿನಿಂದಲೇ ತಯಾರಿ ಮಾಡಿದ್ದಾರೆ'' ಎಂದು ದಾಸ ತಿಳಿಸಿದರು.

  'ಕುರುಕ್ಷೇತ್ರ' ಟ್ರೈಲರ್ ಗೆ ಬಂದ ಕಮೆಂಟ್ಸ್ ಗೆ ಹೆದರಿತಾ ಚಿತ್ರತಂಡ?

  ಅಂದ್ಹಾಗೆ, 2007ರಲ್ಲಿ ತೆರೆಕಂಡಿದ್ದ ಅನಾಥರು ಚಿತ್ರವನ್ನ ನಿರ್ಮಾಣ ಮಾಡಿದ್ದು ಮುನಿರತ್ನ. ದರ್ಶನ್ ಮತ್ತು ಉಪೇಂದ್ರ ಅಭಿನಯಿಸಿದ್ದ ಈ ಚಿತ್ರವನ್ನ ಸಾಧುಕೋಕಿಲಾ ನಿರ್ದೇಶನ ಮಾಡಿದ್ದರು. ಈ ಸಿನಿಮಾ ಮಾಡುವಾಗಲೇ ಮುನಿರತ್ನ ಮತ್ತು ದರ್ಶನ್ ಇಂತಹದೊಂದು ಡೀಲ್ ಮಾಡಿಕೊಂಡಿದ್ದರಂತೆ. ಇದಕ್ಕೆ ಮತ್ತೆ ಜೀವ ನೀಡಿ ತೆರೆಗೆ ತರುತ್ತಿದ್ದಾರೆ.

  'ಕುರುಕ್ಷೇತ್ರ' ಟ್ರೇಲರ್ ನಲ್ಲಿ ಕನ್ನಡ ಪದ ತಪ್ಪಾಗಿ ಬಳಕೆ

  ಸಿನಿಮಾ ಚಿತ್ರೀಕರಣ ಮುಗಿದು ತುಂಬಾ ದಿನಗಳಾದರು, ರಿಲೀಸ್ ದಿನಾಂಕ ಘೋಷಣೆ ಮಾಡಿಲ್ಲ. ಯಾಕೆ ಅಂದ್ರೆ ''ನನಗೆ ಮೊದಲು ಇಷ್ಟ ಆಗ್ಬೇಕು, ಆಮೇಲೆ ಜನರಿಗೆ ತೋರಿಸುವುದು ಅದಕ್ಕಾಗಿ ಮತ್ತಷ್ಟು ಸಮಯ ಆದ್ರೂ ಪರವಾಗಿಲ್ಲ'' ಎಂದು ನಿರ್ಮಾಪಕ ಮುನಿರತ್ನ ಹೇಳಿದ್ದರು.

  ಅದರಂತೆ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಿಗೆ ಹೆಚ್ಚಿನ ಸಮಯ ತೆಗೆದುಕೊಂಡರು. ಒಂದು ಭಾಷೆಯಲ್ಲಿ ಬಿಡುಗಡೆಯಾಗಬೇಕಿದ್ದ ಚಿತ್ರವನ್ನ ಐದು ಭಾಷೆಗೆ ತಯಾರಿಸಿದರು. ಈಗ ಬಹುಭಾಷೆಯಲ್ಲಿ ಪೌರಾಣಿಕ ಚಿತ್ರವನ್ನ ತೆರೆಗೆ ತರುತ್ತಿದ್ದಾರೆ.

  English summary
  Challenging star darshan and munirathna was committed to do kurukshetra movie in the time of anatharu movie

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X