»   » IPL ಬೆಟ್ಟಿಂಗ್ ಬಗ್ಗೆ ಮಾತನಾಡಿದ ಡಿ ಬಾಸ್ ದರ್ಶನ್

IPL ಬೆಟ್ಟಿಂಗ್ ಬಗ್ಗೆ ಮಾತನಾಡಿದ ಡಿ ಬಾಸ್ ದರ್ಶನ್

Posted By:
Subscribe to Filmibeat Kannada
ಬೆಟ್ಟಿಂಗ್ ಬಗ್ಗೆ ಮಾತನಾಡಿದ ದರ್ಶನ | Filmibeat Kannada

ಐ ಪಿ ಎಲ್ ಕ್ರಿಕೆಟ್ ಟೂರ್ನಿ ಕೆಲ ದಿನದ ಹಿಂದೆಯಿಂದ ಶುರುವಾಗಿದೆ. ಈ ಬಾರಿಯ ಸೀಸನ್ ಸಿಕ್ಕಾಪಟ್ಟೆ ಕ್ರೇಜ್ ಹೊಂದಿದೆ. ಪ್ರತಿದಿನ ಐ ಪಿ ಎಲ್ ಮ್ಯಾಚ್ ನೋಡುವುದು ಎಲ್ಲರ ಕಾಯಕ ಆಗಿ ಬಿಟ್ಟಿದೆ.

ಐ ಪಿ ಎಲ್ ಪಂದ್ಯವನ್ನು ನೋಡಿ ಖುಷಿ ಪಡುವ ಪ್ರೇಕ್ಷಕ ವರ್ಗ ಒಂದು ಕಡೆ ಆದರೆ, ಇನ್ನೊಂದು ಕಡೆ ಐ ಪಿ ಎಲ್ ಗೆ ಇನ್ನೊಂದು ಮುಖ ಇದೆ. ಅನೇಕರು ಐ ಪಿ ಎಲ್ ಶುರು ಆಗುತ್ತಿದ್ದ ಹಾಗೆ ದುಡ್ಡು ಮಾಡುವ ಪ್ಲಾನ್ ಮಾಡುತ್ತಾರೆ. ದುರಾಸೆ ಬಿದ್ದು ಐ ಪಿ ಎಲ್ ಬೆಟ್ಟಿಂಗ್ ಆಡಿ ಸಾಲ ಮಾಡಿಕೊಳ್ಳುತ್ತಾರೆ. ಆದರೆ ಅಂತಹವರಿಗೆ ಈಗ ನಟ ದರ್ಶನ್ ಬುದ್ದಿ ಹೇಳುತ್ತಿದ್ದಾರೆ.

ಐ ಪಿ ಎಲ್ ಅನ್ನು ಒಂದು ಮ್ಯಾಚ್ ತರ ನೋಡಿ. ಎಂಜಾಯ್ ಮಾಡಿ. ಅದರಿಂದ ಹಾಳಾಗಬೇಡಿ ಎನ್ನುತ್ತಿದ್ದಾರೆ ದರ್ಶನ್. ಮುಂದೆ ಓದಿ...

'ಐ ಪಿ ಎಲ್ ಗ್ಯಾಂಬ್ಲರ್ಸ್'

ಐ ಪಿ ಎಲ್ ಬಗ್ಗೆ ಯುವಕರ ತಂಡವೊಂದು 'ಐ ಪಿ ಎಲ್ ಗ್ಯಾಂಬ್ಲರ್ಸ್' ಎಂಬ ಹೊಸ ಕಿರುಚಿತ್ರವನ್ನು ಮಾಡಿದ್ದಾರೆ. ಈ ಶಾರ್ಟ್ ಫಿಲ್ಮ್ಸ್ ಅನ್ನು ನಟ ದರ್ಶನ್ ರಿಲೀಸ್ ಮಾಡಿದ್ದಾರೆ. ಇದೇ ವೇಳೆ ಐ ಪಿ ಎಲ್ ಬಗ್ಗೆ ದರ್ಶನ್ ಮಾತನಾಡಿದ್ದಾರೆ.

