»   » ಆಪ್ತಮಿತ್ರನ ಸಿನಿಮಾ ನೋಡಿ ವಿಡಿಯೋ ಕಳುಹಿಸಿದ 'ಡಿ-ಬಾಸ್'.! ಏನಂದ್ರು.?

ಆಪ್ತಮಿತ್ರನ ಸಿನಿಮಾ ನೋಡಿ ವಿಡಿಯೋ ಕಳುಹಿಸಿದ 'ಡಿ-ಬಾಸ್'.! ಏನಂದ್ರು.?

Posted By:
Subscribe to Filmibeat Kannada

'ಮರಿ ಟೈಗರ್' ವಿನೋದ್ ಪ್ರಭಾಕರ್ ಅಭಿನಯದ 'ಕ್ರ್ಯಾಕ್' ಚಿತ್ರಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬೆಂಬಲವಾಗಿ ನಿಂತಿದ್ದಾರೆ. ಹೈದರಾಬಾದ್ ನಲ್ಲಿರುವ ದರ್ಶನ್, 'ಕ್ರ್ಯಾಕ್' ಸಿನಿಮಾದ ಬಗ್ಗೆ ರಿಪೋರ್ಟ್ ಪಡೆದುಕೊಂಡು, ವಿನೋದ್ ಗೆ ಸಲಹೆ ಕೂಡ ನೀಡಿದ್ದಾರೆ ಎಂದು ಈ ಹಿಂದೆ ಫಿಲ್ಮಿಬೀಟ್ ಕನ್ನಡದಲ್ಲಿ ವರದಿ ಪ್ರಕಟವಾಗಿತ್ತು.

ಅದರಂತೆ ಈಗ ದರ್ಶನ್ ಅವರು, 'ಕ್ರ್ಯಾಕ್' ಸಿನಿಮಾ ನೋಡಿ ಚಿತ್ರದ ಬಗ್ಗೆ ಮತ್ತು ವಿನೋದ್ ಪ್ರಭಾಕರ್ ಅವರ ನಟನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 'ಕ್ರ್ಯಾಕ್' ಚಿತ್ರ ನೋಡಿದ ನಂತರ ವಿಡಿಯೋ ಬೈಟ್ ಕಳುಹಿಸಿರುವ ದರ್ಶನ್, ಈ ಸಿನಿಮಾವನ್ನ ಎಲ್ಲರೂ ನೋಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಹಾಗಿದ್ರೆ, 'ಕ್ರ್ಯಾಕ್' ಚಿತ್ರದಲ್ಲಿ ದರ್ಶನ್ ಗೆ ಇಷ್ಟವಾಗಿದ್ದೇನು? ವಿನೋದ್ ಪ್ರಭಾಕರ್ ಅಭಿನಯ ಹೇಗಿದೆ ಎಂದು ಮುಂದೆ ಓದಿ.....

'ಮರಿ ಟೈಗರ್' ಚಿತ್ರದ ಬಗ್ಗೆ ದರ್ಶನ್ ಮಾತು

''ತುಂಬ ದಿನಗಳು ಆದ್ಮೇಲೆ ನಮ್ಮ ಟೈಗರ್ ಒಂದೊಳ್ಳೆ ಸಿನಿಮಾ ಮಾಡಿದ್ದಾರೆ. ನಾನು ಅವರ ಸಿನಿಮಾಗಳನ್ನ ನೋಡಿದ್ದೇನೆ. ಅವರು ಯಾವುದೇ ಸಿನಿಮಾ ಮಾಡಿದ್ರೂ ನನಗೂ ತೋರಿಸ್ತಾರೆ. ನಾನು ಯಾವಾಗಲೂ ಹೇಳ್ತಿದ್ದೆ, ಅದು ಚೆನ್ನಾಗಿದೆ, ಇದು ಚೆನ್ನಾಗಿದೆ ಅಂತ'' - ದರ್ಶನ್, ನಟ

ಗೆಳೆಯ ವಿನೋದ್ ಪ್ರಭಾಕರ್ ಬೆಂಬಲಕ್ಕೆ ನಿಂತ 'ದಾಸ' ದರ್ಶನ್

ಪೊಲೀಸ್ ಗೆಟಪ್ ನಲ್ಲಿ 'ಟೈಗರ್' ಸೂಪರ್

''ಕ್ರ್ಯಾಕ್' ಸಿನಿಮಾದಲ್ಲಿ ಪೋಲಿಸ್ ಪಾತ್ರ ಮಾಡಿದ್ದಾರೆ. ಈಗಾಗಲೇ ನಾನು ಸೇರಿದಂತೆ ಎಲ್ಲರೂ ಪೊಲೀಸ್ ಪಾತ್ರ ಮಾಡಿದ್ದೀವಿ. ಆದ್ರೆ, ಒಂದು ಕಾಮಿಡಿ ಟಚ್ ಜೊತೆಯಲ್ಲಿ ಟೈಗರ್ ಮಾಡಿರುವ ಪೊಲೀಸ್ ಪಾತ್ರ ಹೊಸದಾಗಿದೆ. ಅವರ ಡೈಲಾಗ್, ಅವರ ಹೇರ್ ಸ್ಟೈಲ್, ಕಂಪ್ಲೀಟ್ ಹೊಸದಾಗಿದೆ'' - ದರ್ಶನ್, ನಟ

