Don't Miss!
- News
ಶಿಕ್ಷಕರಾಗಿ ಆಯ್ಕೆಯಾದರೂ ನೇಮಕಾತಿಯಲ್ಲಿ ಕಾನೂನು ತೊಡಕು, ಭವಿಷ್ಯದ ಆತಂಕದಲ್ಲಿ 13,363 ಅಭ್ಯರ್ಥಿಗಳು
- Sports
ಭಾರತ vs ಆಸ್ಟ್ರೇಲಿಯಾ ಟೆಸ್ಟ್ ಸರಣಿಯಲ್ಲಿ ಈ ತಂಡವೇ ಗೆಲ್ಲಲಿದೆ ಎಂದ ಮೈಕಲ್ ವಾನ್
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Lifestyle
ತಿಂದ ಆಹಾರ ಸರಿಯಾಗಿ ಜೀರ್ಣವಾಗ್ತಿಲ್ವಾ ಹಾಗಾದ್ರೆ ಈ ಆಸನಗಳನ್ನ ಮಾಡಿ
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Finance
LIC Jeevan Umang: ದಿನಕ್ಕೆ 150 ರೂ ಹೂಡಿಕೆ ಮಾಡಿ, 10 ಲಕ್ಷ ಪಡೆಯಿರಿ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಹೊಸಪೇಟೆ ಈವೆಂಟ್ ವಿಡಿಯೋ ಶೇರ್ ಮಾಡಿ "ಥ್ಯಾಂಕ್ಯೂ" ಎಂದ ಚಾಲೆಂಜಿಂಗ್ ಸ್ಟಾರ್
ಹೊಸಪೇಟೆ ಘಟನೆಯ ನಂತರ ದರ್ಶನ್ ಮೌನಕ್ಕೆ ಶರಣಾಗಿದ್ದಾರೆ. ಯಾವುದೇ ವಿಚಾರದ ಬಗ್ಗೆ ಮಾತನಾಡುವ ಗೋಜಿಗೆ ಹೋಗಿಲ್ಲ. ಇದೀಗ ಸ್ಪೆಷಲ್ ವಿಡಿಯೋ ಶೇರ್ ಮಾಡಿ ಹೊಸಪೇಟೆಯ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ.
ಭಾನುವಾರ ಸಂಜೆ ಹೊಸಪೇಟೆಯಲ್ಲಿ 'ಕ್ರಾಂತಿ' ಚಿತ್ರದ 2ನೇ ಹಾಡು ಬಿಡುಗಡೆ ಆಯಿತು. ಅಭಿಮಾನಿಗಳು ದೊಡ್ಡಮಟ್ಟದಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ವಾಲ್ಮೀಕಿ ವೃತ್ತದಲ್ಲಿ ಪುನೀತ್ ರಾಜ್‌ಕುಮಾರ್ ಪುತ್ಥಳಿಗೆ ಮಾಲಾಪರ್ಣೆ ಮಾಡಿ ದರ್ಶನ್ ವೇದಿಕೆ ಏರಿದ್ದರು. ರಚಿತಾ ರಾಮ್ ಸೇರಿದಂತೆ ಇಡೀ ಚಿತ್ರತಂಡ ಜೊತೆಗಿತ್ತು. ವೇದಿಕೆಯಲ್ಲಿ ರಚಿತಾ ರಾಮ್ ಮಾತನಾಡುವ ವೇಳೆ ಕಿಡಿಗೇಡಿ ಒಬ್ಬ ದರ್ಶನ್ ಮೇಲೆ ಚಪ್ಪಲಿ ತೂರಿದ ಘಟನೆ ನಡೆದಿತ್ತು.
ದರ್ಶನ್
ಮೇಲೆ
ಚಪ್ಪಲಿ
ಎಸೆತ
ವಿವಾದ
ಕುರಿತು
ಪ್ರತಿಕ್ರಿಯಿಸಿದ
ದುನಿಯಾ
ವಿಜಯ್
ಸಾವಿರಾರು ಜನರ ನಡುವೆ ಇದನ್ನು ಯಾರೊಬ್ಬರು ನಿರೀಕ್ಷೆ ಮಾಡಿರಲಿಲ್ಲ. ನಟ ದರ್ಶನ್ ಕೂಡ "ಇರ್ಲಿ ಚಿನ್ನ ಪರ್ವಾಗಿಲ್ಲ" ಎಂದು ಹೇಳಿ ಸುಮ್ಮನಾಗಿದ್ದರು. ಆದರೆ ಅವರ ಅಭಿಮಾನಿಗಳಿಗೆ ಮಾತ್ರ ಇದು ಭಾರೀ ಬೇಸರ ಹಾಗೂ ನೋವು ತಂದಿದೆ.

