Don't Miss!
- Automobiles
ಈ ವರ್ಷವೇ ಖರೀದಿಗೆ ಸಿಗಲಿರುವ ಟಾಪ್ 5 ಎಲೆಕ್ಟ್ರಿಕ್ ಕಾರುಗಳು
- Sports
Ranji Trophy: ಕರ್ನಾಟಕ ಮಾರಕ ಬೌಲಿಂಗ್ : 164 ರನ್ಗಳಿಗೆ ಜಾರ್ಖಂಡ್ ಆಲೌಟ್
- News
ಹೊಸ ಘಟಕ, ಪದಾಧಿಕಾರಿ ಘೋಷಣೆ, ಶೀಘ್ರವೇ ಚುನಾವಣೆ ಅಭ್ಯರ್ಥಿ ಆಯ್ಕೆ ಆರಂಭ: AAP
- Finance
Union Budget 2023: ತೆರಿಗೆದಾರರಿಗೆ ದೀರ್ಘಾವಧಿ ತೆರಿಗೆ ವಿನಾಯಿತಿ ಘೋಷಿಸಿ: KPMG
- Lifestyle
ಆ್ಯಪಲ್ ಶೇಪ್ನ ದೇಹ ಹೊಂದಿರುವವರಿಗೆ ಹೆಚ್ಚಾಗಿ ಕಾಯಿಲೆ ಬೀಳುತ್ತಾರೆ, ಏಕೆ?
- Technology
ಮೆಸೆಂಜರ್ಗಾಗಿ ಕೆಲವು ಫೀಚರ್ಸ್ ಪರಿಚಯಿಸಿದ ಮೆಟಾ; ಬಳಕೆದಾರರಿಗೆ ಸಾಕಷ್ಟು ಅನುಕೂಲ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ಕ್ರಾಂತಿ': ನಟ ದರ್ಶನ್ ಹೈದರಾಬಾದ್‌ನಲ್ಲಿ ಮಸ್ತ್ ಆ್ಯಕ್ಷನ್ ಶೂಟಿಂಗ್!
'ರಾಬರ್ಟ್' ಸಿನಿಮಾದ ಯಶಸ್ಸಿನ ನಂತರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೈಗೆತ್ತಿಕೊಂಡಿರುವ ಚಿತ್ರ 'ಕ್ರಾಂತಿ'. ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಈ ಚಿತ್ರ ಅಧಿಕೃತವಾಗಿ ಘೋಷಣೆಯಾಗಿದೆ. 'ಯಜಮಾನ' ಚಿತ್ರದ ನಿರ್ಮಾಪಕಿ ಶೈಲಾಜ ನಾಗ್ 'ಕ್ರಾಂತಿ' ಚಿತ್ರವನ್ನು ನಿರ್ಮಿಸುತ್ತಿದ್ದಾರೆ.
Recommended Video

ಇದು ದರ್ಶನ್ 55ನೇ ಸಿನಿಮಾ ಎನ್ನುವುದು ವಿಶೇಷ. ಈಗಾಗಲೇ ಚಿತ್ರದ ಫಸ್ಟ್ ಲುಕ್ ಪೋಸ್ಟರ್, ಟೀಸರ್ ರಿಲೀಸ್ ಆಗಿದ್ದು, ದೊಡ್ಡ ಮಟ್ಟದಲ್ಲಿ ಟ್ರೆಂಡ್ ಹುಟ್ಟು ಹಾಕಿದೆ. ದರ್ಶನ್ ಈ ಚಿತ್ರದಲ್ಲಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸಿನಿಮಾ ಕಥೆಯ ಮೂಲಕ ಹೊಸದೊಂದು ಕ್ರಾಂತಿಯನ್ನೇ ಮಾಡಲು ಹೊರಟಿದ್ದಾರೆ.
KGF
Chapter
2
:
'ಕೆಜಿಎಫ್
2'
ಬಗ್ಗೆ
ಕನ್ನಡ
ನಟರ
ಮೌನವೇಕೆ?
ಜನರ
ಪ್ರಶ್ನೆ!
'ಕ್ರಾಂತಿ' ಚಿತ್ರದ ಮೂಲಕ ಚಿತ್ರರಂಗದಲ್ಲಿ ದರ್ಶನ್ ಹೊಸ ಕ್ರಾಂತಿ ಮಾಡಲು ಹೊರಟಿದ್ದಾರೆ. ಸದ್ಯ ಚಿತ್ರದ ಬಗ್ಗೆ ಹೊಸ ಅಪ್ಡೇಟ್ ಸಿಕ್ಕಿದೆ. ಕ್ರಾಂತಿ ಟೀಮ್ ಮತ್ತೊಂದು ಹಂತದ ಶೂಟಿಂಗ್ ಆರಂಭಿಸಿದೆ. ಈ ಹಂತದಲ್ಲಿ ದರ್ಶನ್ ಆಕ್ಷನ್ ದೃಶ್ಯಗಳಲ್ಲಿ ಅಭಿನಯಿಸಲಿದ್ದಾರೆ.