ಇದು ಕಂಪ್ಲೀಟ್ ಟೀಮ್ ವರ್ಕ್

''ಸಿನಿಮಾದಲ್ಲಿ ಪ್ರತಿಯೊಂದು ಅಂಶ ಕೂಡ ಚೆನ್ನಾಗಿದೆ. ಅದನ್ನ ಅಷ್ಟೇ ಉತ್ತಮವಾಗಿ ಪ್ರೆಸೆಂಟ್ ಮಾಡಿದ್ದಾರೆ. ನಿರ್ದೇಶಕರು ಚೆನ್ನಾಗಿ ತೆರೆ ಮೇಲೆ ತಂದಿದ್ದಾರೆ. ಒಂದು ಟೀಮ್ ವರ್ಕ್ ಮಾಡಿ ಈ ಸಿನಿಮಾ ಮಾಡಿದ್ದಾರೆ ಎನ್ನುವುದು ಚಿತ್ರದಲ್ಲಿ ಕಾಣುತ್ತೆ'' - ದರ್ಶನ್, ನಟ

ಕಂಪ್ಲೀಟ್ ಮನರಂಜನೆ ಇದೆ

''ಚಿತ್ರದ ಕ್ಲೈಮ್ಯಾಕ್ಸ್ ಅದ್ಭುತವಾಗಿದೆ. ಕುತೂಹಲವನ್ನ ಕಾಪಾಡಿಕೊಂಡಿದೆ. ಈ ಸಿನಿಮಾ ಯಾಕಪ್ಪಾ ನೋಡ್ತಾ ಇದ್ದೀವಿ ಎಂಬ ಭಾವನೆ ಬರಲ್ಲ. ಎಲ್ಲೂ ಬೋರ್ ಹೊಡೆಸಲ್ಲ'' - ದರ್ಶನ್, ನಟ

ವಿನೋದ್ ಫೈಟ್ ಚೆನ್ನಾಗಿದೆ

''ವಿನೋದ್ ಅವರ ಫೈಟ್ ಬಗ್ಗೆ ಹೇಳೋದೆ ಬೇಡ. ಫೈಟ್ ನಲ್ಲಿ ಅವರು ಮಾಸ್ಟರ್. ಈ ಚಿತ್ರದಲ್ಲಿ ಒಂದು ರಿಯಾಲಿಟಿ ಇಟ್ಕೊಂಡು, ಅವಶ್ಯಕತೆ ಇದ್ದ ಕಡೆ ರಗಡ್ ಆಗಿ ಅಚ್ಚುಕಟ್ಟಾಗಿ ಅಭಿನಯಿಸಿದ್ದಾರೆ'' - ದರ್ಶನ್, ನಟ

ಮತ್ತೊಬ್ಬ ಪ್ರಭಾಕರ್ ಆಗ್ತಾರೆ

''ತಂದೆಯ ರೂಪ ಮಕ್ಕಳಿಗೆ ಬರುವುದು ಸಹಜ. ನನ್ನ ವಾಯ್ಸ್ ನಮ್ಮ ತಂದೆಯವರ ತರ ಇದೆ, ನಮ್ಮ ತಮ್ಮ ನೋಡೋದಕ್ಕೆ ತಂದೆ ತರ ಇದ್ದಾನೆ ಅಂತಾರೆ. ಅದೇ ತರ ವಿನೋದ್ ಕಡೆ ಪ್ರಭಾಕರ್ ಅವರ ತದ್ರೂಪ ಆಗಿದ್ದಾರೆ. ಎಲ್ಲ ಕರ್ನಾಟಕ ಜನತೆಗೆ ಹೇಳುವುದು ಇಷ್ಟೇ. ಈ ಸಿನಿಮಾ ಪ್ರೊತ್ಸಾಹ ಕೊಡಿ. ಬೆಂಬಲ ಕೊಡಿ. ಈ ರೀತಿಯ ಒಳ್ಳೆ ಸಿನಿಮಾಗಳಿಗೆ ಗೆಲುವು ಸಿಗಬೇಕು. ಪ್ರಭಾಕರ್ ಅವರು ಯಾವ ಹಂತದಲ್ಲಿ ಇದ್ರೋ, ಅದೇ ರೀತಿ ವಿನೋದ್ ಕೂಡ ಬೆಳಿತಾರೆ. ಅದಕ್ಕೆ ನಿಮ್ಮ ಬೆಂಬಲ ಬೇಕು'' - ದರ್ಶನ್, ನಟ

'ಕ್ರ್ಯಾಕ್' ಚಿತ್ರದ ದರ್ಶನ್ ಬಗ್ಗೆ ಮಾತನಾಡಿರುವ ವಿಡಿಯೋ ಇಲ್ಲಿದೆ ನೋಡಿ

English summary
Challenging Star Darshan speaks about Vinod Prabhakar starrer 'Crack'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X