'ರಾಧಿಕಾ ಕುಮಾರಸ್ವಾಮಿ ನನಗಿಂತ ಸೀನಿಯರ್' - ದರ್ಶನ್

Recommended Video

Challenging Star Darshan speak about Radhika Kumaraswamy | Filmibeat Kannada

''ರಾಧಿಕಾ ಕುಮಾರಸ್ವಾಮಿ ಅವರ ನನಗಿಂತ ಸೀನಿಯರ್. ದಮಯಂತಿ ಅಂತಹ ಸಿನಿಮಾ ಮಾಡುವುದಕ್ಕೆ ಡೆಡಿಕೇಶನ್ ಇದ್ದರೆ ಮಾತ್ರ ಸಾಧ್ಯ. ಅದಕ್ಕೆ ಗಟ್ಸ್ ಬೇಕು. ಟ್ರೈಲರ್ ನೋಡಿದಾಗ ರೋಮಾಂಚನ ಆಯ್ತು'' ಎಂದು ನಟ ದರ್ಶನ್ ಹೇಳಿದ್ದಾರೆ.

ರಾಧಿಕಾ ಕುಮಾರಸ್ವಾಮಿ ನಟನೆಯ 'ದಮಯಂತಿ' ಸಿನಿಮಾದ ಟ್ರೈಲರ್ ಲಾಂಚ್ ಮಾಡಿದ ಡಿ ಬಾಸ್, ಸಿನಿಮಾ ಹಾಗೂ ರಾಧಿಕಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

'ನಾನು ಮೆಜಿಸ್ಟಿಕ್ ಸಿನಿಮಾ ಮಾಡುವುದಕ್ಕೂ ಮೊದಲೇ, ರಾಧಿಕಾ 'ನೀಲಾ ಮೇಘ ಶ್ಯಾಮ' ಸಿನಿಮಾ ಮಾಡಿದ್ದರು. ಅವರು ನನಗಿಂತ ಒಂದು ಸಿನಿಮಾ ಸೀನಿಯರ್. ಅವರ ಕಾಲದಲ್ಲಿದ್ದ ನಟಿಯರು ಯಾರೂ ಸಿನಿಮಾ ಮಾಡ್ತಿಲ್ಲ. ಈಗಲು ರಾಧಿಕಾ ಸಿನಿಮಾ ಮಾಡ್ತಿದ್ದಾರೆ. ನಿಜಕ್ಕೂ ಖುಷಿ ಆಗ್ತಿದೆ'' ಎಂದು ದರ್ಶನ್ ಸಂತಸ ವ್ಯಕ್ತಪಡಿಸಿದರು.

Darshan Spoke About Radhika Kumarswamy

ಇದಕ್ಕೂ ಮೊದಲು ಮಾತನಾಡಿದ ರಾಧಿಕಾ ಕುಮಾರಸ್ವಾಮಿ ''ಈ ವರ್ಷ ನನ್ನ ಹುಟ್ಟುಹಬ್ಬದ ಸಂಭ್ರಮ ಹೆಚ್ಚಾಗಿದೆ. ಬಹಳ ಬ್ಯುಸಿ ಇದ್ದರೂ ನನ್ನ ಸಿನಿಮಾ ಕಾರ್ಯಕ್ರಮಕ್ಕೆ ದರ್ಶನ್ ಅವರು ಬಂದಿದ್ದಾರೆ. ಅವರು ಟ್ರೈಲರ್ ಲಾಂಚ್ ಮಾಡಿದ್ದು, ನನ್ನ ಬರ್ತಡೇಗೆ ಸಿಕ್ಕ ಬಹುದೊಡ್ಡ ಗಿಫ್ಟ್'' ಎಂದರು.

ಅಂದ್ಹಾಗೆ, ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ 'ಮಂಡ್ಯ' ಮತ್ತು 'ಅನಾಥರು' ಚಿತ್ರದಲ್ಲಿ ರಾಧಿಕಾ ಕುಮಾರಸ್ವಾಮಿ ನಾಯಕಿಯಾಗಿ ನಟಿಸಿದ್ದಾರೆ.

More from Filmibeat

English summary
Challenging star darshan released damayanthi movie trailer and song. the film starring radhika kumaraswamy in the lead role.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X