»   »  'ಮುತ್ತುರಾಜ'ನ ಪತ್ನಿ ಪಾರ್ವತಮ್ಮ ನಿರ್ಮಿಸಿದ ಮುತ್ತಿನಂಥ ಸಿನಿಮಾಗಳು

'ಮುತ್ತುರಾಜ'ನ ಪತ್ನಿ ಪಾರ್ವತಮ್ಮ ನಿರ್ಮಿಸಿದ ಮುತ್ತಿನಂಥ ಸಿನಿಮಾಗಳು

Posted By:
Subscribe to Filmibeat Kannada

ಪಾರ್ವತಮ್ಮ ರಾಜ್ ಕುಮಾರ್ ಕನ್ನಡ ಸಿನಿಮಾರಂಗಕ್ಕೆ ಅಪಾರ ಕೊಡುಗೆಯನ್ನು ನೀಡಿದ್ದಾರೆ. 80ಕ್ಕೂ ಹೆಚ್ಚು ಸಿನಿಮಾಗಳನ್ನು ನಿರ್ಮಾಣ ಮಾಡಿ ಕನ್ನಡ ಚಿತ್ರರಂಗಕ್ಕೆ ಅನೇಕ ಮುತ್ತಿನಂಥ ಸಿನಿಮಾಗಳನ್ನು ನೀಡಿದ್ದಾರೆ.

ಡಾ.ರಾಜ್ ಕುಮಾರ್ ನಟನೆಯ 'ತ್ರಿಮೂರ್ತಿ' ಸಿನಿಮಾದ ಮೂಲಕ ಚಿತ್ರ ನಿರ್ಮಾಣಕ್ಕೆ ಪಾರ್ವತಮ್ಮ ರಾಜ್ ಕುಮಾರ್ ಮುಂದಾದರು. ಬಳಿಕ ಸಾಲು ಸಾಲು ಸದಭಿರುಚಿಯ ಸಿನಿಮಾಗಳನ್ನು ನಿರ್ಮಿಸಿ ಯಶಸ್ಸು ಗಳಿಸಿದರು.['ದೊಡ್ಮನೆ ದೇವತೆ'ಯ ಜೀವನದ ಹಿನ್ನೋಟ]

ಪಾರ್ವತಮ್ಮ ಅವರು ತಮ್ಮ ಪೂರ್ಣಿಮಾ ಮತ್ತು ವಜ್ರೇಶ್ವರಿ ಚಿತ್ರಸಂಸ್ಥೆಗಳಿಂದ ನೀಡಿದ ಸಿನಿಮಾಗಳ ಮಾಹಿತಿ ಇಲ್ಲಿದೆ ಓದಿ...

80ಕ್ಕೂ ಹೆಚ್ಚು ಸಿನಿಮಾಗಳು

ಕನ್ನಡ ಸಿನಿಮಾರಂಗಕ್ಕೆ 80ಕ್ಕೂ ಹೆಚ್ಚು ಸಿನಿಮಾಗಳನ್ನು ಪಾರ್ವತಮ್ಮ ರಾಜ್ ಕುಮಾರ್ ನೀಡಿದ್ದಾರೆ. ಈ ಚಿತ್ರಗಳಲ್ಲಿ ಅನೇಕ ಸಿನಿಮಾಗಳನ್ನು ತಾವೇ ವಿತರಣೆ ಸಹ ಮಾಡಿದ್ದಾರೆ.

ರಾಜ್ ಅಭಿನಯದ ಸಿನಿಮಾಗಳು

ಡಾ.ರಾಜ್ ಕುಮಾರ್ ನಟನೆಯ 'ಕವಿರತ್ನ ಕಾಳಿದಾಸ', 'ಹಾಲು ಜೇನು', 'ಜೀವನ ಚೈತ್ರ', 'ಶಂಕರ್ ಗುರು', 'ದೇವತಾ ಮನುಷ್ಯ' ಸೇರಿದಂತೆ ಸಾಕಷ್ಟು ಸೂಪರ್ ಹಿಟ್ ಸಿನಿಮಾಗಳನ್ನು ಸ್ವತಃ ಪಾರ್ವತಮ್ಮ ರಾಜ್ ಕುಮಾರ್ ಅವರೇ ನಿರ್ಮಾಣ ಮಾಡಿದ್ದರು.[ಪಾರ್ವತಮ್ಮ ಗುರುತಿಸಿದ ನಟಿಯರಿಂದು 'ದೊಡ್ಡ ಸ್ಟಾರ್ಸ್'ಗಳು]

