For Quick Alerts
  ALLOW NOTIFICATIONS  
  For Daily Alerts

  ಡಿ ಬಾಸ್ ಅಭಿಮಾನಿಗಳಿಗೆ ಖುಷಿ ಸುದ್ದಿ: ರಾಮನವಮಿಗೆ 'ರಾಬರ್ಟ್' ಕಡೆಯಿಂದ ಭರ್ಜರಿ ಗಿಫ್ಟ್

  |

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ಸಾಕಷ್ಟು ನಿರೀಕ್ಷೆಯನ್ನು ಹುಟ್ಟುಹಾಕಿದೆ. ಸ್ಯಾಂಡಲ್ ವುಡ್ ನ ಬಹು ನಿರೀಕ್ಷೆಯ ಸಿನಿಮಾಗಳಲ್ಲಿ ಒಂದಾಗಿರುವ ರಾಬರ್ಟ್ ಎಲ್ಲವು ಅಂದುಕೊಂಡಂತೆ ಆಗಿದ್ದರೆ ಏಪ್ರಿಲ್ ಗೆ ತೆರೆಗೆ ಬರಬೇಕಿತ್ತು. ಆದರೆ ಮಹಾಮಾರಿ ಕೊರೊನಾ ವೈರಸ್ ಹಾವಳಿಯ ಪರಿಣಾಮ ರಾಬರ್ಟ್ ರಿಲೀಸ್ ಮುಂದಕ್ಕೆ ಹೋಗಿದೆ.

  ಸಿನಿಮಾ ರಿಲೀಸ್ ಗೆ ತೊಂದರೆ ಆಗಿದ್ದಲ್ಲದೆ ಅದ್ದೂರಿಯಾಗಿ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಬೇಕೆಂದುಕೊಂಡಿದ್ದ ಚಿತ್ರತಂಡದ ಲೆಕ್ಕಾಚಾರ ಕೂಡ ತಲೆಕೆಳಗಾಗಿದೆ. ಅದೇನೆ ಇರ್ಲಿ ಸದ್ಯ ರಾಬರ್ಟ್ ತಂಡದಿಂದ ಮತ್ತೊಂದು ಸಂತಸದ ಸುದ್ದಿ ಹೊರಬಿದ್ದಿದೆ. ರಾಮನವಮಿಗೆ ರಾಬರ್ಟ್ ತಂಡ ವಿಶೇಷ ಉಡುಗೊರೆ ನೀಡಲು ಸಜ್ಜಾಗಿದೆ. ಮುಂದೆ ಓದಿ..

  ಆಂಜನೇಯನ ಅವತಾರದಲ್ಲಿ ದರ್ಶನ್, ಹೆಸರು ಮಾತ್ರ ರಾಬರ್ಟ್: ಕಾರಣವೇನು?ಆಂಜನೇಯನ ಅವತಾರದಲ್ಲಿ ದರ್ಶನ್, ಹೆಸರು ಮಾತ್ರ ರಾಬರ್ಟ್: ಕಾರಣವೇನು?

  ಈಗಾಗಲೆ ಮೂರು ಹಾಡುಗಳು ರಿಲೀಸ್ ಆಗಿದೆ

  ಈಗಾಗಲೆ ಮೂರು ಹಾಡುಗಳು ರಿಲೀಸ್ ಆಗಿದೆ

  ರಾಬರ್ಟ್ ಸಿನಿಮಾದಿಂದ ಈಗಾಗಲೆ ಎರಡು ಹಾಡು ರಿಲೀಸ್ ಆಗಿದೆ. ಚಿತ್ರದ ಟೈಟಲ್ ಸಾಂಗ್, ದೋಸ್ತಾ ಕಣೋ ಮತ್ತು ಜೈ ಶ್ರೀರಾಮ್ ಹಾಡುಗಳು ರಿಲೀಸ್ ಆಗಿದ್ದು ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿವೆ. ಚಿತ್ರದ ಹಾಡು ರಿಲೀಸ್ ಆಗುತ್ತಿದ್ದಂತೆ ಲಕ್ಷಗಟ್ಟಲೆ ವೀಕ್ಷಣೆ ಪಡೆಯುವ ಮೂಲಕ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಅದರಲ್ಲೂ ಜೈ ಶ್ರೀ ರಾಮ್ ಹಾಡು ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಸೃಷ್ಟಿಮಾಡಿತ್ತು.

