For Quick Alerts
  ALLOW NOTIFICATIONS  
  For Daily Alerts

  ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ 'ಕ್ರಾಂತಿ' ಟ್ರೈಲರ್ ರಿಲೀಸ್: ಅಭಿಮಾನಿಗಳಿಗೆ ಹಬ್ಬ

  |

  ದರ್ಶನ್ ನಟನೆಯ 'ಕ್ರಾಂತಿ' ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದ್ದು, ಇದೀಗ ಸಿನಿಮಾದ ಟ್ರೈಲರ್ ಬಿಡುಗಡೆಗೆ ವೇದಿಕೆ ಸಿದ್ಧವಾಗಿದೆ.

  ದರ್ಶನ್ ನೀಡಿದ್ದ ಮಾಹಿತಿಯಂತೆ 'ಕ್ರಾಂತಿ' ಟ್ರೈಲರ್ ಇಂದು (ಜನವರಿ 07)ರಂದು ಸಂಜೆ 7:30ಕ್ಕೆ ಡಿ ಬೀಟ್ಸ್ ಯೂಟ್ಯೂಬ್ ಚಾನೆಲ್‌ನಲ್ಲಿ ತೆರೆಗೆ ಬರಲಿದೆ. ಕೇವಲ ಯೂಟ್ಯೂಬ್‌ನಲ್ಲಿ ಮಾತ್ರವೇ ಅಲ್ಲದೆ, ಸಿನಿಮಾದ ಟ್ರೈಲರ್‌ ಅನ್ನು ರಾಜ್ಯದ ನೂರಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಯೋಜಿಸಿದೆ.

  ರಾಜ್ಯದ ವಿತರಣೆ ವಿಭಾಗಗಳಾದ ಬಿಕೆಟಿ (ಬೆಂಗಳೂರು-ಕೋಲಾರ-ತುಮಕೂರು), ಮಂಡ್ಯ-ಮೈಸೂರು-ಚಾಮರಾಜನಗರ-ಹಾಸನ, ಬೆಳಗಾವಿ-ಬಿಜಾಪುರ-ದಾವಣೆಗೆರೆ-ಚಿತ್ರದುರ್ಗ-ಹೊಸಪೇಟೆ-ಬಳ್ಳಾರಿ, ಹುಬ್ಬಳ್ಳಿ-ಗದಗ-ಧಾರವಾಡ, ಬಾಂಬೆ ಕರ್ನಾಟಕ, ಮಂಗಳೂರು-ಸೌಥ್ ಕೆನರಾ-ಶಿವಮೊಗ್ಗ-ಚಿಕ್ಕಮಗಳೂರು ಹಾಗೂ ಹೈದರಾಬಾದ್ ಕರ್ನಾಟಕದಗಳ ಆಯ್ದ ಚಿತ್ರಮಂದಿರಗಳಲ್ಲಿ 'ಕ್ರಾಂತಿ' ಸಿನಿಮಾದ ಟ್ರೈಲರ್ ಇಂದು ಸಂಜೆ 7:30 ಕ್ಕೆ ಬಿಡುಗಡೆ ಆಗಲಿದೆ.

  ಈ ಚಿತ್ರಮಂದಿರಗಳಲ್ಲಿ ಪ್ರದರ್ಶನವಾಗುತ್ತಿರುವ ಸಿನಿಮಾಗಳ ಜೊತೆಗೆ ದರ್ಶನ್‌ರ 'ಕ್ರಾಂತಿ' ಸಿನಿಮಾದ ಟ್ರೈಲರ್ ಅನ್ನು ಪ್ರದರ್ಶನಗೊಳ್ಳುತ್ತಿರುವುದು ವಿಶೇಷ. ಟ್ರೈಲರ್ ಹೆಚ್ಚು ಜನರಿಗೆ ತಲುಪುವಂತೆ ಯೂಟ್ಯೂಬ್ ಹಾಗೂ ಚಿತ್ರಮಂದಿರಗಳನ್ನು ಬಳಸಿಕೊಂಡು ಚಿತ್ರತಂಡ ಈ ಯೋಜನೆ ಹಾಕಿಕೊಂಡಿದೆ.

  'ಕ್ರಾಂತಿ' ಸಿನಿಮಾದ ಕೆಲವು ಹಾಡುಗಳು ಈಗಾಗಲೇ ಬಿಡುಗಡೆ ಆಗಿದ್ದು ಉತ್ತಮ ಪ್ರತಿಕ್ರಿಯೆ ಹಾಡುಗಳಿಗೆ ವ್ಯಕ್ತವಾಗಿವೆ. ಚಿತ್ರತಂಡವು, ಸಿನಿಮಾದ ಹಾಡುಗಳನ್ನು ರಾಜ್ಯದ ಕೆಲವು ನಗರಗಳಲ್ಲಿ ಬಿಡುಗಡೆ ಮಾಡಿದ್ದು, ಹಲವೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

  'ಕ್ರಾಂತಿ' ಸಿನಿಮಾವು ಜನವರಿ 25 ರಂದು ಬಿಡುಗಡೆ ಆಗುತ್ತಿದೆ. ಸಿನಿಮಾವು ಶಿಕ್ಷಣ ಕ್ಷೇತ್ರದ ಸಮಸ್ಯೆಗಳ ಬಗೆಯದ್ದಾಗಿದೆ. ಸಿನಿಮಾದಲ್ಲಿ ದರ್ಶನ್ ಎನ್‌ಆರ್‌ಐ ಪಾತ್ರದಲ್ಲಿ ನಟಿಸಿದ್ದಾರೆ. ನಾಯಕಿಯಾಗಿ ರಚಿತಾ ರಾಮ್ ಇದ್ದಾರೆ. ದರ್ಶನ್‌ರ ಈ ಹಿಂದಿನ 'ಯಜಮಾನ' ಸಿನಿಮಾ ನಿರ್ದೇಶಿಸಿದ್ದ ಹರಿಕೃಷ್ಣ ಈ ಸಿನಿಮಾವನ್ನೂ ನಿರ್ದೇಶನ ಮಾಡಿದ್ದಾರೆ, 'ಯಜಮಾನ' ನಿರ್ಮಾಣ ಮಾಡಿದ್ದ ಶೈಲಜಾ ನಾಗ್ ಅವರೇ ಈ ಸಿನಿಮಾವನ್ನೂ ನಿರ್ಮಾಣ ಮಾಡಿದ್ದಾರೆ.

  English summary
  Darshan's Kranti movie trailer releasing in more than 100 theaters across the Karnataka. And also on YouTube on January 07.
  Saturday, January 7, 2023, 13:42
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X