ಹೈದರಾಬಾದ್‌ನಲ್ಲಿ ದರ್ಶನ್ 'ಕ್ರಾಂತಿ' ಚಿತ್ರೀಕರಣ!
'ಕ್ರಾಂತಿ ಚಿತ್ರದ ಶೂಟಿಂಗ್ ಈಗಾಗಲೇ ಆರಂಭ ಆಗಿದೆ. ಮೊದಲ ಹಲವು ದಿನಗಳ ಶೂಟಿಂಗ್ ಮುಗಿಸಿದೆ ಚಿತ್ರ ತಂಡ. ಈಗ ಮುಂದಿನ ಹಂತದ ಚಿತ್ರೀಕರಣಕ್ಕಾಗಿ 'ಕ್ರಾಂತಿ' ತಂಡ ಹೈದರಾಬಾದ್‌ಗೆ ತೆರಳಿದೆ. ಈ ಹಿಂದೆಯೂ ಹೈದರಾಬಾದ್‌ನಲ್ಲಿ ಕೆಲವು ದಿನಗಳ ಶೂಟಿಂಗ್ ಮಾಡಲಾಗಿತ್ತು. ಚಿಕ್ಕದೊಂದು ಶೆಡ್ಯೂಲ್ ಮುಗಿಸಿದ ಕ್ರಾಂತಿ ತಂಡ ಈಗ ಮತ್ತೇ ಆ್ಯಕ್ಷನ್ ದೃಶ್ಯಗಳ ಚಿತ್ರೀಕರಣಕ್ಕಾಗಿ ಹೈದರಾಬಾದ್‌ಗೆ ತೆರಳಿದೆ.
Boss
Title:
ದರ್ಶನ್,
ಯಶ್
ಇಬ್ಬರಲ್ಲಿ
'ಬಾಸ್'
ಯಾರು?
ಸ್ಯಾಂಡಲ್ವುಡ್ನಲ್ಲಿ
ಹೊಸ
ಚರ್ಚೆ!

ಹೈದರಾಬಾದ್‌ನಲ್ಲಿ ದರ್ಶನ್ ಮಸ್ತ್ ಆ್ಯಕ್ಷನ್!
ಸದ್ಯ ಹೈದರಾಬಾದ್‌ನಲ್ಲಿ 'ಕ್ರಾಂತಿ' ಚಿತ್ರದ ಶೂಟಿಂಗ್ ಭರ್ಜರಿಯಾಗಿ ಸಾಗಿದೆ. ಹೈದರಾಬಾದ್‌ನಲ್ಲಿ ನಟ ದರ್ಶನ್ ವಿಲನ್‌ಗಳ ಜೊತೆಗೆ ಕಾಳಗ ನಡೆಸಿದ್ದಾರೆ. ಸದ್ಯ ಕ್ರಾಂತಿ ಚಿತ್ರದ ಫೈಟ್ ಸೀಕ್ವೆನ್ಸ್ ನಡೆಯುತ್ತಿದೆ. ಇದಕ್ಕಾಗಿ ನಟ ದರ್ಶನ್ ವರ್ಕೌಟ್ ಮಾಡಿ ದೇಹವನ್ನು ದಂಡಿಸಿದ್ದಾರೆ. ಹೈದರಾಬಾದ್‌ನಲ್ಲಿ ಇರುವ ದರ್ಶನ್ ಫೋಟೊ ಒಂದು ಸಾಮಾಜಿಕ ಜಾಲತಾಣದಲ್ಲಿ ರಿವೀಲ್ ಆಗಿ, ವೈರಲ್ ಲಿಸ್ಟ್ ಸೇರಿದೆ.

