For Quick Alerts
  ALLOW NOTIFICATIONS  
  For Daily Alerts

  ದರ್ಶನ್ ಪತ್ನಿ ವಿಜಯಲಕ್ಷ್ಮಿ ಪ್ರಾರಂಭಿಸಿದ್ದಾರೆ ಹೊಸ ವ್ಯಾಪಾರ

  |

  ಸ್ಟಾರ್ ನಟರ ಪತ್ನಿಯರು ಪತಿಯ ನೆರಳಿನಲ್ಲಿ ತಣ್ಣಗೆ ಉಳಿಯುವುದೇ ಹೆಚ್ಚು. ಆದರೆ ಇದಕ್ಕೆ ಅಪವಾದವೆಂಬಂತೆ ಕೆಲವರು ಮಾತ್ರ ಸಮಾಜ ಸೇವೆ, ನವೋದ್ಯಮ, ಸಿನಿಮಾ ನಿರ್ಮಾಣದಂತಹಾ ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ.

  ಇಂಥಹಾ ಧೈರ್ಯಶಾಲಿ ಸ್ಟಾರ್ ಪತ್ನಿಯರ ಸಾಲಿಗೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಸಹ ಸೇರಿದ್ದಾರೆ. ವಿಜಯಲಕ್ಷ್ಮಿ ಅವರು ಹೊಸ ಉದ್ಯಮವೊಂದನ್ನು ಪ್ರಾರಂಭಿಸಿದ್ದಾರೆ.

  ವಿಜಯಲಕ್ಷ್ಮಿ ಪ್ರಾರಂಭಿಸಿರುವ ಈ ನವೋದ್ಯಮ ಗ್ರಾಹಕರಿಗೆ ಗುಣಮಟ್ಟದ ಸರಕು ನೀಡುವ ಜೊತೆಗೆ, ರೈತರಿಗೆ ಸಹ ದುಡಿಮೆಯ ಫಲ ನೀಡುವ ಉತ್ತಮ ಆಲೋಚನೆ ಹೊಂದಿದೆ.

  ವಿಜಯಲಕ್ಷ್ಮಿ ಅವರು ಟ್ವಿಟ್ಟರ್‌ನಲ್ಲಿ ತಮ್ಮ ಹೊಸ ಬಿಸಿನೆಸ್ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು. ಇ-ಕಾಮರ್ಸ್‌ ನಲ್ಲಿ ಇದು ನನ್ನ ಮೊದಲ ಹೆಜ್ಜೆ ಎಂದಿದ್ದಾರೆ.

  ರೈತರಿಂದ ಪಡೆದ ವಸ್ತು ನೇರ ಗ್ರಾಹಕರಿಗೆ

  ರೈತರಿಂದ ಪಡೆದ ವಸ್ತು ನೇರ ಗ್ರಾಹಕರಿಗೆ

  ತರಕಾರಿ ಹಾಗೂ ಹಾಲನ್ನು ನೇರವಾಗಿ ರೈತನಿಂದ ಪಡೆದು ಗ್ರಾಹಕರ ಮನೆಗೆ ತಾಜಾ ಆಗಿ ತಲುಪಿಸುವ 'ಮೈ ಫ್ರೆಶ್ ಬಾಸ್ಕೆಟ್ ಇನ್‌' ಹೆಸರಿನಲ್ಲಿ ಇ-ವ್ಯಾಪಾರವನ್ನು ವಿಜಯಲಕ್ಷ್ಮಿ ಪ್ರಾರಂಭಿಸಿದ್ದಾರೆ.

  ಮಧ್ಯವರ್ತಿಗಳ ಹಾವಳಿ ತಪ್ಪಿಸಲಿದೆ 'ಮೈ ಫ್ರೆಶ್ ಬಾಸ್ಕೆಟ್ ಇನ್'

  ಮಧ್ಯವರ್ತಿಗಳ ಹಾವಳಿ ತಪ್ಪಿಸಲಿದೆ 'ಮೈ ಫ್ರೆಶ್ ಬಾಸ್ಕೆಟ್ ಇನ್'

  ಮಧ್ಯವರ್ತಿಗಳ ಹಾವಳಿಯಿಂದ ಬೆಳೆದ ಬೆಳೆಗೆ ಸೂಕ್ತ ಫಲ ಸಿಗದೆ ಒದ್ದಾಡುತ್ತಿರುವ ರೈತರಿಗೆ 'ಮೈ ಫ್ರೆಶ್ ಬಾಸ್ಕೆಟ್ ಇನ್' ಪರಿಹಾರವಾಗಲಿದೆ ಎಂದು ವಿಜಯಲಕ್ಷ್ಮಿ ಹೇಳಿದ್ದಾರೆ. ವಿಜಯಲಕ್ಷ್ಮಿ ಅವರ ವ್ಯಾಪಾರ ಸಂಸ್ಥೆಯು ನೇರವಾಗಿ ರೈತರಿಂದ ತರಕಾರಿ ಖರೀದಿಸಿ ಅದನ್ನು ಗ್ರಾಹಕರಿಗೆ ತಲುಪಿಸಲಿದೆ. ಹೀಗಾಗಿ ಗ್ರಾಹಕರು ನೀಡಿದ ಹಣ ನೇರವಾಗಿ ರೈತರಿಗೆ ತಲುಪಲಿದೆ.

  ರೈತ ಪ್ರೇಮಿ ದರ್ಶನ್

  ರೈತ ಪ್ರೇಮಿ ದರ್ಶನ್

  ದರ್ಶನ್ ಸಹ ರೈತರ ಬಗ್ಗೆ ಅಪಾರ ಕಾಳಜಿ ಹೊಂದಿರುವವರು. ಜೊತೆಗೆ ಕೃಷಿ, ಹೈನುಗಾರಿಕೆಯನ್ನು ಈಗಲೂ ಮಾಡುತ್ತಿರುವವರು. ಅವರ ಪತ್ನಿ ಸಹ ಇದೇ ಹಾದಿಯಲ್ಲಿ ಒಂದು ಹೆಜ್ಜೆ ಮುಂದಿಟ್ಟಿರುವುದು ದರ್ಶನ್ ಅಭಿಮಾನಿಗಳು ಹೆಮ್ಮೆ ಪಡುವಂತಹಾ ವಿಷಯ.

  ಸಲಹೆ ನೀಡಿದ್ದಾರೆ ಹಲವರು

  ಸಲಹೆ ನೀಡಿದ್ದಾರೆ ಹಲವರು

  ವಿಜಯಲಕ್ಷ್ಮಿ ಅವರ ಈ ಹೊಸ ಪ್ರಯತ್ನಕ್ಕೆ ನೆಟ್ಟಿಗರು ಸಂತಸ ವ್ಯಕ್ತಪಡಿಸಿದ್ದಾರೆ. ಆಪ್ ಅನ್ನು ಕನ್ನಡದಲ್ಲಿ ಮಾಡಿ, ಡೀಲರ್ ಶಿಪ್ ಮಾಹಿತಿ ನೀಡಿ ಹೀಗೆ ಕೆಲವು ಸಲಹೆಗಳನ್ನು ನೀಡಿದ್ದಾರೆ. ಕೆಲವರು ಹೆಚ್ಚಿನ ಮಾಹಿತಿಯನ್ನು ಕೇಳಿದ್ದಾರೆ.

  English summary
  Actor Darshan's wife Vijayalakshmi started new e-business called 'my fresh basket in'.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X