For Quick Alerts
  ALLOW NOTIFICATIONS  
  For Daily Alerts

  ದರ್ಶನ್ 'ಜಗ್ಗುದಾದಾ' ಚಿತ್ರದ ಬಗ್ಗೆ ಎಕ್ಸ್ ಕ್ಲೂಸಿವ್ ಸುದ್ದಿ ಇಲ್ಲಿದೆ.!

  By Harshitha
  |

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಜಗ್ಗುದಾದಾ' ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ಲಭ್ಯವಾಗಿದ್ದರೂ, ಕಲೆಕ್ಷನ್ ವಿಚಾರದಲ್ಲಿ ಮಾತ್ರ ದರ್ಶನ್ ಮತ್ತೊಮ್ಮೆ 'ಬಾಕ್ಸ್ ಆಫೀಸ್ ಸುಲ್ತಾನ್' ಅಂತ ಪ್ರೂವ್ ಮಾಡಿದ್ದಾರೆ.

  'ಅಂಬರೀಶ', 'ಐರಾವತ' ಮತ್ತು 'ವಿರಾಟ್' ಚಿತ್ರಗಳಿಗೆ ಹೋಲಿಸಿದರೆ, 'ಜಗ್ಗುದಾದಾ' ಸಿನಿಮಾದಲ್ಲಿ ವಿಭಿನ್ನ ಕಥಾಹಂದರ ಹಾಗೂ ಕಾಮಿಡಿ ಟ್ರ್ಯಾಕ್ ಇದ್ದ ಕಾರಣ ಪ್ರೇಕ್ಷಕರ ಮನಗೆಲ್ಲುವಲ್ಲಿ ದರ್ಶನ್ ಯಶಸ್ವಿ ಆಗಿದ್ದಾರೆ. [ವಿಮರ್ಶೆ: 'ಜಗ್ಗುದಾದಾ' ಮದುವೆ ಊಟದ ರುಚಿ ಸ್ವಲ್ಪ ಸಿಹಿ, ಸ್ವಲ್ಪ ಸಪ್ಪೆ]

  ಕರ್ನಾಟಕ ರಾಜ್ಯಾದ್ಯಂತ 'ಜಗ್ಗುದಾದಾ' ದರ್ಬಾರ್ ಮಾಡಿದ ಹಾಗೆ ಪಕ್ಕದ ರಾಜ್ಯಗಳಲ್ಲೂ ಬಹುಬೇಗ 'ದಾದಾಗಿರಿ' ಶುರುವಾಗಲಿದೆ.

  ತೆಲುಗು ಹಾಗೂ ತಮಿಳು ಭಾಷೆಗೆ 'ಜಗ್ಗುದಾದಾ' ರೀಮೇಕ್ ಆಗುತ್ತಿರುವ ಎಕ್ಸ್ ಕ್ಲೂಸಿವ್ ಸುದ್ದಿ ನಿಮಗಾಗಿ ಹೊತ್ತು ತಂದಿದ್ದೀವಿ, ನಿಮ್ಮ 'ಫಿಲ್ಮಿಬೀಟ್ ಕನ್ನಡ'ದಲ್ಲಿ... ಕೆಳಗಿರುವ ಸ್ಲೈಡ್ ಗಳಲ್ಲಿ ಓದಿರಿ....

  ರೀಮೇಕ್ ಸಿದ್ಧತೆಯಲ್ಲಿ ನಿರ್ದೇಶಕ ರಾಘವೇಂದ್ರ ಹೆಗಡೆ

  ರೀಮೇಕ್ ಸಿದ್ಧತೆಯಲ್ಲಿ ನಿರ್ದೇಶಕ ರಾಘವೇಂದ್ರ ಹೆಗಡೆ

  ಯಶಸ್ವಿ ಮೂರನೇ ವಾರದ ಪ್ರದರ್ಶನ ಕಾಣುತ್ತಿರುವ 'ಜಗ್ಗುದಾದಾ' ಚಿತ್ರವನ್ನ ತಮಿಳು ಹಾಗೂ ತೆಲುಗು ಭಾಷೆಗೆ ರೀಮೇಕ್ ಮಾಡಲು ನಿರ್ಮಾಪಕ ಹಾಗೂ ನಿರ್ದೇಶಕ ರಾಘವೇಂದ್ರ ಹೆಗಡೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ['ಜಗ್ಗು'ವಿನ 'ದಾದಾ'ಗಿರಿಗೆ ವಿಮರ್ಶಕರು ಮನಸೋತ್ರಾ?]

  ಸೂರ್ಯ ಹಾಗೂ ಕಾರ್ತಿ ಸಿನಿಮಾ ನೋಡಿದ್ದಾಗಿದೆ.!

