For Quick Alerts
  ALLOW NOTIFICATIONS  
  For Daily Alerts

  ಕಾರ್ ಬಗ್ಗೆ ಮಾತನಾಡಲ್ಲ ಚಿತ್ರದ ಮಾಹಿತಿಗಾಗಿ ಕಾಯಿರಿ -ಚಾಲೆಂಜಿಂಗ್ ಸ್ಟಾರ್

  By Pavithra
  |
  ತನ್ನ ಹೊಸ ಕಾರ್ ಬಗ್ಗೆ ಮಾತಾಡಲು ನಿರಾಕರಿಸಿದ ದರ್ಶನ್ | Filmibeat Kannada

  ಚಾಲೆಂಜಿಂಗ್ ಸ್ಟಾರ್ ದರ್ಶನ್ ನಿನ್ನೆ ಮೈಸೂರಿನಲ್ಲಿ ವೆನಿಲ್ಲಾ ಸಿನಿಮಾದ ಆಡಿಯೋ ಮತ್ತು ಟ್ರೇಲರ್ ಅನ್ನ ಬಿಡುಗಡೆ ಮಾಡಿಕೊಟ್ಟಿದ್ದಾರೆ. ಬ್ಯೂಟಿಫುಲ್ ಮನಸ್ಸುಗಳು ಸಿನಿಮಾ ಖ್ಯಾತಿಯ ನಿರ್ದೇಶಕ ಜಯತೀರ್ಥ ವೆನಿಲ್ಲಾ ಸಿನಿಮಾವನ್ನ ನಿರ್ದೇಶನ ಮಾಡಿದ್ದಾರೆ.

  ಸಾಮಾನ್ಯವಾಗಿ ಬೆಂಗಳೂರಿನಲ್ಲಿ ಆಡಿಯೋ ಬಿಡುಗಡೆ ಮಾಡುವುದು ಹಿಂದಿನಿಂದಲೂ ಬಂದ ಪ್ರತೀತಿ. ಆದರೆ ಸಿನಿಮಾ ತಂಡ ಆಡಿಯೋ ಬಿಡುಗಡೆಗೆ ಮೈಸೂರನ್ನ ಆಯ್ಕೆ ಮಾಡಿಕೊಂಡಿದೆ ಅದಷ್ಟೇ ಅಲ್ಲದೆ ಚಾಲೆಂಜಿಂಗ್ ಸ್ಟಾರ್ ಅವರನ್ನೇ ಟ್ರೇಲರ್ ಮತ್ತು ಹಾಡುಗಳನ್ನ ಬಿಡುಗಡೆ ಮಾಡಲು ಆಯ್ಕೆ ಮಾಡಿಕೊಂಡಿದೆ. ಇವೆಲ್ಲವುದರ ಹಿಂದೆ ಸಾಕಷ್ಟು ವಿಶೇಷತೆಗಳು ಇವೆ.

  ಡಿ ಬಾಸ್ ಖರೀದಿ ಮಾಡಿರುವ ಕಾರ್ ನ ಸ್ಪೆಷಾಲಿಟಿಸ್ ಇಲ್ಲಿದೆ

  ವೆನ್ನಿಲ್ಲಾ ಆಡಿಯೋ ಮತ್ತು ಟ್ರೇಲರ್ ರಿಲೀಸ್ ಮಾಡಿದ ದರ್ಶನ್ ಕುರುಕ್ಷೇತ್ರ ಸಿನಿಮಾ ಮತ್ತು ಮುಂದಿನ ಚಿತ್ರದ ಬಗ್ಗೆ ಮಾತನಾಡಿದ್ದಾರೆ. ಎಲ್ಲೆಡೆ ಸುದ್ದಿ ಆಗಿದ್ದ ಹೊಸ ಕಾರ್ ಬಗೆಗಿನ ಪ್ರಶ್ನೆಗೆ ಉತ್ತರಿಸಿದ್ದಾರೆ. ಹಾಗಾದ್ರೆ ದರ್ಶನ್ ಏನ್ ಹೇಳಿದ್ರು..ಮುಂದೆ ಓದಿ

  ಹೊಸ ಪ್ರತಿಭೆಗೆ ಡಿ ಬಾಸ್ ಸಾಥ್

  ಹೊಸ ಪ್ರತಿಭೆಗೆ ಡಿ ಬಾಸ್ ಸಾಥ್

  ಜಯತೀರ್ಥ ಕನ್ನಡ ಸಿನಿಮಾರಂಗದಲ್ಲಿ ವಿಭಿನ್ನ ಚಿತ್ರಗಳನ್ನ ನಿರ್ದೇಶನ ಮಾಡಿ ಪ್ರೇಕ್ಷಕರ ಮಧ್ಯೆ ಗುರುತಿಸಿಕೊಂಡಿರುವ ಡೈರೆಕ್ಟರ್.. ಈ ಬಾರಿಯೂ ಹೊಸ ಪ್ರತಿಭೆಗಳನ್ನ ಬಳಸಿಕೊಂಡು ವೆನಿಲ್ಲಾ ಚಿತ್ರವನ್ನ ಪ್ರೇಕ್ಷಕರ ಮುಂದೆ ತರಲು ಮುಂದಾಗಿದ್ದಾರೆ. ಚಿತ್ರದ ಆಡಿಯೋ ಮತ್ತು ಟ್ರೇಲರ್ ಬಿಡುಗಡೆ ಮಾಡುವ ಮೂಲಕ ದರ್ಶನ್ ಹೊಸ ಕಲಾವಿದರಿಗೆ ಸಾಥ್ ಕೊಟ್ಟಿದ್ದಾರೆ.

  ಕುರುಕ್ಷೇತ್ರ ಚಿತ್ರದ ಬಗ್ಗೆ ಮಾತನಾಡಿದ ದರ್ಶನ್

  ಕುರುಕ್ಷೇತ್ರ ಚಿತ್ರದ ಬಗ್ಗೆ ಮಾತನಾಡಿದ ದರ್ಶನ್

  ವೆನಿಲ್ಲಾ ಸಿನಿಮಾದ ಆಡಿಯೋ ಬಿಡುಗಡೆ ಮಾಡಿದ ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ 50 ನೇ ಸಿನಿಮಾ ಕುರುಕ್ಷೇತ್ರದ ಚಿತ್ರೀಕರಣ ಮುಕ್ತಾಯವಾಗಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.

  ಹೊಸ ಚಿತ್ರದ ಮಾಹಿತಿಗಾಗಿ ಕಾಯಬೇಕು

  ಹೊಸ ಚಿತ್ರದ ಮಾಹಿತಿಗಾಗಿ ಕಾಯಬೇಕು

  ಕುರುಕ್ಷೇತ್ರದ ಚಿತ್ರದ ಬಗ್ಗೆ ಮಾತನಾಡಿದ ನಂತರ ಹೊಸ ಸಿನಿಮಾ ಮಹೂರ್ತ ಆಗಿದೆ. ಆದರೆ ಅದರ ಬಗೆಗಿನ ಮಾಹಿತಿಗಾಗಿ ನೀವು ಸ್ವಲ್ಪ ದಿನಗಳು ಕಾಯಲೇಬೇಕು ಎಂದಿದ್ದಾರೆ ಚಾಲೆಂಜಿಂಗ್ ಸ್ಟಾರ್.

  ಕಾರ್ ಬಗ್ಗೆ ಮಾತನಾಡಲು ನಿರಾಕರಣೆ

  ಕಾರ್ ಬಗ್ಗೆ ಮಾತನಾಡಲು ನಿರಾಕರಣೆ

  ಗಾಂಧಿನಗರದ ತುಂಬೆಲ್ಲಾ ಸುದ್ದಿ ಆಗಿರುವ ದರ್ಶನ್ ಹೊಸ ಕಾರ್ ಬಗ್ಗೆ ಮಾತನಾಡಲು ಖುದ್ದು ದರ್ಶನ್ ಅವರೇ ನಿರಾಕರಣೆ ಮಾಡಿದ್ದಾರೆ. ವೈಯಕ್ತಿಕ ವಿಚಾರಗಳು ಹಾಗೆಯೇ ಇರಲಿ ಎನ್ನುವ ಉದ್ದೇಶ ದರ್ಶನ್ ಅವರದ್ದು.

  English summary
  Kannada actor Darshan released the Vennilla kannada movie audio and trailer. At the same time, Darshan said Kurukshetra movie shooting was complete . Challenging star darshan refuses to talk about his new car.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X