»   » 'ಬಾಹುಬಲಿ' ಮೀರಿಸಿದ ದರ್ಶನ್ 'ಚಕ್ರವರ್ತಿ'

'ಬಾಹುಬಲಿ' ಮೀರಿಸಿದ ದರ್ಶನ್ 'ಚಕ್ರವರ್ತಿ'

Posted By:
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಮೋಸ್ಟ್ ಎಕ್ಸ್ ಪೆಕ್ಟೆಡ್ ಚಿತ್ರ 'ಚಕ್ರವರ್ತಿ' ದಿನೇ ದಿನೇ ಸ್ಯಾಂಡಲ್ ವುಡ್ ಸಿನಿ ಪ್ರಿಯರ ಕುತೂಹಲ ಹೆಚ್ಚಿಸುತ್ತಿದೆ. 'ಚಕ್ರವರ್ತಿ' ಸಿನಿಮಾ ಯಾವಾಗ ತೆರೆಮೇಲೆ ಬರುತ್ತೋ ಅಂತ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.[ಯುಗಾದಿ ಹಬ್ಬಕ್ಕೆ 'ಚಕ್ರವರ್ತಿ'ಯಿಂದ ಬಂಪರ್ ಗಿಫ್ಟ್!]

ಅಂದಹಾಗೆ, ದರ್ಶನ್ ಅಭಿನಯದ 'ಚಕ್ರವರ್ತಿ' ಚಿತ್ರ ಕೇವಲ ಸ್ಯಾಂಡಲ್ ವುಡ್ ನಲ್ಲಿ ಮಾತ್ರವಲ್ಲ, ಇಡೀ ಭಾರತದ ಬಹು ನಿರೀಕ್ಷಿತ ಸಿನಿಮಾಗಳ ಪೈಕಿ ಒಂದಾಗಿದೆ ಅಂದ್ರೆ ನೀವು ನಂಬಲೇಬೇಕು. ಇದಕ್ಕೆ ಸಾಕ್ಷಿ ಬೇಕು ಅಂದ್ರೆ, ಇಂಡಿಯನ್ ಮೂವೀಸ್ ಡೇಟಾ ಬೇಸ್ (ಐಎಂಡಿಬಿ) ಚಾರ್ಟ್ ನತ್ತ ಒಮ್ಮೆ ಕಣ್ಣಾಡಿಸಿ. ಅದರಲ್ಲಿ ಟಾಪ್ ಸ್ಥಾನ ಕಾಯ್ದುಕೊಂಡಿರುವ ಕನ್ನಡದ 'ಚಕ್ರವರ್ತಿ', ತೆಲುಗಿನ 'ಬಾಹುಬಲಿ-2' ಚಿತ್ರವನ್ನ ಕೆಳಕ್ಕೆ ತಳ್ಳಿದೆ. ಈಗ ಗೊತ್ತಾಯ್ತಾ... 'ಚಕ್ರವರ್ತಿ' ಹವಾ ಹೇಗಿದೆ ಅಂತ.?


ನಂಬರ್ ಒನ್ ಸ್ಥಾನದಲ್ಲಿ 'ಚಕ್ರವರ್ತಿ'

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ದೀಪಾ ಸನ್ನಿಧಿ ಅಭಿನಯದ 'ಚಕ್ರವರ್ತಿ' ಭಾರತದ ಬಹು ನಿರೀಕ್ಷಿತ ಸಿನಿಮಾಗಳ ಪೈಕಿ ಒಂದು. ಚಿತ್ರಗಳ ರಿಯಲ್ ಟೈಮ್ ಪಾಪ್ಯುಲಾರಿಟಿ ಪ್ರದರ್ಶನ ಮಾಡುವ 'ಇಂಡಿಯನ್ ಮೂವೀಸ್ ಡೇಟಾ ಬೇಸ್(ಐಎಂಡಿಬಿ)' ಚಾರ್ಟ್ ನಲ್ಲಿ 'ಚಕ್ರವರ್ತಿ' ಸಿನಿಮಾ ಶೇ.54.4 ರಿಯಲ್ ಟೈಮ್ ಪಾಪ್ಯುಲಾರಿಟಿ ದಾಖಲು ಮಾಡುವ ಮೂಲಕ ಮೊದಲನೇ ಸ್ಥಾನ ಪಡೆದಿದೆ.['ಚಕ್ರವರ್ತಿ' ಅಭಿಮಾನಿಗಳಿಗೆ 'ತ್ರಿಬಲ್' ಧಮಾಕ]


