»   » 'ಚಕ್ರವರ್ತಿ' ಅಭಿಮಾನಿಗಳಿಗೆ 'ತ್ರಿಬಲ್' ಧಮಾಕ!

'ಚಕ್ರವರ್ತಿ' ಅಭಿಮಾನಿಗಳಿಗೆ 'ತ್ರಿಬಲ್' ಧಮಾಕ!

Posted By:
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳಿಗೆ ಬ್ಯಾಕ್ ಟು ಬ್ಯಾಕ್ ಹಬ್ಬ ಅಂತಾನೇ ಹೇಳ್ಬಹುದು. ಯಾಕಂದ್ರೆ, 'ಚಿಕ್ರವರ್ತಿ' ಚಿತ್ರದ ಆಡಿಯೋ ಜೊತೆಗೆ ಟೀಸರ್ ಕೂಡ ರಿಲೀಸ್ ಆಗಿದೆ.

ಬರೀ ಆಡಿಯೋ ಹಾಗೂ ಟೀಸರ್ ಬಿಡುಗಡೆಯಾಗಿದ್ದರೇ ವಿಶೇಷವೇನು ಇರಲಿಲ್ಲ. ಆದ್ರೆ, ಒಂದೇ ಬಾರಿ ಮೂರು ಟೀಸರ್ ಹಾಗೂ ವಿಡಿಯೋ ಸಾಂಗ್ ರಿಲೀಸ್ ಮಾಡಿರುವುದು ಡಿ-ಫ್ಯಾನ್ಸ್ ಗೆ ಖುಷಿನೋ ಖುಷಿ ತಂದಿದೆ.[ಎಕ್ಸ್ ಕ್ಲೂಸಿವ್: 'ಚಕ್ರವರ್ತಿ' ಚಿತ್ರದ ಟೈಟಲ್ ಸಾಂಗ್ ರಿಲೀಸ್!]

ಹೌದು, ಟೈಟಲ್ ಹಾಡಿನಿಂದ, ಇಡೀ ಗಾಂಧಿನಗರವನ್ನೇ ಧೂಳೆಬ್ಬಿಸಿದ್ದ 'ಚಕ್ರವರ್ತಿ' ಈಗ ಟೀಸರ್ ಮೂಲಕ ಮತ್ತೆ ದರ್ಬಾರ್ ಮಾಡುತ್ತಿದೆ.

'ಚಕ್ರವರ್ತಿ'ಯ 3 ಟೀಸರ್ ಬಿಡುಗಡೆ

ದರ್ಶನ್ ಅಭಿನಯದ ಬಹುನಿರೀಕ್ಷಿತ 'ಚಕ್ರವರ್ತಿ' ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಒಂದಲ್ಲ, ಎರಡಲ್ಲ, ಮೂರು ವಿಭಿನ್ನ ಟೀಸರ್ ಗಳು ರಿಲೀಸ್ ಆಗಿದ್ದು, ಮೂರು ಕಾಲಘಟ್ಟವನ್ನ ಒಳಗೊಂಡಿದೆ.

'ಚಕ್ರವರ್ತಿ' ಟೀಸರ್-1

'ಚಕ್ರವರ್ತಿ' ಚಿತ್ರದ ಮೊದಲ ಟೀಸರ್ 1980-90ರ ಕಾಲಘಟ್ಟವನ್ನ ಹೊಂದಿದ್ದು, ಅಂಡರ್ ವರ್ಲ್ಡ್ ಡಾನ್ ಪಾತ್ರದಲ್ಲಿ ದರ್ಶನ್ ಹೇಗೆ ಕಾಣಿಸಿಕೊಳ್ಳಲಿದ್ದಾರೆ ಎಂಬ ಸಣ್ಣ ಝಲಕ್ ತೋರಿಸಲಾಗಿದೆ. ಅಂದಿನ ಕಾಲಘಟ್ಟದ ವ್ಯಕ್ತಿಗಳಂತೆ ರೆಟ್ರೋ ಸ್ಟೈಲ್ ನಲ್ಲಿ ದರ್ಶನ್ ಮಿಂಚಿದ್ದಾರೆ.['ಚಕ್ರವರ್ತಿ' ಟೀಸರ್-1 ನೋಡಿ]

