For Quick Alerts
  ALLOW NOTIFICATIONS  
  For Daily Alerts

  ದರ್ಶನ್ ರವರ 'ಜಗ್ಗುದಾದಾ' ಚಿತ್ರದ ಹಾಡುಗಳು ಹೇಗಿವೆ.?

  By Harshitha
  |

  'ದಾಸ' ದರ್ಶನ್ ಅಭಿಮಾನಿಗಳು ಕಾತರದಿಂದ ಕಾಯುತ್ತಿರುವ ಘಳಿಗೆಗೆ ಕ್ಷಣಗಣನೆ ಶುರುವಾಗಿದೆ. ಇಂದು ಸಂಜೆ 6.30ಕ್ಕೆ ಬೆಂಗಳೂರಿನ ಗೋಲ್ಡ್ ಫಿನ್ಚ್ ಹೋಟೆಲ್ ನಲ್ಲಿ ಬಹು ನಿರೀಕ್ಷಿತ 'ಜಗ್ಗುದಾದಾ' ಚಿತ್ರದ ಆಡಿಯೋ ಬಿಡುಗಡೆ ಸಮಾರಂಭ ಜರುಗಲಿದೆ.

  'ಜಗ್ಗುದಾದಾ' ಚಿತ್ರದ ಆಡಿಯೋ ಹೇಗಿರಬಹುದು ಅಂತ ಕುತೂಹಲದಿಂದ ಕಾಯುತ್ತಿರುವ ನಿಮಗೆ ನಾವು ಸಣ್ಣ ಕ್ಲೂ ಕೊಡ್ತಿದ್ದೀವಿ...

  'ಜಗ್ಗುದಾದಾ' ಚಿತ್ರದಲ್ಲಿ ನಾಲ್ಕು ಹಾಡುಗಳಿವೆ. ಯೋಗರಾಜ್ ಭಟ್, ಕವಿರಾಜ್, ನಾಗೇಂದ್ರ ಪ್ರಸಾದ್ ಹಾಗೂ 'ಬಹದ್ದೂರ್' ಖ್ಯಾತಿಯ ಚೇತನ್ ಕುಮಾರ್ ಸಾಹಿತ್ಯ ಬರೆದಿದ್ದಾರೆ. [ಮೇ 9ಕ್ಕೆ 'ಜಗ್ಗುದಾದ' ತಂಡದಿಂದ ಅಭಿಮಾನಿಗಳಿಗೆ ಸಿಹಿ ಸುದ್ದಿ]

  ಕಾಮಿಡಿ ಟ್ರ್ಯಾಕ್ ನಲ್ಲಿ ಸಾಗುವ 'ಜಗ್ಗುದಾದಾ' ಚಿತ್ರದಲ್ಲಿ ದರ್ಶನ್ ಇಮೇಜ್ ಗೆ ತಕ್ಕಂತೆ ಮಾಸ್ ಸಾಂಗ್ ಕಂಪೋಸ್ ಮಾಡಿದ್ದಾರಂತೆ ಸಂಗೀತ ನಿರ್ದೇಶಕ ವಿ.ಹರಿಕೃಷ್ಣ. [ದಾಖಲೆ ಮೊತ್ತಕ್ಕೆ ಮಾರಾಟವಾದ 'ಜಗ್ಗುದಾದಾ' ಹಿಂದಿ ಡಬ್ಬಿಂಗ್ ಹಕ್ಕು]

  ಅದ್ರಲ್ಲೂ, 'ಜಗ್ಗುದಾದಾ' ಚಿತ್ರದಲ್ಲಿ ದರ್ಶನ್ ಇಂಟ್ರೊಡಕ್ಷನ್ ಹಾಡು ಶುರುವಾಗುವುದೇ ಹೀಗೆ - ''ಎದ್ದೇಳೋ ಲೇ..ಜಗ್ಗು ಬಂದಾ..ಸೀದಾ ನಿಲ್ಲೋ..ದಾದಾ ಬಂದ..ಶೋಕಿ ಆವಾಜ್ ಬೇಡ ಕಂದ..ಧಮ್ಕಿ ಎಲ್ಲಾ ಜಗ್ಗುಗ್ ಚೆಂದ..They call him Mass..We call him Boss..''

  ಇದರ ಜೊತೆ ಎಲ್ಲರಿಗೂ ಇಷ್ಟವಾಗುವ ಮದುವೆ ಹಾಡು ಕೂಡ ಚಿತ್ರದಲ್ಲಿದೆ. 'ಜಗ್ಗುದಾದಾ' ಗಾನಬಜಾನವನ್ನು ಕಿವಿಯಾರೆ ಕೇಳ್ಬೇಕು ಅಂದ್ರೆ, ತಪ್ಪದೇ ಇಂದು ಬಿಡುಗಡೆ ಆಗುವ ಆಡಿಯೋ ಸಿ.ಡಿ ಕೊಂಡುಕೊಳ್ಳಿ...

  English summary
  Kannada Actor Darshan starrer 'Jaggu Dada' audio to release today (May 9th) in Gold Finch Hotel, Bengaluru. V.Harikrishna has composed the music for the film.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X