  ಸೂರ್ಯ ಹಾಗೂ ಕಾರ್ತಿ ಸಿನಿಮಾ ನೋಡಿದ್ದಾಗಿದೆ.!

  ಮೊನ್ನೆಯಷ್ಟೇ ನಿರ್ಮಾಪಕ/ನಿರ್ದೇಶಕ ರಾಘವೇಂದ್ರ ಹೆಗಡೆ ಚೆನ್ನೈಗೆ ಹೋಗಿದ್ದರು. ಯಾಕಂದ್ರೆ, ಕಾಲಿವುಡ್ ನ ಖ್ಯಾತ ನಟರಾದ ಸೂರ್ಯ ಹಾಗೂ ಕಾರ್ತಿಗೆ 'ಜಗ್ಗುದಾದಾ' ಸಿನಿಮಾ ತೋರಿಸುವುದಕ್ಕೆ.!

  ಕಾರ್ತಿ ಮೆಚ್ಚಿಕೊಂಡಿದ್ದಾರೆ.!

  ಕಾರ್ತಿ ಮೆಚ್ಚಿಕೊಂಡಿದ್ದಾರೆ.!

  'ಜಗ್ಗುದಾದಾ' ಚಿತ್ರ ನೋಡಿ ನಟ ಕಾರ್ತಿ ಮೆಚ್ಚಿಕೊಂಡಿದ್ದಾರೆ. ಮುಂದಿನ ಮಾತುಕತೆ ಆಗಬೇಕಿದೆ.

  ಲಿಸ್ಟ್ ನಲ್ಲಿ ವಿಶಾಲ್ ಕೂಡ ಇದ್ದಾರೆ.!

  ಲಿಸ್ಟ್ ನಲ್ಲಿ ವಿಶಾಲ್ ಕೂಡ ಇದ್ದಾರೆ.!

  ತಮಿಳಿನ 'ಜಗ್ಗುದಾದಾ' ಚಿತ್ರದ ಮುಖ್ಯ ಪಾತ್ರಕ್ಕೆ ನಟ ವಿಶಾಲ್ ರನ್ನ ಕರೆ ತರುವ ಪ್ಲಾನ್ ಕೂಡ ರಾಘವೇಂದ್ರ ಹೆಗಡೆ ತಲೆಯಲ್ಲಿದೆ.

  ತೆಲುಗಿನಲ್ಲಿ ಹೀರೋ ಯಾರು.?

  ತೆಲುಗಿನಲ್ಲಿ ಹೀರೋ ಯಾರು.?

  ಈಗಾಗಲೇ ಟಾಲಿವುಡ್ ಹೀರೋ ಗೋಪಿಚಂದ್ ಕೂಡ 'ಜಗ್ಗುದಾದಾ' ಸಿನಿಮಾ ನೋಡಿದ್ದಾಗಿದೆ. 'ಮಾಸ್ ಮಹಾರಾಜ' ರವಿತೇಜ ಅವರನ್ನು ನಾಯಕರನ್ನಾಗಿ ಮಾಡುವ ಬಗ್ಗೆ ಚರ್ಚೆ ನಡೆಯುತ್ತಿದೆ.

  ಯಾವುದೂ ಅಂತಿಮವಾಗಿಲ್ಲ.!

  ಯಾವುದೂ ಅಂತಿಮವಾಗಿಲ್ಲ.!

  ಎಲ್ಲವೂ ಇನ್ನೂ ಮಾತುಕತೆ ಹಂತದಲ್ಲಿ ಇರುವ ಕಾರಣ ಯಾವುದೂ ಅಂತಿಮವಾಗಿಲ್ಲ. ಆದ್ರೆ, ತೆಲುಗು ಹಾಗೂ ತಮಿಳು ಭಾಷೆಗೆ 'ಜಗ್ಗುದಾದಾ' ರೀಮೇಕ್ ಆಗುವುದು ಮಾತ್ರ ಪಕ್ಕಾ ಸುದ್ದಿ. ತಾರಾಗಣದ ಬಗ್ಗೆ ಖಚಿತ ಮಾಹಿತಿ ಸಿಕ್ಕ ಕೂಡಲೆ ನಿಮಗೆ ಅಪ್ ಡೇಟ್ ಮಾಡುತ್ತೇವೆ. ಅಲ್ಲಿವರೆಗೂ 'ಫಿಲ್ಮಿಬೀಟ್ ಕನ್ನಡ' ಓದ್ತಾಯಿರಿ...

  English summary
  Kannada Actor, Challenging Star Darshan starrer 'Jaggu Dada' is all set to be remade in Telugu and Tamil by Director cum Producer Raghavendra Hegde. Artists are yet to be finalised.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X