Don't Miss!
- Finance
Padma Awards 2023: ವ್ಯಾಪಾರ ಕ್ಷೇತ್ರದಲ್ಲಿ ಪದ್ಮ ಪ್ರಶಸ್ತಿ ಪುರಸ್ಕೃತರು ಯಾರು?
- News
Kamal Haasan: ಕಾಂಗ್ರೆಸ್ನಿಂದ ಕಣಕ್ಕಿಳಿಯಲಿದ್ದಾರಾ ಕಮಲ್ ಹಾಸನ್? ಅವರ ಮಾತು ಇಲ್ಲಿದೆ
- Sports
U-19 Women's World Cup 2023: ಸೆಮಿಫೈನಲ್ ಪ್ರವೇಶಿಸಿದ ಭಾರತಕ್ಕೆ ನ್ಯೂಜಿಲೆಂಡ್ ಎದುರಾಳಿ
- Lifestyle
Horoscope Today 26 Jan 2023: ಗುರುವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Technology
WhatsApp: ವಾಟ್ಸಾಪ್ ಮ್ಯಾಕ್ಒಎಸ್ MacOS ಆ್ಯಪ್ ಬಿಡುಗಡೆ! ಇದನ್ನು ಬಳಸುವುದು ಹೇಗೆ?
- Automobiles
ಬೊಲೆರೊ ನಿಯೋ ಲಿಮಿಟೆಡ್ ಎಡಿಷನ್ ಕುರಿತ ಟಾಪ್ ವಿಷಯಗಳಿವು
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Kranti Celebration: ಥಿಯೇಟರ್ ಅಂಗಳದಲ್ಲಿ ಅಭಿಮಾನೋತ್ಸವ: 'ಕ್ರಾಂತಿ' ರಿಲೀಸ್ ಸೆಲೆಬ್ರೇಷನ್ ಹೇಗಿತ್ತು?
ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ 'ಕ್ರಾಂತಿ' ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ತಿದೆ. ಬೆಳ್ಳಂ ಬೆಳಗ್ಗೆ ಪ್ರೇಕ್ಷಕರು ಮುಗಿಬಿದ್ದು ಸಿನಿಮಾ ನೋಡಿದ್ದಾರೆ. ಇನ್ನು ಥಿಯೇಟರ್‌ಗಳಲ್ಲಿ ಸಿನಿಮಾ ರಿಲೀಸ್ ಸೆಲೆಬ್ರೇಷನ್ ಜೋರಾಗಿತ್ತು. ಹಬ್ಬದ ರೀತಿ ಅಭಿಮಾನಿಗಳು ಚಿತ್ರವನ್ನು ಸ್ವಾಗತಿಸಿದ್ದಾರೆ.
ಕ್ರೇಜ್‌ಗೆ ತಕ್ಕಂತೆ 'ಕ್ರಾಂತಿ' ಸಿನಿಮಾ ಅಡ್ವಾನ್ಸ್ ಬುಕ್ಕಿಂಗ್ ನಡೆದಿತ್ತು. 2 ದಿನ ಮೊದಲೇ ಲಕ್ಷ ಲಕ್ಷ ಟಿಕೆಟ್‌ಗಳು ಸೋಲ್ಡೌಟ್ ಆಗಿತ್ತು. ಇನ್ನು ದರ್ಶನ್ ಅಭಿಮಾನಿಗಳಲ್ಲಿ ಇಂದೇ ದೀಪಾವಳಿ, ಯುಗಾದಿ ಸಂಭ್ರಮ ಮನೆ ಮಾಡಿತ್ತು. ಥಿಯೇಟರ್ ಅಂಗಳದಲ್ಲಿ ಅಭಿಮಾನಿಗಳ ಅಭಿಮಾನೋತ್ಸವ ಜೋರಾಗಿತ್ತು. ಕಟೌಟ್, ಬ್ಯಾನರ್, ಸ್ಟಾರ್‌ಗಳನ್ನು ಕಟ್ಟಿ ಥಿಯೇಟರ್‌ಗಳನ್ನು ಸಿಂಗರಿಸಿದ್ದರು. ಕೆಲ ಚಿತ್ರಮಂದಿರಗಳಲ್ಲಿ ರಾತ್ರಿಯಿಂದಲೇ ಸಂಭ್ರಮಾಚರಣೆ ಶುರುವಾಗಿತ್ತು. ಬಹಳ ದೊಡ್ಡಮಟ್ಟದಲ್ಲಿ 'ಕ್ರಾಂತಿ' ರಾಯಣ್ಣನನ್ನು ಅಭಿಮಾನಿಗಳು ಬರಮಾಡಿಕೊಂಡಿದ್ದಾರೆ.
