Don't Miss!
- News
ಸೆರೆಹಿಡಿಯಲಾದ ಚಿರತೆ, ಹುಲಿಗಳಿಗೆ ಪುನರ್ವಸತಿ ಕೇಂದ್ರಗಳನ್ನು ನಿರ್ಮಿಸಲು ಅರಣ್ಯ ಇಲಾಖೆ ಪ್ರಸ್ತಾಪ
- Automobiles
ಈ ವರ್ಷವೇ ಖರೀದಿಗೆ ಸಿಗಲಿರುವ ಟಾಪ್ 5 ಎಲೆಕ್ಟ್ರಿಕ್ ಕಾರುಗಳು
- Sports
Ranji Trophy: ಕರ್ನಾಟಕ ಮಾರಕ ಬೌಲಿಂಗ್ : 164 ರನ್ಗಳಿಗೆ ಜಾರ್ಖಂಡ್ ಆಲೌಟ್
- Finance
Union Budget 2023: ತೆರಿಗೆದಾರರಿಗೆ ದೀರ್ಘಾವಧಿ ತೆರಿಗೆ ವಿನಾಯಿತಿ ಘೋಷಿಸಿ: KPMG
- Lifestyle
ಆ್ಯಪಲ್ ಶೇಪ್ನ ದೇಹ ಹೊಂದಿರುವವರಿಗೆ ಹೆಚ್ಚಾಗಿ ಕಾಯಿಲೆ ಬೀಳುತ್ತಾರೆ, ಏಕೆ?
- Technology
ಮೆಸೆಂಜರ್ಗಾಗಿ ಕೆಲವು ಫೀಚರ್ಸ್ ಪರಿಚಯಿಸಿದ ಮೆಟಾ; ಬಳಕೆದಾರರಿಗೆ ಸಾಕಷ್ಟು ಅನುಕೂಲ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ಕ್ರಾಂತಿ' ಕಥೆ ಏನು? 'ದರ್ಶನ್' ಪಾತ್ರ ಏನು? ಇಲ್ಲಿದೆ ಉತ್ತರ!
'ರಾಬರ್ಟ್' ಸಿನಿಮಾದ ನಂತರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೈಗೆತ್ತಿಕೊಂಡಿರುವ ಚಿತ್ರ 'ಕ್ರಾಂತಿ'. ಈ ಚಿತ್ರದ ಕೆಲಸಗಳು ಭರದಿಂದ ಸಾಗಿವೆ. ಈಗಾಗಲೇ ಚಿತ್ರದ ಫಸ್ಟ್ ಲುಕ್ ಟೀಸರ್ ಕೂಡ ರಿಲೀಸ್ ಆಗಿದೆ. ದರ್ಶನ್ ಪಾತ್ರದ ಲುಕ್ ಟೀಸರ್‌ನಲ್ಲಿ ರಿವೀಲ್ ಆಗಿದೆ.
ಇದು ದರ್ಶನ್ ಅವರ 55ನೇ ಸಿನಿಮಾ ಎನ್ನುವುದು ವಿಶೇಷ. ಈಗಾಗಲೇ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆಗಿದ್ದು, ದೊಡ್ಡ ಮಟ್ಟದಲ್ಲಿ ಟ್ರೆಂಡ್ ಹುಟ್ಟು ಹಾಕಿದೆ. ದರ್ಶನ್ ಈ ಚಿತ್ರದಲ್ಲಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಹಲವು
ದಿನಗಳ
ಬಳಿಕ
ಒಂದೆ
ಫ್ರೇಮ್‌ನಲ್ಲಿ
ದರ್ಶನ್,
ಸುದೀಪ್:
ಪೋಟೋ
ವೈರಲ್!
Recommended Video

'ರಾಬರ್ಟ್' ಸಿನಿಮಾದ ನಂತರ ನಟ ದರ್ಶನ್ ಯಾವ ಚಿತ್ರದಲ್ಲೂ ಕಾಣಿಸಿಕೊಂಡಿಲ್ಲ. ಹಾಗಾಗಿ ಈ ಚಿತ್ರದ ಮೂಲಕ ದರ್ಶನ್‌ರನ್ನು ಕಣ್ತುಂಬಿ ಕೊಳ್ಳಲು ಅವರ ಅಭಿಮಾನಿಗಳು ಕಾಯುತ್ತಿದ್ದಾರೆ. ಅಷ್ಟಕ್ಕೂ ದರ್ಶನ್ ಈ ಚಿತ್ರದಲ್ಲಿ ಯಾವ ಕ್ರಾಂತಿ ಮಾಡಲು ಹೊರಟಿದ್ದಾರೆ. ಚಿತ್ರದ ಕಥೆ ಏನು ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ ಮುಂದೆ ಓದಿ...
ಪ್ಯಾನ್
ಇಂಡಿಯಾ
ರೇಸ್‌ನಲ್ಲಿ
ಕನ್ನಡ
ಸ್ಟಾರ್
ನಟರು:
ಓಡೋರು
ಯಾರು?
ಬೀಳೋರು
ಯಾರು?

ಸ್ಟೈಲಿಶ್ ಆಗಿ ಕಾಣಿಕೊಂಡ ದರ್ಶನ್!
ನಟ ದರ್ಶನ್ ಫಸ್ಟ್ ಲುಕ್‌ನಲ್ಲಿ ಸಿಕ್ಕಾ ಪಟ್ಟೆ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದರು. ದರ್ಶನ್ ಲುಕ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ನಟ ದರ್ಶನ್ ಸೂಟು, ಬೂಟು ತೊಟ್ಟು ಕಾಣಿಸಿಕೊಂಡಿದ್ದರು. ಇನ್ನು ಟೀಸರ್‌ನಲ್ಲಿ ಕಥೆಯ ಬಗ್ಗೆ ಸಣ್ಣ ಸುಳಿವು ಕೂಡ ಬಿಟ್ಟು ಕೊಡಲಾಗಿದ್ದು, ಶಾಲೆಯ ಮಹತ್ವ ಹೇಳಲಾಗಿತ್ತು.

ಸರ್ಕಾರಿ ಶಾಲೆ ಉಳಿವಿಗೆ ದರ್ಶನ್ ಹೋರಾಟ!
'ಕ್ರಾಂತಿ' ಸಿನಿಮಾ ಯಾವ ವಿಚಾರದ ಬಗ್ಗೆ ಇರಲಿದೆ. ಯಾವುದಕ್ಕಾಗಿ 'ಕ್ರಾಂತಿ' ಆಗುತ್ತಿದೆ ಎನ್ನುವ ವಿಚಾರ ಹೊರ ಬಿದ್ದಿದೆ. ಈ ಚಿತ್ರದಲ್ಲಿ ಸರ್ಕಾರಿ ಶಾಲೆಗಳನ್ನು ಉಳಿಸುವ ಹೋರಾಟ ಇದೆ. ಅವನತಿಯತ್ತ ಸಾಗುತ್ತಿರುವ ಸರ್ಕಾರಿ ಶಾಲೆಗಳನ್ನು ಉಳಿಸುವುದು ಹೇಗೆ ಮತ್ತು ಸರ್ಕಾರಿ ಶಾಲೆಗಳು ಅವನತಿ ಹೊಂದಿದರೆ ಏನೆಲ್ಲಾ ಆಗುತ್ತದೆ ಎನ್ನುವ ಬಗ್ಗೆ 'ಕ್ರಾಂತಿ' ಹೇಳಲಿದೆ.

NRI ಪಾತ್ರದಲ್ಲಿ ನಟ ದರ್ಶನ್!
ಸರ್ಕಾರಿ ಶಾಲೆಯನ್ನು ಉಳಿಸುವ ನಿಟ್ಟಿನಲ್ಲಿ ನಟ ದರ್ಶನ್ ಪಾತ್ರ ಹೋರಾಡುತ್ತೆ. ಚಿತ್ರದಲ್ಲಿ ಎನ್‌ಆರ್‌ಐ ಪಾತ್ರದಲ್ಲಿ ದರ್ಶನ್ ಕಾಣಿಸಿಕೊಳ್ಳಲಿದ್ದಾರೆ. ದರ್ಶನ್ ಇಲ್ಲಿ ತನಕ ಹಲವಾರು ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಈ ಕಥೆಯಲ್ಲಿ ಹೇಗೆ ಕಾಣಿಸಿಕೊಳ್ಳುತ್ತಾರೆ ಎನ್ನುವ ಬಗ್ಗೆ ಕುತೂಹಲ ಮೂಡಿದೆ.

ಟಾಕಿ ಭಾಗ ಮುಗಿಸಿದ ಚಿತ್ರಂಡ!
ಇನ್ನು 'ಕ್ರಾಂತಿ' ಚಿತ್ರದ ಹೊಸ ಅಪ್‌ಡೇಟ್ ಸದ್ಯದಲ್ಲೇ ಸಿಗಲಿದೆ. ಈಗಾಗಲೇ ಚಿತ್ರದ ಟಾಕಿ ಭಾಗದ ಚಿತ್ರೀಕರಣ ಮುಗಿದೆ. ಕೊನೆ ಭಾಗದ ಚಿತ್ರೀಕರಣದಲ್ಲಿ ಸಿನಿಮಾತಂಡ ನಿರತವಾಗಿದೆ. ಇನ್ನು ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಕೂಡ ಭರದಿಂದ ಸಾಗಿವೆ. ಹಾಗಾಗಿ ಸದ್ಯದಲ್ಲೇ ಸಿನಿಮಾ ತಂಡ ಮುಂದಿನ ಅಪ್‌ಡೇಟ್ ನೀಡಲಿದೆ.