»   » ಚಿತ್ರ ಬಿಡುಗಡೆಗೂ ಮುಂಚೆಯೇ ಕಟೌಟ್ ಹಾಕಿಸಿಕೊಂಡ 'ಡಿ ಬಾಸ್'

ಚಿತ್ರ ಬಿಡುಗಡೆಗೂ ಮುಂಚೆಯೇ ಕಟೌಟ್ ಹಾಕಿಸಿಕೊಂಡ 'ಡಿ ಬಾಸ್'

Posted By:
Subscribe to Filmibeat Kannada

ಸಿನಿಮಾ ಬಿಡುಗಡೆಯಾಗುವ ದಿನಗಳಲ್ಲಿ ಥಿಯೇಟರ್ ಮುಂದೆ ಕಟೌಟ್ ನಿಲ್ಲಿಸೋದು, ಅದಕ್ಕೆ ಹಾಲಿನಿಂದ ಅಭಿಷೇಕ ಮಾಡುವುದು, ದೊಡ್ಡ-ದೊಡ್ಡ ಹಾರಗಳನ್ನ ಹಾಕುವುದು ವಾಡಿಕೆ.

ಆದರೆ ಚಿತ್ರ ಬಿಡುಗಡೆಗೂ ಮುಂಚೆಯೇ ಕಟೌಟ್ ಹಾಕಿಸಿಕೊಂಡ ನಾಯಕ ಕನ್ನಡ ಚಿತ್ರರಂಗದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ದರ್ಶನ್ ಅಭಿನಯದ 'ಕುರುಕ್ಷೇತ್ರ' ಚಿತ್ರ ಇನ್ನೂ ಶೂಟಿಂಗ್ ಹಂತದಲ್ಲಿ ಇರುವಾಗಲೇ ಸಿನಿಮಾದ ಕಟೌಟ್ ನಿಲ್ಲಿಸಿದ್ದಾರೆ ಅಭಿಮಾನಿಗಳು.

 Darshan's 'Kurukshetra' cutout is already ready

ಇತ್ತೀಚಿಗಷ್ಟೇ ಮೈಸೂರಿನಲ್ಲಿ ಚಾಮುಂಡೇಶ್ವರಿ ಯುವಕರ ಬಳಗದಿಂದ ಕನ್ನಡ ರಾಜ್ಯೋತ್ಸವವನ್ನ ಆಯೋಜನೆ ಮಾಡಲಾಗಿತ್ತು. ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ದರ್ಶನ್ ಅವರನ್ನ ಬರಮಾಡಿಕೊಳ್ಳಲು ಅಭಿಮಾನಿಗಳು ಕುರುಕ್ಷೇತ್ರ ಚಿತ್ರದ ಎತ್ತರವಾದ ಕಟೌಟ್ ಅನ್ನ ನಿಲ್ಲಿಸಿದ್ದರು.

 Darshan's 'Kurukshetra' cutout is already ready

ದರ್ಶನ್ ಜೊತೆಯಲ್ಲಿ ನೆನಪಿರಲಿ ಪ್ರೇಮ್, ಧ್ರುವ ಸರ್ಜಾ, ದಿನಕರ್ ತೂಗುದೀಪ್, ಸೃಜನ್ ಲೋಕೇಶ್ ಇನ್ನೂ ಅನೇಕ ನಟರ ಕಟೌಟ್ ಗಳನ್ನ ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ನಿಲ್ಲಿಸಲಾಗಿತ್ತು.

 Darshan's 'Kurukshetra' cutout is already ready

ಸದ್ಯ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮುನಿರತ್ನ ನಿರ್ಮಾಣದ ಕುರುಕ್ಷೇತ್ರ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದಾರೆ. ಮುಂದಿನ ವರ್ಷ ಮಾರ್ಚ್ ಅಂತ್ಯದ ವೇಳೆಗೆ ಚಿತ್ರ ಪ್ರೇಕ್ಷಕರ ಮುಂದೆ ಬರಲಿದೆ.

English summary
Kannada actor Darshan's 'Kurukshetra' cutout is already ready for Rajyotsava Program in Mysuru. Darshan starrer Kurukshetra is still in shooting stage.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X