ಬರೀ ಥಿಯೇಟರ್ ಹೊರಗೆ ಮಾತ್ರವಲ್ಲ, ಥಿಯೇಟರ್ ಒಳಗೆ ಸಿಲ್ವರ್ ಸ್ಕ್ರೀನ್ ಎದುರು ಕೂಡ ಅಭಿಮಾನಿಗಳು ಕುಣಿದು ಕುಪ್ಪಳಿಸಿದ್ದಾರೆ. ಜೈಕಾರ ಹಾಕಿ ಸಂಭ್ರಮಿಸಿದ್ದಾರೆ. ಸಿನಿಮಾ ನೋಡಿ ಖುಷಿಯಾಗಿದ್ದಾರೆ.

'ಕ್ರಾಂತಿ' ಸೆಲೆಬ್ರೇಷನ್ ಜೋರು
ರಾಜ್ಯಾದ್ಯಂತ ಬಹಳ ಅದ್ಧೂರಿಯಾಗಿ 'ಕ್ರಾಂತಿ' ಸಿನಿಮಾ ರಿಲೀಸ್ ಆಗಿದೆ. ದಾಖಲೆ ಸಂಖ್ಯೆಯ ಅರ್ಲಿ ಮಾರ್ನಿಂಗ್ ಶೋಗಳು ಏಪರ್ಡಿಸಲಾಗಿತ್ತು. ಬರೀ ಬೆಂಗಳೂರಿನಲ್ಲಿ 600ಕ್ಕೂ ಅಧಿಕ ಶೋಗಳಲ್ಲಿ 'ಕ್ರಾಂತಿ' ದರ್ಶನವಾಗಲಿದೆ. ಅದರಲ್ಲಿ 100 ಕ್ಕೂ ಅಧಿಕ ಶೋಗಳು ಸೋಲ್ಡೌಟ್ ಆಗಿದೆ. ಬೆಂಗಳೂರು ಬಿಟ್ಟತೆ ಮೈಸೂರಿನಲ್ಲಿ ಹೆಚ್ಚು ಶೋಗಳು ಸಿಕ್ಕಿದೆ. ರಾಜ್ಯದ ಮೂಕೆ ಮೂಲೆಯಲ್ಲಿ ದರ್ಶನ್ ಅಭಿಮಾನಿಗಳ ಬಳಗ ಇದೆ. ಎಲ್ಲಾ ಥಿಯೇಟರ್‌ಗಳಲ್ಲೂ ಭರ್ಜರಿ ಸಂಭ್ರಮಾಚರಣೆ ಮಾಡಿದ್ದಾರೆ. ಕಟೌಟ್, ಬ್ಯಾನರ್ ಕಟ್ಟಿ ಪಟಾಕಿ ಸಿಡಿಸಿ, ಜೈಕಾರ ಹಾಕಿ ಸಂಭ್ರಮಿಸಿದ್ದಾರೆ.

ಕುಂದಾಪುರದಲ್ಲಿ 50 ಅಡಿ ಕಟೌಟ್
ಕರಾವಳಿ ಭಾಗದಲ್ಲಿ ಕನ್ನಡ ಸಿನಿಮಾಗಳು ಅಷ್ಟಾಗಿ ಸದ್ದು ಮಾಡಲ್ಲ ಎನ್ನುವ ಮಾತಿದೆ. ಆದರೆ ಕ್ರಾಂತಿ ಚಿತ್ರಕ್ಕೆ ಅಲ್ಲೂ ಅದ್ಬುತ ಪ್ರತಿಕ್ರಿಯೆ ಸಿಕ್ತಿದೆ. ಕುಂದಾಪುರದಲ್ಲಿ ಥಿಯೇಟರ್ ಮುಂದೆ 50 ಅಡಿ ದರ್ಶನ್ ಕಟೌಟ್ ನಿಲ್ಲಿಸಿ ಅಭಿಮಾನಿಗಳು ಸಂಭ್ರಮಿಸಿದ್ದಾರೆ. ಕುಂದಾಪುರದಲ್ಲಿ ದೊಡ್ಡಮಟ್ಟದಲ್ಲಿ 'ಕ್ರಾಂತಿ' ಸಿನಿಮಾ ಬಿಡುಗಡೆಯಾಗಿದೆ. ಅದಕ್ಕೆ ತಕ್ಕಂತೆ ಬುಕ್ಕಿಂಗ್, ಸೆಲೆಬ್ರೇಷನ್ ಎಲ್ಲವೂ ಇತ್ತು.