'ಬಾಹುಬಲಿ-2' ಹಿಂದಿಕ್ಕಿದ 'ಚಕ್ರವರ್ತಿ'

ಇನ್ನೂ ಇಂಟ್ರೆಸ್ಟಿಂಗ್ ಅಂದ್ರೆ... ಟಾಲಿವುಡ್ ನ ಬಹುನಿರೀಕ್ಷಿತ 'ಬಾಹುಬಲಿ-2' ಚಿತ್ರವನ್ನ ಕನ್ನಡದ 'ಚಕ್ರವರ್ತಿ' ಹಿಂದಕ್ಕೆ ತಳ್ಳಿದೆ.


'ಬಾಹುಬಲಿ-2' ಪಾಪ್ಯುಲಾರಿಟಿ

ಟಾಲಿವುಡ್ ಖ್ಯಾತ ನಟ ಪ್ರಭಾಸ್, ನಟ ರಾಣಾ ದಗ್ಗುಬಾಟಿ, ನಟಿ ಅನುಷ್ಕಾ ಶೆಟ್ಟಿ ಮುಂತಾದವರ ಮುಖ್ಯ ಭೂಮಿಕೆ ಇರುವ 'ಬಾಹುಬಲಿ-2' ಚಿತ್ರ ಶೇ.17.6 ರಿಯಲ್ ಟೈಮ್ ಪಾಪ್ಯುಲಾರಿಟಿ ಹೊಂದಿದ್ದು, ಐಎಂಡಿಬಿ ಚಾರ್ಟ್ ನಲ್ಲಿ ಎರಡನೇ ಸ್ಥಾನ ಗಿಟ್ಟಿಸಿಕೊಂಡಿದೆ.


ಮೂರು ಮತ್ತು ನಾಲ್ಕನೇ ಸ್ಥಾನಗಳಲ್ಲಿರುವ ಚಿತ್ರಗಳು

ಬಾಲಿವುಡ್ ನಟ ಗೋವಿಂದ್, ನಟಿ ರಿಚಾ ಶರ್ಮಾ ಮತ್ತು ನಟಿ ಪೂನಂ ಪಾಂಡೆ ಅಭಿನಯದ 'ಆ ಗಯಾ ಹೀರೋ' ಮತ್ತು ಸ್ಯಾಂಡಲ್ ವುಡ್ ನ 'ರಾಜಕುಮಾರ' ಚಿತ್ರ ಐಎಂಡಿಬಿ ಚಾರ್ಟ್ ನಲ್ಲಿ ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿ ಪಾಪ್ಯುಲಾರಿಟಿಯಲ್ಲಿವೆ.


'ಚಕ್ರವರ್ತಿ' ಸಿನಿಮಾ ಬಿಡುಗಡೆ ಯಾವಾಗ?

'ಚಕ್ರವರ್ತಿ' ಸಿನಿಮಾದ ಟ್ರೈಲರ್ ಈ ತಿಂಗಳ ಅಂತ್ಯಕ್ಕೆ ಬಿಡುಗಡೆ ಆಗಲಿದ್ದು, ಏಪ್ರಿಲ್ ನಲ್ಲಿ ತೆರೆ ಮೇಲೆ ಬರುವ ಸಾಧ್ಯತೆ ಇದೆ.


English summary
Challenging Star Darshan Starrer 'Chakravarthy' Movie Beats 'Baahubali-2' in IMDB.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada