»   » 'ಕಾಲೇಜ್ ಕುಮಾರ' ನೋಡಿ ಡಿ ಬಾಸ್ ದರ್ಶನ್ ಕೊಟ್ಟ ವಿಮರ್ಶೆ!

'ಕಾಲೇಜ್ ಕುಮಾರ' ನೋಡಿ ಡಿ ಬಾಸ್ ದರ್ಶನ್ ಕೊಟ್ಟ ವಿಮರ್ಶೆ!

Posted By:
Subscribe to Filmibeat Kannada

ಒಂದು ಒಳ್ಳೆಯ ಸಿನಿಮಾ ಬಂದರೆ ಗೆದ್ದೆ ಗೆಲ್ಲುತ್ತದೆ ಎನ್ನುವುದಕ್ಕೆ ತಾಜಾ ಉದಾಹರಣೆ ಅಂದರೆ 'ಕಾಲೇಜ್ ಕುಮಾರ್' ಚಿತ್ರ. ಒಳ್ಳೆಯ ಕಥೆಯೊಂದಿಗೆ ಚಿತ್ರಮಂದಿರಕ್ಕೆ ಬಂದಿದ್ದ ಈ ಚಿತ್ರವನ್ನು ಜನ ಈಗಾಗಲೇ ಇಷ್ಟಪಟ್ಟಿದರು.

ಇದೀಗ ನಟ ದರ್ಶನ್ ಕೂಡ 'ಕಾಲೇಜ್ ಕುಮಾರ' ಸಿನಿಮಾ ನೋಡಿ ಅದರ ಗುಣಗಾನ ಮಾಡಿದ್ದಾರೆ. ರವಿಶಂಕರ್ ಅಭಿನಯವನ್ನು ಮೆಚ್ಚಿರುವ ದರ್ಶನ್ ಚಿತ್ರಕ್ಕೆ ಶುಭ ಕೋರಿದ್ದಾರೆ. ಪುನೀತ್ ನಂತರ ಈಗ ದರ್ಶನ್ ಕೂಡ ಚಿತ್ರಕ್ಕೆ ಫಿದಾ ಆಗಿದ್ದಾರೆ. ಮುಂದೆ ಓದಿ...

ದರ್ಶನ್ ಗುಣಗಾನ

''ನಾನು ಈಗ ಹೇಳುತ್ತಿರುವುದು ಒಳ್ಳೆಯ ಕಲಾವಿದರ ಬಗ್ಗೆ. ಒಬ್ಬ ಕಲಾವಿದ ಅನ್ನೊದಕ್ಕಿಂತ ಹೆಚ್ಚು ಆತ ಒಳ್ಳೆಯ ಸ್ನೇಹಿತ. ಆತನ ಸಿನಿಮಾಗಳನ್ನು ನೋಡುತ್ತಾ ಬಂದರೆ.. ಒಬ್ಬ ವಿಲನ್, ಕಾಮಿಡಿಯನ್, ಪೋಷಕ ನಟ ಹೀಗೆ ಅನೇಕ ಪಾತ್ರ ಮಾಡಿದ್ದಾರೆ. ಆದರೆ ಈಗ ನಾನು ನೋಡಿರುವ ಆತನ ಒಂದು ಒಳ್ಳೆಯ ಸಿನಿಮಾ 'ಕಾಲೇಜ್ ಕುಮಾರ'' ಎಂದು ದರ್ಶನ್ ಚಿತ್ರದ ಬಗ್ಗೆ ಹೇಳಿದ್ದಾರೆ.

ತುಂಬ ಚೆನ್ನಾಗಿ ಅಭಿನಯಿಸಿದ್ದಾರೆ

''ನಾನು ಹೇಳುತ್ತಿರುವುದು ರವಿಶಂಕರ್ ಬಗ್ಗೆ. ಈ ಚಿತ್ರದಲ್ಲಿ ಅವರು ತುಂಬ ಚೆನ್ನಾಗಿ ಅಭಿನಯಿಸಿದ್ದಾರೆ. ಒಂದೊಂದು ಸಿನಿಮಾದಲ್ಲಿಯೂ ಅವರ ಗೆಟಪ್ ಮತ್ತು ಬಾಡಿ ಲಾಂಗ್ವೇಜ್ ಎಲ್ಲದನ್ನು ಬದಲಾಯಿಸಿಕೊಂಡು ತುಂಬ ಚೆನ್ನಾಗಿ ಮಾಡುತ್ತಿದ್ದಾರೆ.'' - ದರ್ಶನ್, ನಟ

