»   » ಚಾಮುಂಡಿ ತಾಯಿ ಸನ್ನಿಧಿಯಲ್ಲಿ ಬಾಕ್ಸಾಫೀಸ್ 'ಚಕ್ರವರ್ತಿ'ಗೆ ಪೂಜೆ

ಚಾಮುಂಡಿ ತಾಯಿ ಸನ್ನಿಧಿಯಲ್ಲಿ ಬಾಕ್ಸಾಫೀಸ್ 'ಚಕ್ರವರ್ತಿ'ಗೆ ಪೂಜೆ

Posted By:
Subscribe to Filmibeat Kannada

ಬಾಕ್ಸಾಫೀಸ್ ಸುಲ್ತಾನ ದರ್ಶನ್ ಅವರ ಮುಂಬರುವ 'ಚಕ್ರವರ್ತಿ' ಸಿನಿಮಾ ಸೋಮವಾರ (ಮೇ 23) ಗ್ರ್ಯಾಂಡ್ ಆಗಿ ಮುಹೂರ್ತ ನೆರವೇರಿಸಿಕೊಂಡು ಸೆಟ್ಟೇರಿದ್ದು, ಶೂಟಿಂಗ್ ಗೆ ತಯಾರಾಗಿದೆ. ಅಂದಹಾಗೆ ಈ ಬಾರಿ ಮೈಸೂರಿನ ತಾಯಿ ಚಾಮುಂಡೇಶ್ವರಿ ಸನ್ನಿಧಾನದಲ್ಲಿ ಚಿತ್ರಕ್ಕೆ ಮುಹೂರ್ತ ನೆರವೇರಿಸಲಾಗಿದೆ.

ಸಾಮಾನ್ಯವಾಗಿ ದರ್ಶನ್ ಅವರ ಸಿನಿಮಾದ ಮುಹೂರ್ತ ಅಂದ್ರೆ ಕಂಠೀರವ ಸ್ಟುಡಿಯೋದಲ್ಲಿ ನಡೆಯುತ್ತಿದ್ದವು. ಆದರೆ ಈ ಬಾರಿ ಸ್ವಲ್ಪ ಚೇಂಜ್ ಇರಲಿ ಅಂತ ಮೈಸೂರು ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಚಿತ್ರಕ್ಕೆ ಮುಹೂರ್ತ ನೆರವೇರಿಸಲಾಗಿದೆ.[ಚಾಲೆಂಜಿಂಗ್ ಸ್ಟಾರ್ ದರ್ಶನ್‌ಗೆ ಸಹೋದರ ದಿನಕರ್ ಸವಾಲ್!]


ಚಿತ್ರದ ಮುಹೂರ್ತ ಸಮಾರಂಭದಲ್ಲಿ ನಟ ದರ್ಶನ್, ನಿರ್ಮಾಪಕ ಕಮ್ ನಿರ್ದೇಶಕ ದಿನಕರ್ ತೂಗುದೀಪ್, ನಟ 'ಡೆಡ್ಲಿ' ಆದಿತ್ಯ, ನಿರ್ದೇಶಕ ಚಿಂತನ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.[ದರ್ಶನ್ 'ಚಕ್ರವರ್ತಿ' ನಿರ್ಮಾಪಕ ಹಠಾತ್ ಬದಲಾವಣೆ.! ಕಾರಣ ಇದೇನಾ?]


Darshan starrer Kannada Movie 'Chakravarthy' goes on floors

ನವ ನಿರ್ದೇಶಕ ಚಿಂತನ್ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿರುವ 'ಚಕ್ರವರ್ತಿ' ಸಿನಿಮಾದಲ್ಲಿ ದಕ್ಷಿಣ ಭಾರತದ ಖ್ಯಾತ ನಟಿ ಅಂಜಲಿ ಅವರು ದರ್ಶನ್ ಅವರ ಜೊತೆ ಡ್ಯುಯೆಟ್ ಹಾಡಲಿದ್ದಾರೆ. ಈ ಮೂಲಕ ಅಂಜಲಿ ಅವರು ಸ್ಯಾಂಡಲ್ ವುಡ್ ಕ್ಷೇತ್ರದಲ್ಲಿ ತಮ್ಮ ಮೂರನೇ ಇನ್ನಿಂಗ್ಸ್ ಆರಂಭ ಮಾಡಿದ್ದಾರೆ.[ದರ್ಶನ್ ಅವರ 'ಚಕ್ರವರ್ತಿ' ಚಿತ್ರದ ನಾಯಕಿ ಇವರೇ]


ಇನ್ನುಳಿದಂತೆ ವಿಶೇಷವಾಗಿ ಈ ಸಿನಿಮಾದಲ್ಲಿ ದರ್ಶನ್ ಅವರ ಸೋದರ ದಿನಕರ್ ತೂಗುದೀಪ್ ಅವರು ವಿಲನ್ ಪಾತ್ರದಲ್ಲಿ ಮಿಂಚಿದರೆ, ದರ್ಶನ್ ಅವರ ಕುಚಿಕು ಗೆಳೆಯ ಆದಿತ್ಯ ಅವರು ವಿಶೇಷ ಪಾತ್ರದಲ್ಲಿ ಮಿಂಚಲಿದ್ದಾರೆ.[ಮತ್ತೆ ತೆರೆಯ ಮೇಲೆ ಒಂದಾಗ್ತಾರಾ ಕುಚಿಕು ಗೆಳೆಯರು.?]


ಅಂದಹಾಗೆ ಈ ಬಾರಿ ದರ್ಶನ್ ಅವರ 'ಚಕ್ರವರ್ತಿ' ಸಿನಿಮಾದಲ್ಲಿ ಹಲವಾರು ವಿಶೇಷತೆಗಳಿವೆ. ಯಾವಾಗಲೂ ದರ್ಶನ್ ಅವರ ಚಿತ್ರಕ್ಕೆ ವಿ.ಹರಿಕೃಷ್ಣ ಅವರು ಸಂಗೀತ ನಿರ್ದೇಶನ ಮಾಡಿದರೆ, ಈ ಚಿತ್ರಕ್ಕೆ ಅರ್ಜುನ್ ಜನ್ಯ ಅವರು ಮ್ಯೂಸಿಕ್ ಕಂಪೋಸ್ ಮಾಡಲಿದ್ದಾರೆ. 'ಸ್ನೇಹನಾ ಪ್ರೀತಿನಾ' ಚಿತ್ರಕ್ಕೆ ಬಂಡವಾಳ ಹೂಡಿದ್ದ ಅಣಜಿ ನಾಗರಾಜ್ ಅವರು ಬಂಡವಾಳ ಹೂಡಲಿದ್ದಾರೆ. (ಚಿತ್ರದ ಮುಹೂರ್ತ ಸಮಾರಂಭದ ಫೋಟೋ ಗ್ಯಾಲರಿ ನೋಡಿ..)


-
-
-
-
-
-
-
-
-
-
English summary
Kannada Actor Darshan starrer Kannada Movie 'Chakravarthy' muhoortha was held in Chamundeshwari Temple Mysuru on May 23rd. 'Chakravarthy' is directed by Chintan.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada