For Quick Alerts
  ALLOW NOTIFICATIONS  
  For Daily Alerts

  ದರ್ಶನ್ ಕಾರು ಅಪಘಾತ: 'ಡಿ-ಬಾಸ್'ಗೆ ಆಘಾತ ನೀಡಿದ ವೈದ್ಯರ ಸಲಹೆ

  |
  ದರ್ಶನ್ ಅಭಿಮಾನಿಗಳಿಗೆ ಬ್ಯಾಡ್ ನ್ಯೂಸ್..! | Filmibeat Kannada

  ಚಾಲೆಂಜಿಗ್ ಸ್ಟಾರ್ ದರ್ಶನ್ ಅವರ ಕಾರು ಅಪಘಾತ ಹಿನ್ನಲೆ ಸದ್ಯ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದಾಸನ ಬಲಗೈಗೆ ಪೆಟ್ಟಾಗಿದ್ದು, ಶಸ್ತ್ರ ಚಿಕಿತ್ಸೆ ಕೂಡ ಮಾಡಲಾಗಿದೆ. ಬಲಗೈಗೆ ಪ್ಲೇಟ್ ಹಾಕಿ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ ಎಂದು ವೈದ್ಯರು ಈಗಾಗಲೇ ತಿಳಿಸಿದ್ದಾರೆ.

  ಇಂದು ಅಥವಾ ನಾಳೆ ಡಿ ಬಾಸ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ಸಾಧ್ಯತೆ ಇದೆ. ನಂತರ ಎರಡ್ಮೂರು ವಾರ ವಿಶ್ರಾಂತಿ ಪಡೆಯಬಹುದು ಎಂದು ಹೇಳಲಾಗ್ತಿದೆ. ಹಾಗಾಗಿ, ದರ್ಶನ್ ಮತ್ತೆ ಶೂಟಿಂಗ್ ನಲ್ಲಿ ಭಾಗವಹಿಸ್ತಾರೆ ಎಂಬ ಖುಷಿ ಅಭಿಮಾನಿ ಪಾಳಯದಲ್ಲಿ ಮೂಡಿತ್ತು.

  ಅಪಘಾತ ಪ್ರಕರಣಕ್ಕೆ ಕಷ್ಟತಂದಿಟ್ಟ ದರ್ಶನ್ ಕಾರ್ ಡ್ರೈವರ್ ಲಕ್ಷ್ಮಣ್ ಹೇಳಿಕೆ ಅಪಘಾತ ಪ್ರಕರಣಕ್ಕೆ ಕಷ್ಟತಂದಿಟ್ಟ ದರ್ಶನ್ ಕಾರ್ ಡ್ರೈವರ್ ಲಕ್ಷ್ಮಣ್ ಹೇಳಿಕೆ

  ದಾಸ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗ್ತಾರೆ ಎಂಬ ಬೆನ್ನಲ್ಲೆ ಅಭಿಮಾನಿಗಳಿಗೆ ಮತ್ತೊಂದು ಆಘಾತದ ಸುದ್ದಿ ನೀಡಿದ್ದಾರೆ ವೈದ್ಯರು. ಹೌದು, ದರ್ಶನ್ ಆರೋಗ್ಯದ ದೃಷ್ಟಿಯಿಂದ ವೈದ್ಯರು ಕಟ್ಟುನಿಟ್ಟಾದ ಸಲಹೆಗಳನ್ನ ನೀಡಿದ್ದಾರೆ. ಈ ಸಲಹೆಗಳನ್ನ ಚಾಚೂತಪ್ಪದೆ ಪಾಲಿಸಲೇಬೇಕು ಎಂದು ಸೂಚಿಸಿದ್ದಾರಂತೆ. ಇದರಿಂದ ದಾಸನ ಸಿನಿಮಾಗಳ ಮೇಲೆ ಭಾರಿ ಪರಿಣಾಮ ಬೀರುವ ಸಾಧ್ಯತೆ ಇದೆ. ಅಷ್ಟಕ್ಕೂ, ದರ್ಶನ್ ಗೆ ವೈದ್ಯರು ನೀಡಿದ ಸಲಹೆ ಏನು.? ಮುಂದೆ ಓದಿ....