ಬೆಂಬಲ ನೀಡಿ

''ನಾನು ರವಿಗೆ ಆಲ್ ದಿ ಬೆಸ್ಟ್ ಹೇಳುತ್ತೇನೆ. ಜೊತೆಗೆ ಶೃತಿ ಮೇಡಂಗೆ ಮತ್ತು ಇಡೀ 'ಕಾಲೇಜ್ ಕುಮಾರ್' ತಂಡಕ್ಕೆ ಶುಭವಾಗಲಿ. ನೀವು ಸಿನಿಮಾ ನೋಡಿ ಅವರಿಗೆ ಬೆಂಬಲ ಮತ್ತು ಆಶಿರ್ವಾದ ಮಾಡಿ ಅಂತ ಹೇಳಿಕೊಳ್ಳುತ್ತೇನೆ.'' - ದರ್ಶನ್, ನಟ

ಪುನೀತ್ ಮೆಚ್ಚಿದ ಕಥೆ

ಈ ಹಿಂದೆ ನಟ ಪುನೀತ್ ಕೂಡ 'ಕಾಲೇಜ್ ಕುಮಾರ್'ಗೆ ಸಾಥ್ ನೀಡಿದ್ದರು. ಸಿನಿಮಾದ ಕಥೆ ಮತ್ತು ಎಲ್ಲರ ಅಭಿನಯವನ್ನು ಪುನೀತ್ ಹೊಗಳಿದ್ದರು.

ವಿಮರ್ಶೆ : 'ಕಾಲೇಜ್ ಕುಮಾರ'ನಿಗೆ ಪ್ರೇಕ್ಷಕ ಕ್ಲೀನ್ ಬೌಲ್ಡ್

ಅರ್ಜುನ್ ಸರ್ಜಾ ವಿಶ್

ನಟ ಅರ್ಜುನ್ ಸರ್ಜಾ ಕೂಡ 'ಕಾಲೇಜ್ ಕುಮಾರ್' ಮೆಚ್ಚಿಕೊಂಡಿದ್ದರು. ರವಿಶಂಕರ್ ಪಾತ್ರ ಇಷ್ಟ ಪಟ್ಟಿದ್ದ ಅರ್ಜುನ್ ಸರ್ಜಾ ಇಡೀ ತಂಡಕ್ಕೆ ವಿಶ್ ಮಾಡಿದ್ದರು.

'ಕಾಲೇಜ್ ಕುಮಾರ'ನಿಗೆ ವಿಮರ್ಶಕರು ಕೊಟ್ಟ ಮಾರ್ಕ್ಸ್ ಎಷ್ಟು?

'ಭರ್ಜರಿ' ಆಗಿದೆ ಎಂದ ಚೇತನ್

'ಬಹದ್ದೂರ್' ಮತ್ತು 'ಭರ್ಜರಿ' ಖ್ಯಾತಿಯ ನಿರ್ದೇಶನ 'ಕಾಲೇಜ್ ಕುಮಾರ್' ಚಿತ್ರ ನೋಡಿ ''ಎಲ್ಲ ಕುಟುಂಬಗಳು ಸಿನಿಮಾವನ್ನು ಇಷ್ಟ ಪಟ್ಟಿದ್ದಾರೆ. ಇನ್ನು ಯಾರು ನೋಡಿಲ್ಲ ಅಂದ್ರೆ ಹೋಗಿ ನೋಡಿ. ಫ್ಯಾಮಿಲಿ ಜೊತೆ ನೋಡಿ ತುಂಬ ಒಳ್ಳೆಯ ಸಿನಿಮಾ.'' ಎಂದಿದ್ದಾರೆ.

'ಕಾಲೇಜ್ ಕುಮಾರ'ನನ್ನ ಮೆಚ್ಚಿದ 'ರಾಜಕುಮಾರ' ಪುನೀತ್

ಸಂತಸದಲ್ಲಿ ರವಿಶಂಕರ್

''ಜನರಿಗೆ ಸಿನಿಮಾ ತುಂಬ ಇಷ್ಟ ಆಗಿದೆ. ಇದಕ್ಕಿಂತ ಇನ್ನೇನು ಬೇಕು. ಫಿಲ್ಮ್ ಚೆನ್ನಾಗಿ ಓಡುತ್ತಿದೆ. ತುಂಬ ಜನ ಫೋನ್ ಮಾಡಿ ಹೇಳುತ್ತಿದ್ದಾರೆ. ಎಲ್ಲರೂ ಬಂದು ನೋಡಿ.. ಆಶಿರ್ವಾದ ಮಾಡಿ.'' ಎಂದು ತಮ್ಮ ಸಂತಸವನ್ನು ನಟ ರವಿಶಂಕರ್ ಹಂಚಿಕೊಂಡಿದ್ದಾರೆ.

English summary
Actor Darshan spoke about 'College Kumar' movie,

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X