»   » ಸಂಕ್ರಾಂತಿ ಕಿರುತೆರೆಯಲ್ಲಿ ಕ್ರಾಂತಿ ಮಾಡಲಿದ್ದಾರೆ ದರ್ಶನ್ ಚಕ್ರವರ್ತಿ

ಸಂಕ್ರಾಂತಿ ಕಿರುತೆರೆಯಲ್ಲಿ ಕ್ರಾಂತಿ ಮಾಡಲಿದ್ದಾರೆ ದರ್ಶನ್ ಚಕ್ರವರ್ತಿ

Posted By:
Subscribe to Filmibeat Kannada

ಬೆಳ್ಳಿ ತೆರೆ ಮೇಲೆ 80ರ ದಶಕದ ಸ್ಟೈಲ್ ನಲ್ಲಿ ಬಂತು ಪ್ರೇಕ್ಷಕ ಪ್ರಭುಗಳನ್ನ ಮೋಡಿ ಮಾಡಿದ್ದ ಚಕ್ರವರ್ತಿ ಮತ್ತೆ ಬರುತ್ತಿದ್ದಾರೆ. ಬೆಂಗಳೂರಿನ ಭೂಗತ ಲೋಕದ ಕರಾಳ ಚಿತ್ತಾರವನ್ನ ತೆರೆ ಮೇಲೆ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದ ಚಕ್ರವರ್ತಿ ಸಿನಿಮಾ ಕಿರುತೆರೆಯಲ್ಲಿ ಬರಲಿದೆ.

ವರ್ಷದ ಮೊದಲ ಹಬ್ಬವಾದ ಸಂಕ್ರಾಂತಿ ದರ್ಶನ್ ಅಭಿಮಾನಿಗಳಿಗೆ ಸಿನಿಮಾ ಸುಗ್ಗಿಯ ಸಂಭ್ರಮ. ಜನವರಿ 14ರಂದು ಉದಯ ವಾಹಿನಿಯಲ್ಲಿ ಚಕ್ರವರ್ತಿ ಸಿನಿಮಾ ಪ್ರಸಾರವಾಗಲಿದೆ.ಕಳೆದ ವರ್ಷದ ಬಹು ನಿರೀಕ್ಷಿತ ಸಿನಿಮಾ ಚಕ್ರವರ್ತಿ ಆಗಿದ್ದು ಬಾಕ್ಸ್ ಆಫೀಸ್ ನಲ್ಲೂ ಬಾರಿ ಸುದ್ದಿ ಮಾಡಿತ್ತು. ಚಕ್ರವರ್ತಿ ಸಿನಿಮಾ ಮಾತ್ರವಲ್ಲದೆ ಚಿತ್ರದ ಹಾಡುಗಳು ಕೂಡ ಕಳೆದ ವರ್ಷದ ಹಿಟ್ ಸಾಂಗ್ ಗಳಾಗಿದ್ದವು.

Darshan starrer Chakravarthi cinema will be broadcast Udaya channel

ದಾಖಲೆ ಮೊತ್ತ ಕೊಟ್ಟು ಚಕ್ರವರ್ತಿ ಸಿನಿಮಾದ ಹಕ್ಕನ್ನು ಖರೀದಿ ಮಾಡಿದ್ದ ಉಯಯ ವಾಹಿನಿ ಸಿನಿಮಾ ಶೀಘ್ರದಲ್ಲೇ ಪ್ರಸಾರವಾಗಲಿದೆ ಎಂದು ಪೋಮೋವನ್ನ ಪ್ರಸಾರ ಮಾಡುತ್ತಿತ್ತು. ಈಗ ಸಂಕ್ರಾಂತಿ ಹಬ್ಬಕ್ಕೆ ಪ್ರಸಾರ ಮಾಡುವುದಾಗಿ ಪ್ರೇಕ್ಷಕರಿಗೆ ತಿಳಿಸಿದೆ.

ಚಿತ್ರಮಂದಿರದಲ್ಲಿ ಸಿನಿಮಾವನ್ನ ಮಿಸ್ ಮಾಡಿಕೊಂಡಿದ್ದ ಪ್ರೇಕ್ಷಕರು ಹಬ್ಬದ ದಿನ ಮನೆಮಂದಿಯ ಜೊತೆ ಕೂತು ಚಕ್ರವರ್ತಿ ಸಿನಿಮಾವನ್ನ ನೋಡಬಹುದು. ದರ್ಶನ್ ಅಭಿನಯದ ಚಕ್ರವರ್ತಿ ಚಿತ್ರದಲ್ಲಿ ದೀಪಾ ಸನ್ನಿಧಿ ನಾಯಕಿಯಾಗಿ ಅಭಿನಯಿಸಿದ್ದರು.

Darshan starrer Chakravarthi cinema will be broadcast Udaya channel

ಚಕ್ರವರ್ತಿ ಸಿನಿಮಾ ಸಂಕ್ರಾಂತಿ ಹಬ್ಬದಂದು ಪ್ರಸಾರವಾಗಲಿದೆ ಅನ್ನೋದನ್ನ ತಿಳಿದ ತಕ್ಷಣ ಅಭಿಮಾನಿಗಳು ಈ ಖುಷಿಯ ವಿಚಾರವನ್ನ ಟ್ವಿಟ್ಟರ್ ಮತ್ತು ಫೆಸ್ ಬುಕ್ ನಲ್ಲಿ ಹಂಚಿಕೊಳ್ಳುತ್ತಿದ್ದಾರೆ.

English summary
Kannada film actor Darshan starrer 'Chakravarthy' cinema will be broadcast Udaya channel. Cinema will be broadcast on the Sankranti festival, the film directed by Chintan, Deepa Sannidhi female lead opposite darshan.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X