ಧನ್ಯವಾದ ತಿಳಿಸಿದ ದರ್ಶನ್
ಭಾನುವಾರ ಹೊಸಪೇಟೆಯಲ್ಲಿ ನಡೆದ 'ಕ್ರಾಂತಿ' ಸಾಂಗ್ ರಿಲೀಸ್ ಕಾರ್ಯಕ್ರಮದ ಗ್ಲಿಂಪ್ಸ್ ವಿಡಿಯೋವನ್ನು ದರ್ಶನ್ ಶೇರ್ ಮಾಡಿದ್ದಾರೆ. ಇಡೀ ದಿನ ಹೊಸಪೇಟೆಯಲ್ಲಿ ಅಭಿಮಾನಿಗಳ ಸಂಭ್ರಮ ಹೇಗಿತ್ತು? 'ಕ್ರಾಂತಿ' ತಂಡಕ್ಕೆ ಸಿಕ್ಕ ಸ್ವಾಗತ, ಸಾವಿರಾರು ಸಂಖ್ಯೆಯ ಅಭಿಮಾನಿಗಳ ಹರ್ಷೋದ್ಘಾರ, ಡಿ ಬಾಸ್ ಡಿ ಬಾಸ್ ಎನ್ನುವುದನ್ನು ನೋಡಬಹುದು. ಅಭಿಮಾನಿಗಳ ಪ್ರೀತಿಗೆ ಧನ್ಯವಾದ ತಿಳಿಸಿದ್ದಾರೆ.

ಕಿಡಿಗೇಡಿಯಿಂದ ಹೀನ ಕೃತ್ಯ
ಪುನೀತ್ ರಾಜ್‌ಕುಮಾರ್ ಫ್ಯಾನ್ಸ್ ಹೊಸಪೇಟೆ ನಮ್ಮ ಅಡ್ಡ ಎಂದು ಹೇಳುತ್ತಾ ಬರ್ತಿದ್ದಾರೆ. ಅಲ್ಲಿ 'ಕ್ರಾಂತಿ' ಸಾಂಗ್ ರಿಲೀಸ್ ಅಂದಾಗಲೇ ಸೋಶಿಯಲ್ ಮೀಡಿಯಾದಲ್ಲಿ ಇಬ್ಬರು ಸ್ಟಾರ್ ನಟರ ಅಭಿಮಾನಿಗಳ ನಡುವೆ ಕಚ್ಚಾಟ ಶುರುವಾಗಿತ್ತು. ಅದು ಭಾನುವಾರ 'ಕ್ರಾಂತಿ' ಸಿನಿಮಾ ಪೋಸ್ಟರ್‌ಗಳನ್ನು ಹರಿಯುವ ಹಂತಕ್ಕೆ ಹೋಗಿತ್ತು. ಆದರೆ ಸಂಜೆ ನಟ ದರ್ಶನ್ ವೇದಿಕೆ ಮೇಲೆ ಇದ್ದಾಗ ಚಪ್ಪಲಿ ಎಸೆದು ಕಿಡಿಗೇಡಿಗಳು ಅವಮಾನಿಸಿದ ಕೃತ್ಯ ಖಂಡನೀಯ.

ದರ್ಶನ್‌ಗೆ ಚಿತ್ರರಂಗ, ಫ್ಯಾನ್ಸ್ ಬೆಂಬಲ
ಅಭಿಮಾನಿಗಳ ಗುಂಪಿನಿಂದ ಕಿಡಿಗೇಡಿ ಒಬ್ಬ ದರ್ಶನ್ ಮೇಲೆ ಚಪ್ಪಲಿ ಎಸೆದ ಘಟನೆಗೆ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ. ಅಭಿಮಾನಿಗಳು ಹಾಗೂ ಸ್ಯಾಂಡಲ್‌ವುಡ್ ಕಲಾವಿದರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಬೆಂಬಲಿಸಿ ಕಾಮೆಂಟ್ ಮಾಡುತ್ತಿದ್ದಾರೆ. ನಟ ಶಿವರಾಜ್‌ಕುಮಾರ್ ಕೂಡ ಇದನ್ನು ಖಂಡಿಸಿದ್ದಾರೆ. ಕಿಚ್ಚ ಸುದೀಪ್ ಕೂಡ ಇದು ಖಂಡಿತ ಅಭಿಮಾನ ಅಲ್ಲ, ಇದನ್ನು ಯಾರು ಒಪ್ಪುವುದಿಲ್ಲ ಎಂದಿದ್ದಾರೆ.

ಜನವರಿ 26ಕ್ಕೆ 'ಕ್ರಾಂತಿ'
ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ 'ಕ್ರಾಂತಿ' ಸಿನಿಮಾ ಜನವರಿ 26ಕ್ಕೆ ತೆರಗಪ್ಪಳಿಸಲಿದೆ. ಕನ್ನಡ ಮಾತ್ರವಲ್ಲದೇ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ 5 ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ. ವಿ. ಹರಿಕೃಷ್ಣ ನಿರ್ದೇಶನದ ಚಿತ್ರದಕ್ಕೆ ಶೈಲಜಾ ನಾಗ್ ಹಾಗೂ ಬಿ. ಸುರೇಶ ದಂಪತಿ ಬಂಡವಾಳ ಹೂಡಿದ್ದಾರೆ.