  ಭಾರ ಎತ್ತುವಂತಿಲ್ಲ

  ಭಾರ ಎತ್ತುವಂತಿಲ್ಲ

  ದರ್ಶನ್ ಅವರ ಬಲಗೈ ಶಸ್ತ್ರ ಚಿಕಿತ್ಸೆ ಮಾಡಿರುವುದರಿಂದ ಮುಂದಿನ ಕೆಲವು ದಿನಗಳವರೆಗೂ ಭಾರ ಎತ್ತುವಂತಿಲ್ಲ ಎಂದು ವೈದ್ಯರು ಸಲಹೆ ನೀಡಿದ್ದಾರೆ. ಅದರಲ್ಲೂ ''ಬಲಗೈಗೆ ಹೆಚ್ಚು ಕೆಲಸ ಕೊಡುವಂತಿಲ್ಲ'' ಎಂದು ಸೂಚಿಸಿದ್ದಾರಂತೆ. ಹೀಗಾಗಿ, ದರ್ಶನ್ ಅವರು ಇನ್ಮುಂದೆ ತುಂಬಾ ಕಟ್ಟುನಿಟ್ಟಾಗಿ ಇರಬೇಕಾಗಿದೆ. ಆಕ್ಷನ್ ದೃಶ್ಯಗಳಲ್ಲಿ ಅಭಿನಯಿಸುವುದು ಕಷ್ಟವಾಗಬಹುದು.

  ದರ್ಶನ್ ಅಪಘಾತದ ಕಾರಿನಲ್ಲಿ ಇದ್ದದ್ದು 4 ಜನ ಅಲ್ಲ, 6 ಜನ.! ಯಾರವರು.?ದರ್ಶನ್ ಅಪಘಾತದ ಕಾರಿನಲ್ಲಿ ಇದ್ದದ್ದು 4 ಜನ ಅಲ್ಲ, 6 ಜನ.! ಯಾರವರು.?

  ಇನ್ನೊಂದು ವರ್ಷ ಜಿಮ್ ಮಾಡುವಂತಿಲ್ಲ

  ಇನ್ನೊಂದು ವರ್ಷ ಜಿಮ್ ಮಾಡುವಂತಿಲ್ಲ

  ಚಾಲೆಂಜಿಂಗ್ ಸ್ಟಾರ್ ತಮ್ಮ ದೇಹವನ್ನ ತುಂಬಾ ಕಟ್ಟುಮಸ್ತಾಗಿ ನಿಯಂತ್ರಿಸಿಕೊಂಡಿದ್ದಾರೆ. ಅದಕ್ಕೆ ಕಾರಣ ಜಿಮ್. ಈಗ ಬಲಗೈಗೆ ಗಾಯವಾಗಿರುವುದರಿಂದ ಜಿಮ್ ಮಾಡೋವುದಕ್ಕೆ ಬ್ರೇಕ್ ಹಾಕಬೇಕಿದೆ. ಬಹುತೇಕ ಒಂದು ವರ್ಷ ಜಿಮ್ ನಿಂದ ದೂರವಿರಲು ವೈದ್ಯರು ಸಲಹೆ ನೀಡಿದ್ದಾರೆ ಎನ್ನಲಾಗಿದೆ. ಹಾಗಿದ್ರೆ, ಒಂದು ವರ್ಷ ಜಿಮ್ ಮಾಡದೇ ದರ್ಶನ್ ಇರಲು ಸಾಧ್ಯವೇ.?

  ರಾಯ್ ಆಂಟೋನಿ ಡ್ರೈವರ್ ಅಲ್ಲ: ಏನೋ ಆಗಬೇಕಿತ್ತು, ಏನೋ ಆಯ್ತು ಎಂದ ಸಂದೇಶ್ರಾಯ್ ಆಂಟೋನಿ ಡ್ರೈವರ್ ಅಲ್ಲ: ಏನೋ ಆಗಬೇಕಿತ್ತು, ಏನೋ ಆಯ್ತು ಎಂದ ಸಂದೇಶ್

  2 ವರ್ಷ ಕೈಯಲ್ಲಿರುವ ಪ್ಲೇಟ್ ತೆಗೆಯುವಂತಿಲ್ಲ

  2 ವರ್ಷ ಕೈಯಲ್ಲಿರುವ ಪ್ಲೇಟ್ ತೆಗೆಯುವಂತಿಲ್ಲ

  ಶಸ್ತ್ರ ಚಿಕಿತ್ಸೆಗೆ ಒಳಗಾಗಿರುವ ದರ್ಶನ್ ಅವರ ಬಲಗೈನಲ್ಲಿ ಪ್ಲೇಟ್ ಹಾಕಲಾಗಿದೆಯಂತೆ. ಹೀಗಾಗಿ, ಎರಡು ವರ್ಷದ ನಂತರ ಈ ಪ್ಲೇಟ್ ತೆಗೆಯಬಹುದು ಎಂದಿದ್ದಾರಂತೆ. ಹಾಗಾಗಿ, ಇಷ್ಟೊಂದು ಕಂಡಿಷನ್ ಮತ್ತು ಸಲಹೆಗಳು ಅಗತ್ಯವಾಗಿದೆಯಂತೆ. ಇನ್ನು ನಾಲ್ಕು ವಾರದ ನಂತರ ಕೈಗೆ ಕಟ್ಟಿರುವ ಪಟ್ಟಿ ತೆಗೆಯಬಹುದಂತೆ.

