ಎಲ್ಲ ಗೊಂದಲಗಳಿಗೆ ಸ್ಪಷ್ಟ ಉತ್ತರ ಕೊಟ್ಟ ಚಾಲೆಂಜಿಂಗ್ ಸ್ಟಾರ್ ದರ್ಶನ್.!

By Harshitha

ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ 49ನೇ ಸಿನಿಮಾ 'ತಾರಕ್' ಇದೀಗ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿ ಇದೆ. 50ನೇ ಚಿತ್ರ 'ಕುರುಕ್ಷೇತ್ರ'ಕ್ಕೆ ಮುಂದಿನ ತಿಂಗಳು ಮುಹೂರ್ತ ಫಿಕ್ಸ್ ಆಗಿದೆ. ಹೀಗಿರುವಾಗಲೇ, ದರ್ಶನ್ ರವರ 51ನೇ ಸಿನಿಮಾ ಯಾವುದು ಎಂಬ ಗೊಂದಲ ಅಭಿಮಾನಿಗಳ ವಲಯದಲ್ಲಿ ಮೂಡಿದೆ. ಅದಕ್ಕೆ ಕಾರಣ 'ಪೋಸ್ಟರ್ ಫಜೀತಿ'.

ದರ್ಶನ್ ರವರ 51ನೇ ಸಿನಿಮಾ ನಿರ್ಮಾಣ ಮಾಡುವುದಾಗಿ ದರ್ಶನ್ ರವರ ಹುಟ್ಟುಹಬ್ಬದಂದು (ಫೆಬ್ರವರಿ 16) ಬಿ.ಸುರೇಶ್ ಅನೌನ್ಸ್ ಮಾಡಿದ್ರು. ಹಾಗೇ, ಪತ್ರಿಕೆಗಳಲ್ಲಿ ದರ್ಶನ್ ರವರ 51ನೇ ಚಿತ್ರಕ್ಕೆ ಬಂಡವಾಳ ಹಾಕುತ್ತಿರುವುದಾಗಿ ಸಂದೇಶ್ ನಾಗರಾಜ್ ಕೂಡ ಜಾಹೀರಾತು ನೀಡಿದ್ದರು.

ಒಂದು ಕಡೆ ದರ್ಶನ್ ರವರ 51 ಚಿತ್ರದ ಸ್ಟೋರಿ ಡಿಸ್ಕಷನ್ ನಡೆಯುತ್ತಿದೆ ಅಂತ ದರ್ಶನ್ ಜೊತೆ ಬಿ.ಸುರೇಶ್ ಸೆಲ್ಫಿ ಕ್ಲಿಕ್ಕಿಸಿಕೊಂಡು ಫೇಸ್ ಬುಕ್ ನಲ್ಲಿ ಹಾಕಿದರೆ, ಇನ್ನೊಂದು ಕಡೆ ದರ್ಶನ್ 51ನೇ ಚಿತ್ರಕ್ಕೆ ನಾನೇ ಪ್ರೊಡ್ಯೂಸರ್ ಅಂತ ಸಂದೇಶ್ ನಾಗರಾಜ್ ಹೇಳಿಕೆ ನೀಡಿದ್ದರು.

ಇಬ್ಬರಲ್ಲಿ 'ದರ್ಶನ್ 51' ಯಾರಿಗೆ.? ಎಂಬ ಪ್ರಶ್ನೆ ನಮಗೂ ಸೇರಿದಂತೆ ಅನೇಕರಿಗೆ ಕಾಡಿದ್ದು ಸುಳ್ಳಲ್ಲ. ಇದೀಗ ಇದೇ ಪ್ರಶ್ನೆಗೆ ಸ್ವತಃ ಚಾಲೆಂಜಿಂಗ್ ಸ್ಟಾರ್ ದರ್ಶನ್ ಉತ್ತರ ಕೊಟ್ಟಿದ್ದಾರೆ. ಗೊಂದಲಗಳಿಗೆ ಫುಲ್ ಸ್ಟಾಪ್ ಇಟ್ಟಿದ್ದಾರೆ. ಮುಂದೆ ಓದಿರಿ....

ದರ್ಶನ್ 51ನೇ ಸಿನಿಮಾ ಯಾವುದು.?

ದರ್ಶನ್ 51ನೇ ಸಿನಿಮಾ ಯಾವುದು.?

ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ 51ನೇ ಚಿತ್ರವನ್ನ ನಿರ್ಮಾಣ ಮಾಡುವವರು ಸಂದೇಶ್ ನಾಗರಾಜ್. ಹಾಗಂತ ಸ್ಪಷ್ಟಪಡಿಸಿದ್ದಾರೆ ನಟ ದರ್ಶನ್.

ಹಾಗಾದ್ರೆ, ಬಿ.ಸುರೇಶ್ ಸಿನಿಮಾ.?

ಹಾಗಾದ್ರೆ, ಬಿ.ಸುರೇಶ್ ಸಿನಿಮಾ.?

'ದಾಸ' ದರ್ಶನ್ ರವರ 52ನೇ ಚಿತ್ರವನ್ನ ಬಿ.ಸುರೇಶ್ ಹಾಗೂ ಶೈಲಜಾ ನಾಗ್ ನಿರ್ಮಾಣ ಮಾಡಲಿದ್ದಾರಂತೆ.

ಬಾಕಿ ಸಿನಿಮಾಗಳು....

ಬಾಕಿ ಸಿನಿಮಾಗಳು....

ಸದ್ಯಕ್ಕೆ 51 ಹಾಗೂ 52 ಚಿತ್ರಗಳನ್ನು ಹೊರತು ಪಡಿಸಿದರೆ, ಇನ್ಯಾವ ಸಿನಿಮಾಗಳನ್ನೂ ದರ್ಶನ್ ಫೈನಲ್ ಮಾಡಿಲ್ಲ.

51ನೇ ಚಿತ್ರಕ್ಕೆ ಡೈರೆಕ್ಟರ್ ಸಿಕ್ಕಾಯ್ತು

51ನೇ ಚಿತ್ರಕ್ಕೆ ಡೈರೆಕ್ಟರ್ ಸಿಕ್ಕಾಯ್ತು

ದರ್ಶನ್ ಹಾಗೂ ಸಂದೇಶ್ ನಾಗರಾಜ್ ಕಾಂಬಿನೇಷನ್ ನಲ್ಲಿ ಮೂಡಿ ಬರುವ ಸಿನಿಮಾಗೆ ಪವನ್ ಒಡೆಯರ್ ಆಕ್ಷನ್ ಕಟ್ ಹೇಳಲಿದ್ದಾರಂತೆ.

ಟೈಟಲ್ ಕೂಡ ಫಿಕ್ಸ್ ಆಗಿದೆ

ಟೈಟಲ್ ಕೂಡ ಫಿಕ್ಸ್ ಆಗಿದೆ

ದರ್ಶನ್ ರವರ 51ನೇ ಚಿತ್ರಕ್ಕೆ 'ಒಡೆಯರ್' ಅಂತ ಶೀರ್ಷಿಕೆ ಕೂಡ ಫಿಕ್ಸ್ ಆಗಿದೆ ಎನ್ನುತ್ತಾರೆ ನಿರ್ಮಾಪಕ ಸಂದೇಶ್ ನಾಗರಾಜ್.

More from Filmibeat

English summary
Confirmed News: Darshan's 51st movie will be produced by Sandesh Nagaraj
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X