ಶಿವಣ್ಣ ನಟನೆಯ ಚಿತ್ರಗಳು

ಶಿವರಾಜ್ ಕುಮಾರ್ ನಟನೆಯ 'ಆನಂದ್', 'ಜನುಮದ ಜೋಡಿ', 'ಹೃದಯ ಹೃದಯ', 'ಓಂ' ರೀತಿಯ ಸೂಪರ್ ಹಿಟ್ ಸಿನಿಮಾಗಳ ಹಿಂದೆ ಪಾರ್ವತಮ್ಮ ಅವರ ಪಾತ್ರ ದೊಡ್ಡದಿದೆ.[ಡಾ.ರಾಜ್ ಸಮಾಧಿ ಪಕ್ಕದಲ್ಲಿಯೇ ಪತ್ನಿ ಪಾರ್ವತಮ್ಮ ಅಂತ್ಯಕ್ರಿಯೆ]

ರಾಘವೇಂದ್ರ ರಾಜ್ ಕುಮಾರ್ ಸಿನಿಮಾಗಳು

ರಾಘವೇಂದ್ರ ರಾಜ್ ಕುಮಾರ್ ಅವರ 'ನಂಜುಂಡಿ ಕಲ್ಯಾಣ', 'ಗಜಪತಿ ಗರ್ವಭಂಗ', 'ಸ್ವಸ್ತಿಕ್' ಸಿನಿಮಾಗಳನ್ನು ಮಾಡಿ, ಮಕ್ಕಳ ಸಿನಿಮಾಯಾನಕ್ಕೆ ಪಾರ್ವತಮ್ಮ ಅವರು ದಾರಿ ದೀಪವಾಗಿದ್ದರು.

ಪುನೀತ್ ಸಿನಿಮಾಗಳು

'ಅಪ್ಪು' ಸಿನಿಮಾದಿಂದ ಹಿಡಿದು ಪುನೀತ್ ನಟನೆಯ ಬಹುತೇಕ ಸಿನಿಮಾಗಳನ್ನು ನಿರ್ಮಾಣ ಮಾಡುವ ಜವಾಬ್ದಾರಿಯನ್ನು ತೆಗೆದುಕೊಂಡಿದ್ದು ತಾಯಿ ಪಾರ್ವತಮ್ಮ ರಾಜ್ ಕುಮಾರ್.[ಪತಿಯ ಹಾದಿಯಲ್ಲಿ ಪತ್ನಿ: ಅಂಧರ ಬಾಳಲ್ಲಿ ಹೊಸಬೆಳಕು ಮೂಡಿಸಲಿರುವ 'ದೊಡ್ಮನೆ' ಅಮ್ಮ]

ಮೆರೆಯಲಾಗದ ಸಿನಿಮಾಗಳು

'ಪೂರ್ಣಿಮಾ' ಮತ್ತು 'ವಜ್ರೇಶ್ವರಿ' ಬ್ಯಾನರ್ ಸದಭಿರುಚಿಯ ಸಿನಿಮಾಗಳಿಗೆ ಹೆಸರು ಮಾಡಿದ ಸಂಸ್ಥೆ. ಈ ಚಿತ್ರಸಂಸ್ಥೆಯಿಂದ ಬಂದ ಸಾಕಷ್ಟು ಸಿನಿಮಾಗಳನ್ನು ಇಂದಿಗೂ ಜನ ಮರೆಯುವುದಕ್ಕೆ ಸಾಧ್ಯವಿಲ್ಲ.

ದಾಖಲೆಯ ಚಿತ್ರಗಳು

ಪಾರ್ವತಮ್ಮ ರಾಜ್ ಕುಮಾರ್ ನಿರ್ಮಾಣ ಮಾಡಿದ 'ಹಾಲು ಜೇನು', 'ಓಂ' ಸೇರಿದಂತೆ ಸಾಕಷ್ಟು ಸಿನಿಮಾಗಳು ಒಂದು ವರ್ಷ ಕಾಲ ಚಿತ್ರಮಂದಿರಗಳಲ್ಲಿ ಪ್ರದರ್ಶನವಾಗಿ ದಾಖಲೆ ನಿರ್ಮಿಸಿವೆ.

English summary
'Parvathamma Rajkumar' produced more than 80 movies under the production house called Poornima Enterprises and vajreshwari combines.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada