»   » 'ಕುರುಕ್ಷೇತ್ರ'ದ ಮೇಕಿಂಗ್ ಫೋಟೋ ಲೀಕ್, ದರ್ಶನ್, ಹರಿಪ್ರಿಯಾ ಹೊಸ ಲುಕ್

'ಕುರುಕ್ಷೇತ್ರ'ದ ಮೇಕಿಂಗ್ ಫೋಟೋ ಲೀಕ್, ದರ್ಶನ್, ಹರಿಪ್ರಿಯಾ ಹೊಸ ಲುಕ್

Posted By:
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯಿಸುತ್ತಿರುವ 50ನೇ ಚಿತ್ರ 'ಕುರುಕ್ಷೇತ್ರ' ಈಗಾಗಲೇ ಹೈದರಾಬಾದ್ ನಲ್ಲಿರುವ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಚಿತ್ರೀಕರಣ ಶುರು ಮಾಡಿದೆ. ಈ ಮಧ್ಯೆ ಚಿತ್ರೀಕರಣದ ಮೇಕಿಂಗ್ ಚಿತ್ರಗಳು ಲೀಕ್ ಆಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಕಳೆದ ಭಾನುವಾರವಷ್ಟೇ (ಆಗಸ್ಟ್ 6) 'ಕುರುಕ್ಷೇತ್ರ' ಸಿನಿಮಾ ಅದ್ಧೂರಿಯಾಗಿ ಸೆಟ್ಟೇರಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಿತ್ರಕ್ಕೆ ಚಾಲನೆ ನೀಡಿದ್ದರು. ಸತತ ನೂರು ದಿನಗಳ ಕಾಲ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಶೂಟಿಂಗ್ ನಡೆಯಲಿದ್ದು, ಆರಂಭದಲ್ಲೇ ಮೇಕಿಂಗ್ ಸ್ಟಿಲ್ ಬಹಿರಂಗವಾಗಿರುವುದು ಮತ್ತಷ್ಟು ಕುತೂಹಲ ಮೂಡಿಸಿದೆ.

ಅಷ್ಟಕ್ಕೂ, 'ಕುರುಕ್ಷೇತ್ರ'ದ ಯಾವ ದೃಶ್ಯದ ಫೋಟೋ ಲಿಕ್ ಆಗಿದೆ ಎಂದು ತಿಳಿದುಕೊಳ್ಳಲು ಮುಂದೆ ಓದಿ......

ಚಿತ್ರಕೃಪೆ: sandalwood insides

'ಕುರುಕ್ಷೇತ್ರ'ದ ಮೇಕಿಂಗ್ ಫೋಟೋ ಲೀಕ್

ದರ್ಶನ್ ಅಭಿನಯಿಸುತ್ತಿರುವ 'ಕುರುಕ್ಷೇತ್ರ' ಚಿತ್ರದ ಎರಡು ಮೇಕಿಂಗ್ ಫೋಟೋ ಲೀಕ್ ಆಗಿದೆ. ಒಂದು ದುರ್ಯೋಧನ ಪಾತ್ರಧಾರಿ ದರ್ಶನ್ ಅವರದ್ದು, ಮತ್ತೊಂದು ಹರಿಪ್ರಿಯಾ ಪಾತ್ರದ್ದು.

'ಬಾಹುಬಲಿ'ಯನ್ನ ಮೀರಿಸುವಂತಿದೆ 'ಕುರುಕ್ಷೇತ್ರ'ದ ಫಸ್ಟ್ ಲುಕ್ ಟೀಸರ್

ಹರಿಪ್ರಿಯಾ ಫಸ್ಟ್ ಲುಕ್

ಕುರುಕ್ಷೇತ್ರ ಚಿತ್ರದಲ್ಲಿ ಹರಿಪ್ರಿಯಾ ಅವರು ಹೇಗೆ ಕಾಣಿಸಿಕೊಳ್ಳಲಿದ್ದಾರೆ ಎಂಬ ಕುತೂಹಲಕ್ಕೆ ಈಗ ತೆರೆ ಬಿದ್ದಿದೆ. ನರ್ತಕಿ ಪಾತ್ರದಲ್ಲಿ ಬಣ್ಣ ಹಚ್ಚಿರುವ ಹರಿಪ್ರಿಯಾ ಅವರ ಮೇಕಿಂಗ್ ಸ್ಟಿಲ್ ಬಹಿರಂಗವಾಗಿದೆ.

'ಕುರುಕ್ಷೇತ್ರ'ಕ್ಕೆ ಅದ್ಧೂರಿ ಚಾಲನೆ: ಎಲ್ಲ ಊಹಾಪೋಹಗಳಿಗೆ ಸಿಕ್ತು ಉತ್ತರ

ದರ್ಶನ್ ಹೊಸ ಲುಕ್

ಇನ್ನು ದುರ್ಯೋಧನ ಪಾತ್ರಧಾರಿ ದರ್ಶನ್ ಅವರು ಕಾಸ್ಟ್ಯೂಮ್ ತೊಟ್ಟು ಕುಳಿತುಕೊಂಡಿರುವ ಚಿತ್ರವೊಂದು ಬಹಿರಂಗವಾಗಿದೆ. ಈ ಫೋಟೋದಲ್ಲಿ ನಿರ್ಮಾಪಕ ಮುನಿರತ್ನ ಅವರು ಕಾಣಿಸಿಕೊಂಡಿದ್ದಾರೆ.

ದರ್ಶನ್ 'ಕುರುಕ್ಷೇತ್ರ'ದ ಬಗ್ಗೆ ರಾಣಾ ದಗ್ಗುಬಾಟಿ ಏನಂದ್ರು?

ಹಾಡಿನ ಮೂಲಕ ಚಿತ್ರೀಕರಣ ಆರಂಭ

ಅಂದ್ಹಾಗೆ, 'ಕುರುಕ್ಷೇತ್ರ'ದ ಚಿತ್ರೀಕರಣ ಹಾಡಿನ ಮೂಲಕ ಆರಂಭವಾಗಿದೆ. ದುರ್ಯೋಧನ ಮತ್ತು ನೃತ್ಯ ನರ್ತಕಿ ನಡುವಿನ ಹಾಡನ್ನ ಚಿತ್ರೀಕರಿಸಲಾಗುತ್ತಿದೆ.

'ಕುರುಕ್ಷೇತ್ರ' ಚಿತ್ರದ ಯಾವ್ಯಾವ ಪಾತ್ರಗಳಲ್ಲಿ ಯಾವ್ಯಾವ ನಟರು ಮಿಂಚಲಿದ್ದಾರೆ ನೋಡಿ..

'ಕುರುಕ್ಷೇತ್ರ' ತಂಡ

ದರ್ಶನ್ 'ದುರ್ಯೋಧನ', ಅಂಬರೀಷ್ 'ಭೀಷ್ಮ', ರವಿಚಂದ್ರನ್ 'ಕೃಷ್ಣ', ಅರ್ಜುನ್ ಸರ್ಜಾ 'ಕರ್ಣ', ಬಹುಭಾಷಾ ನಟಿ ಸ್ನೇಹಾ 'ದ್ರೌಪದಿ', ಡ್ಯಾನಿಶ್ ಅಖ್ತರ್ ಸೈಫಿ 'ಭೀಮ', ರವಿಶಂಕರ್ 'ಶಕುನಿ', ಶ್ರೀನಾಥ್ 'ಧೃತರಾಷ್ಟ್ರ', ಶ್ರೀನಿವಾಸ ಮೂರ್ತಿ 'ದ್ರೋಣಚಾರ್ಯ', ಶಶಿಕುಮಾರ್ 'ಧರ್ಮರಾಯ', ನಿಖಿಲ್ ಕುಮಾರ್ 'ಅಭಿಮನ್ಯು', ಸೇರಿದಂತೆ ಹಲವರು ವಿವಿಧ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ನಾಗಣ್ಣ ಈ ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದು, ಮುನಿರತ್ನ ನಿರ್ಮಾಣ ಮಾಡುತ್ತಿದ್ದಾರೆ.

English summary
Challenging Star Darshan Starrer 50th Movie Kurukshetra Making Still Leak. the movie directed by naganna, produced by munirathna.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada