For Quick Alerts
  ALLOW NOTIFICATIONS  
  For Daily Alerts

  ರೈತರ ಸಾಲ ಬಗ್ಗೆ ಡಿ-ಬಾಸ್ ಮಾತು: ಇದು ಸಿಎಂಗೆ ಟಾಂಗ್?

  |
  ಕಾಲೇಜಿನಲ್ಲಿ ದರ್ಶನ್ ಮಾತಿಗೆ ಎಲ್ಲರೂ ಫಿದಾ | Filmibeat Kannada

  ತಮ್ಮ ಬಹುತೇಕ ಎಲ್ಲ ಸಿನಿಮಾಗಳಲ್ಲೂ ಒಂದಲ್ಲ ಒಂದು ರೀತಿ ರೈತರ ಪರ ದನಿ ಎತ್ತುವ ನಟ ದರ್ಶನ್ ಈಗ ರೈತರ ಸಾಲಮನ್ನದ ಬಗ್ಗೆ ಮಾತನಾಡಿದ್ದಾರೆ.

  ಬೆಂಗಳೂರಿನ ಬಿಐಟಿ ಕಾಲೇಜು ಉತ್ಸವದಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ''ರೈತರ ಸಾಲ ಮಾಡೋದು ಬೇಡ, ಅವರು ಬೆಳೆದ ಬೆಳೆಗೆ ನ್ಯಾಯವಾದ ಬೆಲೆ ಕೊಟ್ರೆ ಸಾಕು' ಎಂದು ಹೇಳಿದ್ದಾರೆ. ಈ ಮೂಲಕ ಸಿಎಂ ಕುಮಾರಸ್ವಾಮಿ ಅವರಿಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ ಎನ್ನಲಾಗುತ್ತಿದೆ.

  ರೈತರ ಪರವಾಗಿ ಸಿಎಂ ಕುಮಾರಸ್ವಾಮಿಗೆ ಮತ್ತೆ ಟಾಂಗ್ ಕೊಟ್ಟ ದರ್ಶನ್

  ನಿಜಕ್ಕೂ ದರ್ಶನ್ ಹೇಳಿದ್ದೇನು?

  ''ನಾನೊಬ್ಬ ರೈತ..ನೀವು ಇಲ್ಲಿ ಆರಾಮಾಗಿ ಕೂತಿದ್ದೀರಾ ಅಂದ್ರೆ ಅದಕ್ಕೆ ಬಾರ್ಡರ್ ನಲ್ಲಿರುವ ಸೈನಿಕ ಕಾರಣ. ಸಾಲಮನ್ನಾ ಮಾಡ್ತೀವಿ ಅಂತ ಹೇಳ್ತಾರೆ, ಸಾಲ ಮನ್ನಾ ಮಾಡೋದು ಬೇಡ, ರೈತರು ಬೆಳೆದ ಬೆಳೆಗೆ ನ್ಯಾಯವಾದ ಬೆಲೆ ನೀಡಿದ್ರೆ ಸಾಕು, ಅವರೇ ಸರ್ಕಾರಕ್ಕೆ ಸಾಲು ಕೊಡ್ತಾರೆ'' ಎಂದು ಹೇಳಿದ್ದಾರೆ.

  ದರ್ಶನ್ ಗೆ ಬೆಳ್ಳಿ ಗದೆ ನೀಡಿದ ವಿದ್ಯಾರ್ಥಿಗಳು: ಗದೆ ವಾಪಸ್ ನೀಡಿದ ಗಜ

  ಕಾಲೇಜು ಉತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದ ದರ್ಶನ್ ಈ ಸಂದರ್ಭದಲ್ಲಿ ಈ ಮಾತನ್ನ ಹೇಳಿದ್ದಾರೆ. ಸಹಜವಾಗಿ ಇದು ಚರ್ಚೆಗೆ ಕಾರಣವಾಗಿದ್ದು, ಸಿಎಂ ಕುಮಾರಸ್ವಾಮಿಗೆ ಡಿ ಬಾಸ್ ದರ್ಶನ್ ಟಾಂಗ್ ಕೊಟ್ಟಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗ್ತಿದೆ.

  English summary
  Challenging star darshan has spoken about farmers loan in BIT Collage festival.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X