ಶಾಲೆಯಂತಾದ ಚಿತ್ರಮಂದಿರ
ಬೆಂಗಳೂರು ದಕ್ಷಣ ಭಾಗದ ಜೆಪಿ ನಗರದಲ್ಲಿ ಅಭಿಮಾನಿಗಳ ಸಂಭ್ರಮ ಜೋರಾಗಿತ್ತು. ಸಿದ್ದೇಶ್ವರ ಥಿಯೇಟರ್ ಅಂಗಳದಲ್ಲಿ ದೊಡ್ಡಮಟ್ಟದಲ್ಲಿ ಸಂಭ್ರಮಾಚರಣೆ ಮಾಡಿದ್ದಾರೆ. ಥಿಯೇಟರ್ ಮುಂಭಾಗವನ್ನು 'ಕ್ರಾಂತಿ' ಸಿನಿಮಾ ಥೀಮ್‌ಗೆ ತಕ್ಕಂತೆ ಶಾಲೆಯ ರೂಪದಲ್ಲಿ ಸಿಂಗರಿಸಿದ್ದರು. ಕಟೌಟ್ ನಿಲ್ಲಿಸಿ ಜಗಮಗಿಸುವ ವಿದ್ಯುತ್ ದೀಪಗಳಿಂದ ಅಲಂಕರಿಸಿದ್ದರು. ರಾತ್ರಿಯಿಂದಲೇ ಅನ್ನದಾನ ಆರಂಭಿಸಿದ್ದರು. ಇನ್ನು ಬೆಳಗ್ಗೆ ಪಟಾಕಿ ಸಿಡಿಸಿ, ಜೈಕಾರ ಹಾಕಿ 'ಕಾಂತ್ರಿ' ಚಿತ್ರಕ್ಕೆ ಸ್ವಾಗತ ಕೋರಿದ್ದಾರೆ. ಸಿಲ್ವರ್ ಸ್ಕ್ರೀನ್ ಮೇಲೆ ಹಾಡುಗಳು ಬಂದಾಗಲೆಲ್ಲಾ ಸ್ಕ್ರೀನ್ ಮುಂದೆ ಹೋಗಿ ಕುಣಿದು ಸಂಭ್ರಮಸಿದ್ದಾರೆ.

ಎಲ್ಲೆಲ್ಲಿ ಸಂಭ್ರಮಾಚರಣೆ ಜೋರು?
ಕೆಜಿ ರಸ್ತೆಯ ಮೇನ್ ಥಿಯೇಟರ್ ಅನುಪಮಾ, ಮಾಗಡಿ ರಸ್ತೆಯ ಪ್ರಸನ್ನ ಹಾಗೂ ವೀರೇಶ್, ಧಾರವಾಡದ ವಿಜಯಾ ಸೇರಿದಂತೆ ಹಲವು ಚಿತ್ರಮಂದಿರಗಳಲ್ಲಿ ಕ್ರಾಂತಿ ರಿಲೀಸ್ ಸಂಭ್ರಮಾಚರಣೆ ಜೋರಾಗಿತ್ತು. ಇನ್ನುಳಿದಂತೆ ಮೈಸೂರು, ಬಳ್ಳಾರಿ, ಶಿವಮೊಗ್ಗ, ದಾವಣಗೆರೆ, ಟಿ. ನರಸೀಪುರ, ಚಾಮರಾಜ ನಗರ, ಚನ್ನಪಟ್ಟಣ, ಚಿತ್ರದುರ್ಗದ ಸೇರಿದಂತೆ ರಾಜ್ಯದ ಹಲವೆಡೆ ಥಿಯೇಟರ್‌ಗಳಲ್ಲಿ ದರ್ಶನ್ ಅಭಿಮಾನಿಗಳು 'ಕ್ರಾಂತಿ' ಚಿತ್ರವನ್ನು ಸಡಗರ ಸಂಭ್ರಮದಿಂದ ಸ್ವಾಗತಿಸಿದ್ದಾರೆ. ಕೆಲವೆಡೆ ಕಟೌಟ್‌ಗಳಿಗೆ ಆರತಿ ಬೆಳಗಿದ್ದಾರೆ. ಈಗಾಗಲೇ ಬೆಳ್ಳಂ ಬೆಳಗ್ಗೆ ಅಭಿಮಾನಿಗಳು ಸಿನಿಮಾ ನೋಡಿ ಹೊರಬಂದು ಥಿಯೇಟರ್ ಮುಂದೆ ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ.