For Quick Alerts
  ALLOW NOTIFICATIONS  
  For Daily Alerts

  ಮಯೂರ, ಬಬ್ರುವಾಹನ ಚಿತ್ರದ ಬಗ್ಗೆ ದರ್ಶನ್ ಹೇಳಿದ ಮಾತಿದು

  |
  ಮಯೂರ ಹಾಗು ಬಬ್ರುವಾಹನ ಚಿತ್ರದ ಬಗ್ಗೆ ದರ್ಶನ್ ಹೇಳಿದ್ದು ಹೀಗೆ | FILMIBEAT KANNADA

  ಕುರುಕ್ಷೇತ್ರ ಸಿನಿಮಾ ಮಾಡುತ್ತಿದ್ದಾರೆ ಅಂದಾಕ್ಷಣ ವಾಹ್ ಎಂದು ಬೆರಗಾದವರೇ ಹೆಚ್ಚು. ದುಯೋರ್ಧನ ಯಾರಾಗ್ತಾರೆ, ಭೀಮ ಯಾರಾಗ್ತಾರೆ, ಕೃಷ್ಣ ಯಾರು ಮಾಡ್ತಾರೆ, ಅರ್ಜುನನ ಪಾತ್ರ ಯಾರು ನಿರ್ವಹಿಸಬಹುದು ಎಂಬ ಕುತೂಹಲ ಹೆಚ್ಚಿತು.

  ಕೌರವ ಆಧಾರಿತ ಕಥೆ ಮಾಡಲಾಗುತ್ತಿದ್ದು, ದುರ್ಯೋಧನ ಪಾತ್ರಕ್ಕೆ ಸೂಕ್ತ ನಟ ದರ್ಶನ್ ಎಂಬ ಮಾತುಗಳು ಕೇಳಿದವು. ಅದಾಗಲೇ ಸಂಗೊಳ್ಳಿ ರಾಯಣ್ಣ ಎಂಬ ಐತಿಹಾಸಿಕ ಚಿತ್ರದಲ್ಲಿ ದರ್ಶನ್ ಅಬ್ಬರಿಸಿ ಅತ್ಯುತ್ತಮ ನಟ ರಾಜ್ಯ ಪ್ರಶಸ್ತಿ ಪಡೆದುಕೊಂಡಿದ್ದರು. ನಂತರ ದುರ್ಯೋಧನನ ಗೆಟಪ್ ನಲ್ಲಿ ದರ್ಶನ್ ಅವರನ್ನ ನೋಡಿದ ಅಭಿಮಾನಿಗಳಂತೂ ಫುಲ್ ಖುಷ್ ಆದರು.

  ದರ್ಶನ್-ಮುನಿರತ್ನ ನಡುವೆ 2007ರಲ್ಲೇ ಕುರುಕ್ಷೇತ್ರದ ಬಗ್ಗೆ ಡೀಲ್ ಆಗಿತ್ತಂತೆ.!

  ಅಂದು ಪೌರಾಣಿಕ ಚಿತ್ರಗಳು ಅಂದ್ರೆ ಅಣ್ಣಾವ್ರು, ಇಂದು ಪೌರಾಣಿಕ/ಐತಿಹಾಸಿಕ ಚಿತ್ರಗಳು ಅಂದ್ರೆ ದರ್ಶನ್ ಎಂಬ ಬಲವಾದ ಅಭಿಪ್ರಾಯ ಇಂಡಸ್ಟ್ರಿಯಲ್ಲಿದೆ. ಇಷ್ಟೆಲ್ಲಾ ಮಾತುಗಳ ನಡುವೆ ಡಾ ರಾಜ್ ಕುಮಾರ್ ಅಭಿನಯದ ಮಯೂರ ಮತ್ತು ಬಬ್ರುವಾಹನ ಸಿನಿಮಾಗಳ ಬಗ್ಗೆ ಡಿ ಬಾಸ್ ಮಾತನಾಡಿದರು. ಏನಂದ್ರು? ಮುಂದೆ ಓದಿ.....