ಎಲ್ಲರೂ ಬೆಟ್ಟಿಂಗ್ ನಲ್ಲಿ ಕೂತಿರುತ್ತಾರೆ

''ಈಗ ಐ ಪಿ ಎಲ್ ಶುರು ಆಗಿದೆ. ಈ ವಿಷಯ ಇಟ್ಟುಕೊಂಡು ಹುಡುಗರು ಒಂದು ಕಿರುಚಿತ್ರ ಮಾಡಿದ್ದಾರೆ. ಐ ಪಿ ಎಲ್ ಗ್ಯಾಂಬ್ಲರ್ಸ್ ಅಂತ. ಇದು ಒಂದೊಳ್ಳೆ ಕಿರುಚಿತ್ರ. ಪ್ರತಿ ವರ್ಷ ಐ ಪಿ ಎಲ್ ಕ್ರಿಕೆಟ್ ಮ್ಯಾಚ್ ಶುರು ಆದಾಗ ಎಲ್ಲರೂ ಬೆಟ್ಟಿಂಗ್ ನಲ್ಲಿ ಕೂತಿರುತ್ತಾರೆ. ಮ್ಯಾಚ್ ನೋಡಿದಕ್ಕಿಂತ ಜಾಸ್ತಿ ಬೆಟ್ಟಿಂಗ್ ಕಟ್ಟುತ್ತಿರುತ್ತಾರೆ.'' - ದರ್ಶನ್, ನಟ

ನಿಮ್ಮ ಲೈಫ್ ಹಾಳು ಮಾಡಿಕೊಳ್ಳಬೇಡಿ

''ಐ ಪಿ ಎಲ್ ಬೆಟ್ಟಿಂಗ್ ಅಂದರೆ ಎಲ್ಲೆಲ್ಲಿಂದನೋ ಸಾಲ ಮಾಡಿ ಮತ್ತ್ಯಾರಿಗೋ ಕೊಡಬಹುದು ಏನೆನೋ ಇದೆ. ಆದರೆ ದಯವಿಟ್ಟು ಐ ಪಿ ಎಲ್ ಅನ್ನು ಒಂದು ಮ್ಯಾಚ್ ತರ ನೋಡಿ. ಎಂಜಾಯ್ ಮಾಡಿ. ಐಪಿ ಎಲ್ ನಲ್ಲಿ ಆಟ ಆಡುವ ಆಟಗಾರರು ಅಂತ ತುಂಬ ಕಷ್ಟ ಪಟ್ಟು ಆಡುತ್ತಿರುತ್ತಾರೆ. ಆದರೆ ನೀವು ಅದರಿಂದ ನಿಮ್ಮ ಲೈಫ್ ಅನ್ನು ಹಾಳು ಮಾಡಿಕೊಳ್ಳಬೇಡಿ.'' - ದರ್ಶನ್, ನಟ

ನೋಡಿ ಪ್ರೋತ್ಸಾಹ ಕೊಡಿ

''ಐ ಪಿ ಎಲ್ ಕ್ರಿಕೆಟ್ ಬಗ್ಗೆ ಇರುವ ಈ ಎಲ್ಲ ವಿಷಯಗಳ ಮೇಲೆ ಬೆಸ್ ಆಗಿರುವ ಕಿರುಚಿತ್ರ 'ಐ ಪಿ ಎಲ್ ಗ್ಯಾಂಬ್ಲರ್ಸ್' ಬಂದಿದೆ. ಇದನ್ನು ನೋಡಿ ಪ್ರೋತ್ಸಾಹ ಕೊಡಿ. ಎಲ್ಲರಿಗೆ ಆಶೀರ್ವಾದ ಮಾಡಿ ಅಂತ ಕೇಳಿಕೊಳ್ಳುತ್ತಾರೆ.''

English summary
kannada actor Darshan spoke about IPL (indian premier league) betting.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X