ಅಕ್ಷರ ಕ್ರಾಂತಿ ಮಾಡಲಿರುವ 'ಕ್ರಾಂತಿ'!
'ಯಜಮಾನ' ಸಿನಿಮಾ ಮೂಲಕ ದರ್ಶನ್ ಸಂದೇಶ ಒಂದನ್ನು ಕೊಟ್ಟಿದ್ದರು. ಈಗ 'ಕ್ರಾಂತಿ' ಚಿತ್ರದ ಮೂಲಕ ಮತ್ತೊಂದು ಕ್ರಾಂತಿ ಮಾಡಲಿದ್ದಾರೆ. ಈ ಚಿತ್ರದ ಕಥೆಯ ಬಗ್ಗೆ ಮಾತನಾಡಿದ ನಿರ್ಮಾಪಕಿ ಶೈಲಜಾನಾಗ್ ಈ ಚಿತ್ರ ಅಕ್ಷರ ಕ್ರಾಂತಿ ಮಾಡುತ್ತದೆ ಎಂದು ಹೇಳಿದ್ದಾರೆ. ಅಂದರೆ ಈ ಚಿತ್ರದಲ್ಲಿ ನಟ ದರ್ಶನ್ ಮಾಸ್ ಎನ್ನುವ ಕ್ಲೀಷೆಯನ್ನು ಬಿಟ್ಟು ಹೊಸದೇನನ್ನೋ ಪ್ರಯತ್ನ ಮಾಡುತ್ತಿದ್ದಾರೆ ಎನ್ನುವ ಸೂಚನೆ ಸಿಕ್ಕಿದೆ. ಮಾಸ್ ಮಸಾಲ ಹೊರತಾಗಿಯು ದರ್ಶನ್ ಸಿನಿಮಾಗಳು ಗೆದ್ದು ಬೀಗುತ್ತವೆ. ಈ ಕ್ರಾಂತಿ ಕೂಡ ಅಂತಹದ್ದೇ ಸಿನಿಮಾ ಆಗಬಹುದು ಎನ್ನುವ ಸೂಚನೆ ಸಿಕ್ಕಿದೆ.
Darshan
Kranti:
ದರ್ಶನ್
'ಕ್ರಾಂತಿ'
ಅಡ್ಡಾದಲ್ಲಿ
ಏನ್
ನಡೀತಿದೆ?
ರಿಲೀಸ್
ಅಪ್ಡೇಟ್
ಇಲ್ಲಿದೆ!

'ಕ್ರಾಂತಿ' ಎಂಟ್ರಿ 'ಮದಕರಿ ನಾಯಕ' ಔಟ್!
ದರ್ಶನ್ ನಟನೆಯ ಈ ಹಿಂದಿನ ಸಿನಿಮಾ 'ರಾಬರ್ಟ್' ದೊಡ್ಡ ಯಶಸ್ಸು ಗಳಿಸಿದೆ. ಅದಾದ ಬಳಿಕ 'ರಾಜವೀರ ಮದಕರಿ ನಾಯಕ' ಸಿನಿಮಾದ ಚಿತ್ರೀಕರಣ ಆರಂಭಿಸಿದ್ದರು ದರ್ಶನ್. ಆದರೆ ಆ ಸಿನಿಮಾದ ಚಿತ್ರೀಕರಣವನ್ನು ನಿಲ್ಲಿಸಲಾಗಿದೆ. 'ರಾಜವೀರ ಮದಕರಿ ನಾಯಕ' ಸಿನಿಮಾವನ್ನು ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ನಿರ್ದೇಶನ ಮಾಡುತ್ತಿದ್ದು, ರಾಕ್‌ಲೈನ್ ವೆಂಕಟೇಶ್ ನಿರ್ಮಾಣ ಮಾಡುತ್ತಿದ್ದಾರೆ. ಹಾಗಾಗಿ ಈಗ ಕ್ರಾಂತಿ ಸಿನಿಮಾವನ್ನು ದರ್ಶನ್ ಆರಂಭಿಸಿದ್ದು, ಶೂಟಿಂಗ್‌ನಲ್ಲಿ ಬ್ಯೂಸಿ ಆಗಿದ್ದಾರೆ.