  ಆಸ್ಪತ್ರೆಯಲ್ಲಿ ದರ್ಶನ್ ಫೋಟೋ ತೆಗೆದ ಅಭಿಮಾನಿಯ ಮೊಬೈಲ್ ಪುಡಿ ಪುಡಿ.!ಆಸ್ಪತ್ರೆಯಲ್ಲಿ ದರ್ಶನ್ ಫೋಟೋ ತೆಗೆದ ಅಭಿಮಾನಿಯ ಮೊಬೈಲ್ ಪುಡಿ ಪುಡಿ.!

  8 ವಾರ ಶೂಟಿಂಗ್ ಮಾಡುವಂತಿಲ್ಲ

  8 ವಾರ ಶೂಟಿಂಗ್ ಮಾಡುವಂತಿಲ್ಲ

  ಸದ್ಯಕ್ಕೆ ಯಾವಾಗ ಶೂಟಿಂಗ್ ಗೆ ವಾಪಸ್ ಆಗ್ತಾರೆ ಎಂಬ ಪ್ರಶ್ನೆ ನಿರ್ಮಾಪಕರನ್ನ ಕಾಡ್ತಿದೆ. ಸದ್ಯದ ಮಾಹಿತಿ ಪ್ರಕಾರ ಏಂಟು ವಾರಗಳ ಕಾಲ ಶೂಟಿಂಗ್ ನಲ್ಲಿ ಭಾಗಿಯಾಗಬಾರದು ಎಂದು ವೈದ್ಯರು ದರ್ಶನ್ ಗೆ ಸೂಚಿಸಿದ್ದಾರೆ ಎನ್ನಲಾಗಿದೆ. ಏಂಟು ವಾರ ಅಂದ್ರೆ ಎರಡು ತಿಂಗಳು. ಎರಡು ತಿಂಗಳು ಡಿ ಬಾಸ್ ಸಿನಿಮಾಗಳಿಗೆ ಬ್ರೇಕ್ ಬೀಳಲಿದ್ಯಾ.?

  ಅಪಘಾತ ಪ್ರಕರಣಕ್ಕೆ ತಿರುವು: ದರ್ಶನ್ ಜೊತೆಗಿದ್ದ ರಾಯ್ ಅಂಟೋನಿಗೆ ಈಗ ಕಂಟಕಅಪಘಾತ ಪ್ರಕರಣಕ್ಕೆ ತಿರುವು: ದರ್ಶನ್ ಜೊತೆಗಿದ್ದ ರಾಯ್ ಅಂಟೋನಿಗೆ ಈಗ ಕಂಟಕ

  ದರ್ಶನ್ ಗೆ ವಿಲ್ ಪವರ್ ಇದೆ

  ದರ್ಶನ್ ಗೆ ವಿಲ್ ಪವರ್ ಇದೆ

  ದರ್ಶನ್ ಅವರಿಗೆ ಆಗಿರುವ ಗಾಯವನ್ನ ಪರಿಗಣಿಸಿ ವೈದ್ಯರು ಇಷ್ಟೊಂದು ಸಲಹೆ ನೀಡಿದ್ದಾರೆ. ಹಾಗಾಗಿ, ಡಿ ಬಾಸ್ ಮೊದಲಿನಂತೆ ಆಗಬೇಕು ಅಂದ್ರೆ ಈ ಸಲಹೆಗಳನ್ನ ಕಟ್ಟುನಿಟ್ಟಾಗಿ ಪಾಲಿಸಬೇಕಾಗಿದೆ. ಆದ್ರೆ, ದರ್ಶನ್ ನಿಜಕ್ಕೂ ಇಷ್ಟು ದಿನ ಸಮಯ ತೆಗೆದುಕೊಳ್ಳುವುದಿಲ್ಲ. ಆದಷ್ಟೇ ಬೇಗ ರೆಡಿಯಾಗ್ತಾರೆ. ಅವರಿಗೆ ವಿಲ್ ಪವರ್ ಹೆಚ್ಚಿದೆ. ಇನ್ನೊಂದು ತಿಂಗಳಲ್ಲಿ ಫಿಟ್ ಆಗ್ತಾರೆ ಎಂಬ ವಿಶ್ವಾಸವನ್ನ ನಿರ್ದೇಶಕ ಎಂ ಡಿ ಶ್ರೀಧರ್ ವ್ಯಕ್ತಪಡಿಸಿದ್ದಾರೆ.

  English summary
  Challenging star Darshan should not to do workout for a year says columbia asia hospital doctors.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X