  ಅಪರೂಪದ ಪಾತ್ರಗಳ ಬಗ್ಗೆ ಆಸಕ್ತಿ

  ಅಪರೂಪದ ಪಾತ್ರಗಳ ಬಗ್ಗೆ ಆಸಕ್ತಿ

  ದರ್ಶನ್ ಅವರು ಕುರುಕ್ಷೇತ್ರ ಮತ್ತು ಅದರಲ್ಲಿನ ದುರ್ಯೋಧನ ಪಾತ್ರ ಆಯ್ಕೆ ಮಾಡಿಕೊಳ್ಳಲು ವಿಶೇಷವಾದ ಕಾರಣವೂ ಇದೆ. ಯಾಕಂದ್ರೆ, ಈ ಹಿಂದೆ ದುರ್ಯೋಧನನ ಪಾತ್ರದ ಮೇಲೆ ಯಾರೂ ಕಥೆ ಮಾಡಿಲ್ಲ. ಕೃಷ್ಣ, ಅರ್ಜುನ ಸೇರಿದಂತೆ ಅನೇಕ ಪೌರಾಣಿಕ ಪಾತ್ರಗಳಲ್ಲಿ ರಾಜ್ ಕುಮಾರ್ ನಟಿಸಿದ್ದಾರೆ. ಹೀಗಾಗಿ, ದುರ್ಯೋಧನನ ಪಾತ್ರ ಹೊಸ ಅನುಭವ ಎಂದು ಆಡಿಯೋ ಬಿಡುಗಡೆ ಸಮಾರಂಭದಲ್ಲಿ ದರ್ಶನ್ ಹೇಳಿಕೊಂಡರು.

  'ಸುಲ್ತಾನ್ ಆಫ್ ಸ್ಯಾಂಡಲ್ ವುಡ್' : ಡಿ ಬಾಸ್ ಗೆ ಸಿಕ್ತು ಮತ್ತೊಂದು ಹೊಸ ಬಿರುದು

  ಮಯೂರ, ಬಬ್ರುವಾಹನ ಮುಟ್ಟಲ್ಲ

  ಮಯೂರ, ಬಬ್ರುವಾಹನ ಮುಟ್ಟಲ್ಲ

  ''ಈ ಹಿಂದೆ ಅಣ್ಣಾವ್ರು ಮಾಡಿದ ಚಿತ್ರಗಳನ್ನ ಮುಟ್ಟಲು ಸಾಧ್ಯವಿಲ್ಲ. ಯಾಕಂದ್ರೆ ಅವೆಲ್ಲ ಮಾಸ್ಟರ್ ಪೀಸ್. ಅದನ್ನ ನಾವು ನೋಡಿ ಆನಂದಿಸಬೇಕು. ಅದೇ ಮಯೂರ ಸಿನಿಮಾ ಮತ್ತೆ ಮಾಡೋಣ ಅಥವಾ ಬಬ್ರುವಾಹನ ಸಿನಿಮಾ ಮತ್ತೆ ಮಾಡೋಣ ಅಂದ್ರೆ ನಾನು ಓಡಿ ಹೋಗ್ತೀನಿ'' ಎಂದು ದರ್ಶನ್ ಹೇಳಿದ್ರು.

  ಪೌರಾಣಿಕ ಚಿತ್ರಗಳಿಗೆ ಕ್ಯೂ ಇಲ್ಲ

  ಪೌರಾಣಿಕ ಚಿತ್ರಗಳಿಗೆ ಕ್ಯೂ ಇಲ್ಲ

  ''ಕಮರ್ಷಿಯಲ್ ಚಿತ್ರಗಳ ಪೈಕಿ ಕ್ಯೂ ಇದೆ. ಇದು ಮೊದಲು, ಇದು ನಂತರ, ಇದಾದ ಮೇಲೆ ಇದು ಎಂಬ ಲೈನ್ ಇದೆ. ಆದ್ರೆ, ಪೌರಾಣಿಕ ಅಥವಾ ಐತಿಹಾಸಿಕ ಚಿತ್ರಗಳು ಬಂದಾಗ ಆ ಕ್ಯೂ ಮುರಿದು ಮೊದಲ ಕೈಗೆತ್ತಿಕೊಳ್ಳುತ್ತೇನೆ'' ಎಂದು ದರ್ಶನ್ ತಿಳಿಸಿದರು.

  ಗಂಡುಗಲಿ ಮದಕರಿ ನಾಯಕ

  ಗಂಡುಗಲಿ ಮದಕರಿ ನಾಯಕ

  ಕುರುಕ್ಷೇತ್ರ ಸಿನಿಮಾ ಮುಗಿಸಿದ ಬಳಿಕ ಯಜಮಾನ, ಒಡೆಯ, ರಾಬರ್ಟ್ ಸಿನಿಮಾಗಳನ್ನ ಮಾಡ್ತಿರುವ ದರ್ಶನ್, ಮುಂದೆ ಗಂಡುಗಲಿ ಮದಕರಿ ನಾಯಕ ಚಿತ್ರವನ್ನ ಆರಂಭಿಸಲಿದ್ದಾರೆ. ರಾಕ್ ಲೈನ್ ವೆಂಕಟೇಶ್ ನಿರ್ಮಾಣ ಹಾಗೂ ಎಸ್.ವಿ ರಾಜೇಂದ್ರ ಸಿಂಗ್ ಬಾಬು ಸಾರಥ್ಯದಲ್ಲಿ ಈ ಪ್ರಾಜೆಕ್ಟ್ ಆರಂಭವಾಗಲಿದೆ.

  English summary
  Kannada actor challenging star darshan spoke about mayura and babruvahana movie in kurukshetra audio release event.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X