  ರಾಮನವಮಿಗೆ ಜೈ ಶ್ರೀರಾಮ್ ಹೊಸ ಅವತರಣಿಕೆ

  ರಾಮನವಮಿಗೆ ಜೈ ಶ್ರೀರಾಮ್ ಹೊಸ ಅವತರಣಿಕೆ

  ಏಪ್ರಿಲ್ 2 ರಾಮನವಮಿಯ ಪ್ರಯುಕ್ತ ಚಿತ್ರತಂಡ ಅಭಿಮಾನಿಗಳಿಗೆ ವಿಶೇಷ ಗಿಫ್ಟ್ ಕೊಡಲು ಮುಂದಾಗಿದೆ. ಈಗಾಗಲೆ ಜೈ ಶ್ರೀರಾಮ್ ಹಾಡು ರಿಲೀಸ್ ಆಗಿದೆ. ಈ ಹಾಡಿನ ಹೊಸ ಅವತರಣಿಕೆ ಬಿಡುಗಡೆ ಮಾಡಲು ಸಿನಿಮಾತಂಡ ನಿರ್ಧರಿಸಿದೆ. ಹೊಸ ಅವತರಣಿಕೆ ಹಾಡು ಹೇಗಿರಲಿದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿದೆ.

  ಆಡಿಯೋ ರಿಲೀಸ್ ಕಾರ್ಯಕ್ರಮ ರದ್ದು

  ಆಡಿಯೋ ರಿಲೀಸ್ ಕಾರ್ಯಕ್ರಮ ರದ್ದು

  ರಾಬರ್ಟ್ ಸಿನಿಮಾದ ಹಾಡುಗಳನ್ನು ಅದ್ದೂರಿಯಾಗಿ ರಿಲೀಸ್ ಮಾಡುವ ಪ್ಲಾನ್ ಮಾಡಿತ್ತು ಸಿನಿಮಾತಂಡ. ಉತ್ತರ ಕರ್ನಾಟಕದಲ್ಲಿ ರಾಬರ್ಟ್ ಹಾಡುಗಳು ಬಿಡುಗಡೆಯಾಗಬೇಕಿತ್ತು. ಆದರೆ ಕಿಲ್ಲರ್ ಕೊರೊನಾ ವೈರಸ್ ಆಡಿಯೋ ರಿಲೀಸ್ ಕಾರ್ಯಕ್ರಮನ್ನೆ ರದ್ದು ಮಾಡಿದೆ. ಹಾಗಾಗಿ ಸದ್ಯ ಚಿತ್ರದ ಎಲ್ಲಾ ಹಡುಗಳು ಯೂಟ್ಯೂಬ್ ನಲ್ಲಿಯೆ ರಿಲೀಸ್ ಆಗುವ ಸಾಧ್ಯತೆ ಇದೆ.

  ಮೇ ತಿಂಗಳಲ್ಲಿ ಸಿನಿಮಾ ರಿಲೀಸ್?

  ಮೇ ತಿಂಗಳಲ್ಲಿ ಸಿನಿಮಾ ರಿಲೀಸ್?

  ರಾಬರ್ಟ್ ಸಿನಿಮಾ ಏಪ್ರಿಲ್ 9ಕ್ಕೆ ರಿಲೀಸ್ ಮಾಡುವ ಪ್ಲಾನ್ ಮಾಡಿತ್ತು ಸಿನಿಮಾತಂಡ. ಆದರೆ ಏಪ್ರಿಲ್ 14ರ ವರೆಗೆ ಸಂಪೂರ್ಣ ಭಾರತ ಲಾಕ್ ಡೌನ್ ಆದ ರಾಬರ್ಟ್ ಸಿನಿಮಾ ರಿಲೀಸ್ ದಿನಾಂಕ ಮುಂದಕ್ಕೆ ಹೋಗಿದೆ. ಮೂಲಗಳ ಪ್ರಕಾರ ಸಿನಿಮಾ ಮೇ 1ಕ್ಕೆ ತೆರೆಗೆ ಬರಲಿದೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಚಿತ್ರತಂಡ ಇನ್ನು ಅಧಿಕೃತ ಮಾಹಿತಿ ಬಹಿರಂಗ ಪಡಿಸಿಲ್ಲ.

  English summary
  Kannada Actor Darshan starrer Roberrt film will release new version song of Jai Shri Ram in Rama Navami

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X