'ಚಕ್ರವರ್ತಿ' ಟೀಸರ್-2

'ಚಕ್ರವರ್ತಿ'ಯ ಎರಡನೇ ಟೀಸರ್ ರೊಮ್ಯಾಂಟಿಕ್ ಆಗಿದ್ದು, ನಾಯಕ ಹಾಗೂ ನಾಯಕಿಯ ಪ್ರೇಮ್ ಕಹಾನಿಯ ಝಲಕ್ ತೋರಿಸಿದೆ. ಇನ್ನೂ ಈ ಟೀಸರ್ ನಲ್ಲಿ ದರ್ಶನ್ ಮತ್ತು ದೀಪಾ ಸನ್ನಿಧಿ ಇಬ್ಬರು ರೆಟ್ರೋ ಸ್ಟೈಲ್ ನಲ್ಲಿ ಕಾಣಿಸಿಕೊಂಡಿದ್ದಾರೆ.['ಚಕ್ರವರ್ತಿ' ಟೀಸರ್-2 ನೋಡಿ]

'ಚಕ್ರವರ್ತಿ' ಟೀಸರ್-3

'ಚಕ್ರವರ್ತಿ'ಯ ಮೂರನೇ ಟೀಸರ್ ಔಟ್ ಅಂಡ್ ಔಟ್ ಮಾಸ್ ಆಗಿದ್ದು, ಇಂದಿನ ಟ್ರೆಂಡ್ ನಲ್ಲಿ ಚಾಲೆಂಜಿಂಗ್ ಸ್ಟಾರ್ ಅಬ್ಬರಿಸಿದ್ದಾರೆ.['ಚಕ್ರವರ್ತಿ' ಟೀಸರ್-3 ನೋಡಿ]

ಆಡಿಯೋ ರಿಲೀಸ್!

ಚಿತ್ರದ ಟೈಟಲ್ ಹಾಡಿನಿಂದ ಸಖತ್ ಹವಾ ಎಬ್ಬಿಸಿದ್ದ ಚಕ್ರವರ್ತಿ, ಈಗ ಚಿತ್ರದ ಕಂಪ್ಲೀಟ್ ಆಡಿಯೋ ಬಿಡುಗಡೆ ಮಾಡಿದೆ. ಚಿತ್ರದಲ್ಲಿ ಒಟ್ಟು 4 ಹಾಡುಗಳಿದ್ದು, ಅರ್ಜುನ್ ಜನ್ಯ ಸಂಗೀತ ನೋಡಿದ್ದಾರೆ. ವಿಶೇಷ ಅಂದ್ರೆ, 'ಚಕ್ರವರ್ತಿ'ಯ ಆಡಿಯೋವನ್ನ, ಸುದ್ದಿ ವಾಹಿನಿಗಳ ಛಾಯಗ್ರಾಹಕರ ಕೈಯಿಂದ ಬಿಡುಗಡೆ ಮಾಡಲಾಯಿತು.

ಟೈಟಲ್ ಸಾಂಗ್ ವಿಡಿಯೋ!

'ಚಕ್ರವರ್ತಿ' ಚಿತ್ರದ ಟೈಟಲ್ ಸಾಂಗ್ ಸೂಪರ್ ಹಿಟ್ ಆಗಿದ್ದು, ಈಗಾಗಲೇ ಸೋಶಿಯಲ್ ಮಿಡಿಯಾದಲ್ಲಿ ದಾಖಲೆ ಮಾಡಿದೆ. ಇದೀಗ, ಚಿತ್ರದ ಟೀಸರ್ ಹಾಗೂ ಆಡಿಯೋ ಜೊತೆಗೆ ಟೈಟಲ್ ಸಾಂಗ್ ನ ವಿಡಿಯೋ ಕೂಡ ರಿಲೀಸ್ ಮಾಡಲಾಗಿದೆ.[ವಿಡಿಯೋ ಸಾಂಗ್ ನೋಡಿ]

English summary
Challenging Star Darshan Starrer Most Expected Movie Chakravarthy's Teaser Released on January 15th. The Movie Directed By Chinthan And Deepa Sannidi are Play the Female Lead Role. Here the Teaser's of Chakravarthy.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada