»   » ತೂಗುದೀಪ ಕುಟುಂಬಕ್ಕೂ ರಾಜವಂಶಕ್ಕೂ ಇರುವ ನಂಟು ನಿನ್ನೆ ಮೊನ್ನೆಯದಲ್ಲ!

ತೂಗುದೀಪ ಕುಟುಂಬಕ್ಕೂ ರಾಜವಂಶಕ್ಕೂ ಇರುವ ನಂಟು ನಿನ್ನೆ ಮೊನ್ನೆಯದಲ್ಲ!

Posted By: ಯಶಸ್ವಿನಿ ಎಂ.ಕೆ
Subscribe to Filmibeat Kannada

ನಟ ಸಾರ್ವಭೌಮ ಎಂದು ಬಿರುದಾಂಕಿತರಾದ ರಾಜ್ ಕುಮಾರ್ ಕುಟುಂಬದ್ದು ಸಹ ನಟರಿಗಾಗಿ ಬಾಗುವ ಮನಸ್ಸು. ಅವರ ಮನೆಗೆ ಯಾರೇ ಬರಲಿ ಅದು ಸಹಾಯಾರ್ಥಕ್ಕಾಗಿರಲಿ ಅಥವಾ ಭೇಟಿಯಾಗಿರಲಿ ಎಲ್ಲರನ್ನು ವಿನಯದಿಂದಲೇ ನಡೆಸಿಕೊಳ್ಳುತ್ತಿದ್ದ ಮನೆಯ ಯಜಮಾನಿ ಪಾರ್ವತಮ್ಮರದ್ದು ದೊಡ್ಡ ಔದಾರ್ಯತೆ. ಅದಕ್ಕೆ ಈ ಉದಾಹರಣೆಯೇ ಸಾಕ್ಷಿ.[ಮಣ್ಣಲ್ಲಿ ಮಣ್ಣಾದ ಕನ್ನಡ ಚಿತ್ರರಂಗದ 'ವಜ್ರೇಶ್ವರಿ' ಪಾರ್ವತಮ್ಮ ರಾಜ್ ಕುಮಾರ್]

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ತಂದೆ ತೂಗುದೀಪ ಶ್ರೀನಿವಾಸ ಮತ್ತು ಡಾ.ರಾಜ್ ಕುಮಾರ್ ಅವರ ಸಂಬಂಧ ತುಂಬಾ ಹತ್ತಿರವಾದದ್ದು. ರಾಜ್ ಕುಮಾರ್ ಅವರು ಅಭಿನಯಿಸುತ್ತಿದ್ದ ಬಹುತೇಕ ಎಲ್ಲ ಸಿನಿಮಾಗಳಲ್ಲಿ ತೂಗುದೀಪ ಶ್ರೀನಿವಾಸ ಅವರು ಬಣ್ಣ ಹಚ್ಚುತ್ತಿದ್ದರು. ಆದ್ರೆ, ಎಲ್ಲ ಚೆನ್ನಾಗಿತ್ತು ಎನ್ನುವ ಸಂದರ್ಭದಲ್ಲಿ ಖಳನಟ ತೂಗುದೀಪ ಶ್ರೀನಿವಾಸ ಅವರಿಗೆ ಆರ್ಥಿಕ ಸಂಕಷ್ಟ ಎದುರಾಗಿತ್ತು. ಈ ವೇಳೆ ರಾಜ್ ಮತ್ತು ಪಾರ್ವತಮ್ಮ ಇವರಿಗೆ ಸಹಾಯ ಮಾಡುತ್ತಾರೆ. ಈ ಪ್ರೀತಿಗೆ ದರ್ಶನ್ ಅವರ ತಂದೆ ಮಾಡಿದ ಅಭಿಮಾನದ ಕೆಲಸ ಏನು ಅಂತ ಮುಂದೆ ನೋಡಿ.....

'ತೂಗುದೀಪ' ಅವರಿಗೆ ಸಹಾಯ ಮಾಡಿದ್ದ ರಾಜ್

ಮೈಸೂರಿನಲ್ಲಿ ಒಂದು ಮನೆ ಕಟ್ಟಬೇಕು ಎನ್ನುವುದು ತೂಗುದೀಪ ಶ್ರೀನಿವಾಸ ಅವರ ಆಸೆ ಆಗಿತ್ತು. ಆದ್ರೆ, ಆರ್ಥಿಕ ಸಮಸ್ಯೆಯಿಂದ ಇದು ಸಾಧ್ಯವಾಗಿರಲಿಲ್ಲ. ಈ ಸಮಯದಲ್ಲಿ ಡಾ.ರಾಜ್ ಕುಮಾರ್ ಅವರು ತೂಗುದೀಪ ಅವರಿಗೆ ಮನೆ ಕಟ್ಟಿಕೊಳ್ಳಲು ಆರ್ಥಿಕವಾಗಿ ಸಹಾಯ ಮಾಡಿದರಂತೆ.[ಪತಿಯ ಹಾದಿಯಲ್ಲಿ ಪತ್ನಿ: ಅಂಧರ ಬಾಳಲ್ಲಿ ಹೊಸಬೆಳಕು ಮೂಡಿಸಲಿರುವ 'ದೊಡ್ಮನೆ' ಅಮ್ಮ]

ಕೃತಜ್ಞತೆಯ ಪ್ರತೀಕ ಈ ಮನೆ

ರಾಜ್ ಕುಮಾರ್ ಹಾಗೂ ಪಾರ್ವತಮ್ಮ ರಾಜ್ ಕುಮಾರ್ ಅವರು ಮಾಡಿದ ಸಹಾಯಕ್ಕೆ ಪ್ರತೀಕವಾಗಿ, ತಾವು ಕಟ್ಟಿಸಿದ ಮನೆಗೆ ಅವರ ಹೆಸರನ್ನೇ ಇಡಲು ನಿರ್ಧರಿಸಿದರಂತೆ ತೂಗುದೀಪ ಶ್ರೀನಿವಾಸ ಅವರು.['ಮುತ್ತುರಾಜ'ನ ಪತ್ನಿ ಪಾರ್ವತಮ್ಮ ನಿರ್ಮಿಸಿದ ಮುತ್ತಿನಂಥ ಸಿನಿಮಾಗಳು]

ದರ್ಶನ್ ಅವರ ಮನೆ ಹೆಸರು 'ಮುಪಾ ಕೃಪಾ'

ಮೈಸೂರಿನಲ್ಲಿರುವ ದರ್ಶನ್ ಅವರ ಹಳೆಯ ಮನೆಯ ಹೆಸರು 'ಮುಪಾ ಕೃಪಾ'. ಮು ಅಂದ್ರೆ ಮುತ್ತುರಾಜ, ಪಾ ಅಂದರೆ ಪಾರ್ವತಮ್ಮ. ಇದು ಮೈಸೂರಿನ ಸಿದ್ದಾರ್ಥ ಬಡಾವಣೆಯಲ್ಲಿದೆ. ಇದನ್ನು ಪಾರ್ವತಮ್ಮ ರಾಜ್ ಕುಮಾರ್ ಕಟ್ಟಿಸಿಕೊಟ್ಟಿದ್ದರಂತೆ.[ಇದಕ್ಕೆ ವಿಚಿತ್ರ ಅಂತೀರೋ.. ಕಾಕತಾಳೀಯ ಅಂತೀರೋ.. ನಿಮಗೆ ಬಿಟ್ಟಿದ್ದು.!]

ರಾಜ್ ಚಿತ್ರಗಳಲ್ಲಿ ತೂಗುದೀಪ ಇರಲೇಬೇಕಾಗಿತ್ತು

ಅಂದು ರಾಜ್ ಕುಮಾರ್ ಅಭಿನಯಿಸುತ್ತಿದ್ದ ಬಹುತೇಕ ಎಲ್ಲ ಚಿತ್ರಗಳಲ್ಲೂ ತೂಗುದೀಪ ಶ್ರೀನಿವಾಸ ಅವರು ಇರಲೇಬೇಕಾಗಿತ್ತಂತೆ. ಅಷ್ಟರ ಮಟ್ಟಿಗೆ ರಾಜ್ ಮತ್ತು ತೂಗುದೀಪ ಅವರ ಕಾಂಬಿನೇಷನ್ ಯಶಸ್ವಿಯಾಗಿತ್ತು. 'ಮೇಯರ್ ಮುತ್ತಣ್ಣ', 'ಸಿಪಾಯಿ ರಾಮು', 'ಗಂಧದ ಗುಡಿ', 'ದಾರಿ ತಪ್ಪಿದ ಮಗ', 'ಗಿರಿ ಕನ್ಯೆ', 'ಬಬ್ರು ವಾಹನ', 'ಶಂಕರ್ ಗುರು', 'ಕವಿರತ್ನ ಕಾಳಿದಾಸ' ಹೀಗೆ ಸಾಲು ಸಾಲು ಚಿತ್ರಗಳಲ್ಲಿ ತೂಗುದೀಪ ಅವರು ರಾಜ್ ಜೊತೆ ಅಭಿನಯಿಸಿದ್ದಾರೆ.

ಚಿತ್ರಕೃಪೆ: ದರ್ಶನ್ ತೂಗುದೀಪ ಫ್ಯಾನ್ಸ್ ಗ್ರೂಪ್

English summary
Parvathamma Rajkumar, wife of legendary Kannaada actor Dr Rajkumar, had given financial help to senior Kannada actor Toogudeep shreenivas to build home in Mysuru. So Shreenivas's wife keep their name to the home. Mutturaj-Parvatamma in short Mupa kripa is the name of the home in Mysuru.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada